ರಾಜ್ಯಸಭೆ ಕಲಾಪದಲ್ಲಿ ಗದ್ದಲ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ :ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು: ದೇಶದ ಪ್ರಜಾಪ್ರಭುತ್ವದಲ್ಲಿ ಹಿರಿಯರ ಮನೆ ಎಂದು ಗೌರವಿಸುವ ರಾಜ್ಯಸಭೆ ಕಲಾಪದಲ್ಲಿ ನಡೆದ ಘಟನೆ ದೇಶದ ಗೌರವಕ್ಕೆ ಧಕ್ಕೆ ತಂದಿದೆ.ಘಟನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಅಂತಹವರ ವಿರುದ್ಧ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪರಾಷ್ಟ್ರ ಪತಿ ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.

ರಾಜಭವನದಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕ ಚೆರ್ಚಿಸಿದ ಅವ ರು,ಈ ಘಟನೆಯಲ್ಲಿ ತಪ್ಪು ಮಾಡಿರುವವರ ವಿರುದ್ಧ ಕ್ರಮಕ್ಕೆ ತಗೆದುಕೊ ಳ್ಳಲು ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ ಎಂದು ರಾಜ್ಯಸಭಾ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿಳಿಸಿದರು.16 ದಿನ ನಡೆದ ಕಲಾಪದಲ್ಲಿ ಒಂದು ದಿನವೂ ರಾಜ್ಯಸಭೆಯ ಕಲಾಪದನ್ನು ಸುಸೂತ್ರವಾಗಿ ನಡೆಸಲು ಬಿಡಲಿಲ್ಲ.ಕೆಲ ಸಂಸದರು ಮೇಜಿನ ಮೇಲೆ ಹತ್ತಿದ್ದರು,ಕುಣಿದಾಡಿ ದರು,ಬಿಲ್‌ಗಳು,ಕಾಗದ ಪ್ರತಗಳನ್ನು ಹರಿದು ಬಿಸಾಡಿದರು.ಇನ್ನು ಕೆಲವರು ಹಿರಿಯ ಅಧಿಕಾರಿಗಳ ಕುರ್ಚಿಗಳ  ಮೇಲೆರಿ ದುರ್ವರ್ತನೆ ತೋರಿದರು.ಸದನದಲ್ಲಿ ಕೆಲವರು ಮಾಡಿದ್ದು, ಅಂತಹವರ ವಿರುದ್ಧ ಕ್ರಮವಹಿಸುವಂತೆ ಹಿರಿಯ ಸದಸ್ಯರು ಮನವಿ ಸಲ್ಲಿಸಿದ್ದಾರೆ.ಈ ಬಗ್ಗೆ ಹಿಂದಿನ ಸಭಾಧ್ಯಕ್ಷರು,ನಿವೃತ್ತ ಸೆಕ್ರೆಟರಿ ಜನರಲ್‌ಗಳೊಂದಿಗೆ ಚರ್ಚೆ ನಡೆಸಿದ್ದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು.

ರಾಜ್ಯಸಭೆಯಲ್ಲಿ ಇಂತಹಾ ವರ್ತನೆಗಳು ಹಿಂದೆಂದೂ ಆಗಿರಲಿಲ್ಲ. ಮೇಲ್ಮನೆ ಎನಿಸಿರುವ ರಾಜ್ಯಸಭೆಯನ್ನು ವಿದ್ಯಾರ್ಥಿಗಳು,ಮಕ್ಕ ಳು,ಸಾರ್ವಜನಿಕರು ನೋಡುತ್ತಿರುತ್ತಾರೆ.ವಿದೇಶದಲ್ಲಿರುವವರೂ ಕಲಾಪವನ್ನು ಗಮನಿಸಿದ್ದಾರೆ.ಇದನ್ನೂ ಲೆಕ್ಕಿಸದೇ ದುರ್ವರ್ತನೆ ತೋರಿರುವುದು ದುರದೃಷ್ಟಕರ.ಇದರಿಂದ ನಾನು ಬೇಸರಕ್ಕೆ ಒಳಗಾಗಿ ಹಲವಾರು ದಿನ ಖಿನ್ನತೆ ತಮ್ಮನ್ನು ಕಾಡಿತ್ತು ಎಂದು ಆತಂಕ ಹಾಗೂ ಬೇಸರವನ್ನು ವ್ಯಕ್ತಪಡಿಸಿದರು.

ಆರೇಳು ನಿಮಿಷದಲ್ಲಿ ಬಿಲ್ ಪಾಸ್ ಆಗುವುದು ಸರಿಯಲ್ಲ.ಈ ಬಗ್ಗೆ ಚರ್ಚೆಯೇ ಆಗುವುದಿಲ್ಲ.ಇದು ಸಹ ಒಳ್ಳೆಯ ಪದ್ಧತಿಯಲ್ಲ.ಆಡಳಿತ ಪಕ್ಷ ಬಿಲ್ ಮಂಡಿಸಿದಾಗ,ಪ್ರತಿಪಕ್ಷದ ಸದಸ್ಯರು ಈ ಬಿಲ್ ಬಗ್ಗೆ ಚೆರ್ಚೆ ನಡೆಸಬೇಕು.ಆದರೆ ಯಾರೂ ಮಾತನಾಡುವುದಕ್ಕೆ ತಯಾರಿಲ್ಲದಿದ್ದರೆ ಏನು ಮಾಡಲು ಆಗುತ್ತದೆ? ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸದನದ ಕಲಾಪದಲ್ಲಿ ಪ್ರತಿಪಕ್ಷದವರು ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾರೆ.ಆದರೆ ಶೂನ್ಯ ವೇಳೆ,ಪ್ರಶ್ನೋತ್ತರ ವೇಳೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರೂ ಗಲಾಟೆ ಮಾಡು ವದಕ್ಕೆ ಆದ್ಯತೆ ನೀಡದರೆ ನಾವೂ ಏನು ಮಾಡಲು ಸಾಧ್ಯ?.ಹಾಗೆಂದ ಮಾತ್ರಕ್ಕೆ ಎಲ್ಲ ಸಂಸದರು ಈ ರೀತಿ ನಡೆದುಕೊಂಡಿಲ್ಲ.ಕೆಲವರು ಈ ರೀತಿ ಮಾಡುತ್ತಾರೆ.ಇದರಿಂದ ಇಡೀ ರಾಜ್ಯಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಅವರು ಅಸಮಾಧಾನದಿಂದಲೇ ನುಡಿದರು.

ಕೇಂದ್ರ ಆರೋಗ್ಯ ಸಚಿವರು ಕರ್ನಾಟಕಕ್ಕೆ ಹೆಚ್ಚುವರಿ ಲಸಿಕೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಕ್ಕೆ ಕೋವಿಡ್ ಲಸಿಕೆ ಹಂಚಿಕೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು.ಈ ಸಂಬಂಧ ವೆಂಕಯ್ಯ ನಾಯ್ಡು ಅವರು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಕೂಡಲೇ ಶೇ.25ರಷ್ಟು ಹೆಚ್ಚುವರಿ ಲಸಿಕೆ ಪೂರೈಸುವಂತೆ ಸೂಚಿ ಸಿದ್ದರು.ಅದಕ್ಕೆ ಸಚಿವರೂ ಒಪ್ಪಿಗೆ ನೀಡಿದ್ದಾರೆಂದು ಅವರು ಹೇಳಿದರು.

More News

You cannot copy content of this page