ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಭೇಟಿ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು:ರಾಜ್ಯ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಜೆ ರಾಜಭವನದಲ್ಲಿಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿದರು.ಈ ವೇಳೆ ಸ್ಪೀಕರ್ ಅವರು,ಕೆಲವೇ ಕೆಲವು ಸದಸ್ಯರ ಅನುಚಿತವಾಗಿ ವರ್ತನೆ,ಗದ್ದಲದಿಂದಾಗಿ ಸಂಸತ್ತಿನ  ಕಾರ್ಯ ಕಲಾಪಕ್ಕೆ ಪದೇ ಪದೇ ಅಡ್ಡಿ ಆಗದ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲವು ಸದಸ್ಯರ ವರ್ತನೆಯಿಂದಾಗಿ ಸದನದ ಕಾರ್ಯಕಲಾಪ,ಚೆರ್ಚೆ ಯಲ್ಲಿ ಇತರ ಸದಸ್ಯರು ಪಾಲ್ಗೊಳ್ಳಲು ಅಡ್ಡಿಯುಂಟಾಗಿದೆ.ಇದು ರಾಜ್ಯಸಭಾ ಸದಸ್ಯರ ಹಕ್ಕಿಗೆ ಚ್ಯುತಿಯಾಗಲಿದೆ.ಇಂತಹ ಅನುಚಿತ ವರ್ತನೆ ಪ್ರಜಾಪ್ರಭುತ್ವದ ದೇಗುಲವೆಂಬ ಸಂಸತ್ತಿನ ಘನತೆಗೆ ಕುಂದುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಇನ್ನು ಮುಂದೆ ಸದನದ ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸದಂತೆ ತಡೆಯುವ ಅಗತ್ಯ ವಿದೆ ಎಂದು ಸ್ಪೀಕರ್ ಅವರು ಉಪ ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.

ಒಂದು ರಾಷ್ಟ್ರ,ಒಂದು ಚುನಾವಣೆ,ಭಾರತೀಯ ಸಂವಿಧಾನದ ಕುರಿತಂತೆ ಕರ್ನಾಟಕ ವಿಧಾನಸಭೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದ ನ್ನು ಉಪರಾಷ್ಟ್ರಪತಿಯವರಿಗೆ ತಿಳಿಸಿದ ಸ್ಪೀಕರ್ ಅವರು,ಪಕ್ಷಾಂತರದ ಪಿಡುಗಿನ ನಿರ್ಮೂಲನೆಗೆ ಸಂವಿಧಾನದ ಹತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಗತ್ಯವನ್ನೂ ಇದೇ ವೇಳೆ ಪ್ರತಿಪಾದಿಸಿದರು ಎನ್ನಲಾಗಿದೆ.

More News

You cannot copy content of this page