ಡೀಸೆಲ್ ದರ ಹೆಚ್ಚಳ ,ಕೊರೋನಾದಿಂದಾದ ನಷ್ಟ ಪರಿಹಾರಕ್ಕಾಗಿ ಟಾಸ್ಕ್ ಪೋರ್ಸ್ ಸಮಿತಿ ರಚನೆ : ಸಚಿವ ಶ್ರೀರಾಮುಲು

ಬೆಂಗಳೂರು: ಕೊರೋನಾದಿಂದ ಸಂಕಷ್ಟದಲ್ಲಿರುವ ಸಾರಿಗೆ ಇಲಾಖೆ ಯನ್ನು ಲಾಭದಾಯಕವನ್ನಾಗಿ ರೂಪಿಸುವುದೇ ನನ್ನ ಪ್ರಥಮ ಆದ್ಯತೆಯಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಾರಿಗೆ ಇಲಾಖೆಗಳ ನಾಲ್ಕೂ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಎಂಟಿಸಿ,ಕೆಎಸ್ಆರ್‌ಟಿಸಿ,ಎನ್ ಡಬ್ಲ್ಯು ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮದ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ಮಾಡಲಾಗಿದೆ.ಇದರ ಜೊತೆಗೆ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಬಗ್ಗೆ ಚರ್ಚೆ ಮಾಡಿದ್ದೇವೆ.ಪ್ರತಿಯೊಂದು ಇಲಾಖೆಯೂ ಪ್ರಗತಿಯಾಗ ಬೇಕು.ಪ್ರತಿಯೊಂದನ್ನೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಕೋವಿಡ್ ಅಲೆಯ ಬಳಿಕ ಪರಿಸ್ಥಿತಿ ಬಗ್ಗೆ ಕೂಡ ಚರ್ಚಿಸಲಾಗಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು,ಲಾಭದಾಯಕವಾಗಿ ರೂಪಿಸಬೇಕಿದೆ. ಅದಕ್ಕಾಗಿ ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಚೆರ್ಚಿಸಿ ರೂಪು ರೇಷೆ ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕೂ ನಿಗಮಗಳು ಸಾಕಷ್ಟು ನಷ್ಟದಲ್ಲಿದೆ. ಕೆಎಸ್ ಆರ್ ಟಿಸಿ – 427 ಕೋಟಿ ರೂ.,ಬಿಎಂಟಿಸಿ- 548 ಕೋಟಿ ರೂ., ಹೊಸ ಕೆಎಸ್ ಆರ್ ಟಿಸಿ -389 ಕೋಟಿ ರೂ,ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ- 191 ಕೋಟಿ ರೂ.ಒಟ್ಟು 1121 ಕೋಟಿ ರೂ ನಷ್ಟವಾಗಿದೆ. ಜನರಿಗೆ ಹೊರೆಯಾಗದ ರೀತಿ ಲಾಭದಾಯಕವನ್ನಾಗಿ ಇಲಾಖೆಯನ್ನು ಪುನರ್ ರಚಿಸಬೇಕಿದೆ.ಸೇವೆಯ ಜೊತೆಯಲ್ಲಿ ಲಾಭದಾಯಕವಾಗಿ ಮಾಡಬೇಕು.ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದೇನೆ.ಇಷ್ಟು ದೊಡ್ಡ ನಷ್ಟಕ್ಕೆ ಕಾರಣ ಡೀಸಲ್ ದರ ಹೆಚ್ಚಳ. ಅದರ ಜೊತೆಗೆ  ಕೊರೋನಾ ಬಂದ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅವರು ವಿವರಿಸಿದರು.

ಟಾಸ್ಕ್ ಫೋರ್ಸ್ ರಚನೆ : ಸಾರಿಗೆ ಇಲಾಖೆ ನಷ್ಟ ಮತ್ತಿತರ ಸಮಸ್ಯೆಗಳ ಪರಿಶೀಲನೆ ಹಾಗೂ ಪರಿಹಾರಕ್ಕೆ ವಿಶೇಷ  ಟಾಸ್ಕ್ ಫೋರ್ಸ್ ಸಮಿತಿ ಶೀಘ್ರವೇ ರಚನೆ ಮಾಡಲು ಉದ್ದೇಶಿಸಲಾಗಿದೆ.ಜನರಿಗೆ ಅನುಕೂಲ ಅಗುವ ರೀತಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ.ಲಾಭದಾಯಕವಾಗಿ ಮಾಡಲು ಕ್ರಮ ವಹಿಸಲಾಗು ವುದು.ಜನರಿಗೂ ಆತಂಕ ದೂರಮಾಡುವ ಕೆಲಸವೂ ಆಗಬೇಕಿದೆ.ಟೆಕ್ನಾಲಜಿ ಬಳಸಿ ಕ್ಯಾಶ್ ಲೆಸ್ ಟಿಕೆಟ್ ದೊರೆ ಯುವಂತೆ ಮಾಡಬೇಕು.ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನು ಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಬಸ್ ಖರೀದಿ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು,ಟಾಸ್ಕ್ ಫೋರ್ಸ್ ರಚನೆ ಮಾಡುತ್ತಿರುವುದೇ  ಇಂತಹ ವಿಚಾರಗಳಿಗೆ.ನಷ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ ಎಂದರು.ದೂರದ ರಹದಾರಿಗಳಲ್ಲಿ ಡೀಸಲ್ ನಷ್ಟ ಆಗುತ್ತಿದೆ ಎಂಬ ದೂರಿವೆ.ನಷ್ಟ ಕಡಿಮೆ ಮಾಡಲು ಒಂದಷ್ಟು ಯೋಜನೆ ಮಾಡಲಾಗಿದೆ.

