ಗುರುವಾಯೂರು ಶ್ರೀ ಕೃಷ್ಣನ ದರ್ಶನ ಪಡೆದ ಡಾ. ಅಶ್ವತ್ಥನಾರಾಯಣ

ಗುರುವಾಯೂರು: ರಾಜ್ಯದ ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ, ತಂತ್ರಜ್ಞಾನ ಖಾತೆಗಳ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಇಂದು ಕೇರಳದ ಗುರುವಾಯೂರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ದೇಗುಲಕ್ಕೆ ತೆರಳಿದ ಸಚಿವರನ್ನು ದೇವಳದ ಅಧಿಕಾರಿಗಳು ಬರ ಮಾಡಿಕೊಂಡರು. ಬಳಿಕ ಅವರು  ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಿ ಕೃಷ್ಣನ ದರ್ಶನ ಮಾಡಿದರು. ಈ ಸಂದರ್ಭದಲ್ಲಿ, ಇಡೀ ದೇಶ ಮತ್ತು ಜಗತ್ತಿನೆಲ್ಲೆಡೆ ಕೋರೋನ ತಾಂಡವವಾಡುತ್ತಿದೆ, ಈ ಮಾರಿಯನ್ನು ಆದಷ್ಟು ಬೇಗನ್ ತೊಲಗಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು.

ನಂತರ ಅವರು ದೇಗುಲದ ಪ್ರಾಂಗಣದಲ್ಲಿ ದೇವರ ಪಟ್ಟದ ಅನೆಗೆ ಬಾಳೆ ಹಣ್ಣು ತಿನ್ನಿಸಿದರು.

More News

You cannot copy content of this page