2,365 ಸಿಬ್ಬಂದಿಯನ್ನು ಅಂತರ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹೆಚ್ಚು ಎಲೆಕ್ಟ್ರಿಕ್ ಬಸ್ : ಡಿಸೇಲ್ ಬೆಲೆ ಹೆಚ್ಚಳದಿಂದಲೇ ನಷ್ಟ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮುಲು,ಪ್ರಯಾಣಿಕರಿಗೆ ಹೊರೆ ಕಡಿಮೆ ಮಾಡಲು ದರ ಹೆಚ್ಚಳ ಮಾಡಿದ್ದರೆ ಇಲಾಖೆಗೆ ನಷ್ಟವಾ ಗುತ್ತದೆ.ಹೀಗಾಗಿ ಡೀಸಲ್ ಬೆಲೆ ಮಾತ್ರವಲ್ಲ.ವಾಹನ ಚಲಾಯಿಸುವುದ ರಿಂದಲೂ ಆದಾಯಕ್ಕೆ ಖೋತ ವಾಗಲಿದೆ.ಎಲೆಕ್ಟ್ರಾನಿಕ್ ಬಸ್ ಹೆಚ್ಚು ತರುವುದರಿಂದ ನಷ್ಟ ಕಡಿಮೆ ಮಾಡಬಹುದು.ಇಂಧನ ಬೆಲೆ ಇಡೀ ದೇಶದಲ್ಲಿದೆ.ಕಡಿಮೆ ಮಾಡಿ ಅಂತ ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ತಮಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಲಕ್ಷ್ಮಣ ಸವದಿ ಸಾರಿಗೆ ಸಚಿವರಾಗಿದ್ದರು.ನಾನು ಆಗ ಚರ್ಚೆ ಮಾಡಿದ್ದೆ.ಸಾರಿಗೆ ನೌಕರರ ಪರವಾಗಿಯೇ ಇದ್ದೇನೆ.ಕೋವಿಡ್ ಹಿನ್ನೆಲೆಯಲ್ಲಿ ಯಾರೆಲ್ಲ ಸಾವನ್ನಪ್ಪಿದ್ರು ಅವರಿಗೆ ಪರಿಹಾರ ಕೊಡಲು ನಿರ್ಧರಿಸಲಾಗಿತ್ತು.ನಾನಾಗ ಆರೋಗ್ಯ ಇಲಾಖೆ ಸಚಿವನಾಗಿದ್ದೆ.ಇದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಾರಿಗೆ ನೌಕರರಿಗೆ ಈವರೆಗೂ ಸರ್ಕಾರದಿಂದ ಹಣ ಬಿಡುಗಡೆ ಮಾಡಿ‌ ವೇತನ ನೀಡಲಾಗಿದೆ.ಕಳೆದ ವರ್ಷ 1,953 ಕೋಟಿ ರೂ.‌ಹಾಗೂ ಪ್ರಸಕ್ತ ವರ್ಷದಲ್ಲಿ 597 ಕೋಟಿ ರೂ.ಒಟ್ಟಾರೆ 2,551 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ.ನಿನ್ನೆಯಿಂದ ರಾಜ್ಯಾದ್ಯಂತ ಶಾಲೆ ಆರಂಭ ವಾಗಿದೆ.ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ನಲ್ಲಿ ಬಸ್ ಪಾಸ್  ವಿತರಣೆ ಮಾಡಲಾಗುತ್ತಿದೆ.ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಅಪ್ಲೈ ಮಾಡಿ ಬಸ್ ಪಾಸ್  ಪಡೆಯಬಹುದು ಎಂದು ಹೇಳಿದರು.

ಎಸ್ ಸಿ,ಎಸ್ ಟಿ ಮಕ್ಕಳಿಗೆ ಉಚಿತ ಬಸ್ ಪಾಸ್ : ಸಮಾಜ ಕಲ್ಯಾಣ ಇಲಾಖೆಯ ಹಣ ಬಳಸಿಕೊಂಡು ಎಸ್ ಸಿ, ಎಸ್ ಟಿ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು.ಇತರೆ ಮಕ್ಕಳಿಗೆ ರಿಯಾಯಿತಿ ನೀಡ ಲಾಗುವುದು ಎಂದರು.

ಇಂತದ್ದೇ ಖಾತೆ ಬೇಕು ಅನ್ನೋದು ಸರಿಯಲ್ಲ : ಖಾತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಇಂತದ್ದೇ ಖಾತೆ ಬೇಕು ಅನ್ನೋದು ಸರಿಯಲ್ಲ.ಯಾರೂ ಕೂಡ ಅದನ್ನು ಕೇಳಬಾರದು.ಆನಂದ್ ಸಿಂಗ್ ಕೂಡ ನಮ್ಮ ಸ್ನೇಹಿತರು.ಇಬ್ಬರೂ ಫೋನ್‌ನಲ್ಲಿ ಮಾತನಾಡಿ ದ್ದೇವೆ.ಅಧಿಕಾರ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

More News

You cannot copy content of this page