ಬೆಂಗಳೂರು – ಜಮೀನಿಗೆ ಗಡಿ ನಿಗದಿ ಮಾಡಲು ಭಾರೀ ಪ್ರಮಾಣಾದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹಾಗೆಯೇ ಸುಮಾರು 25 ಲಕ್ಷ ರೂಪಾಯಿಯನ್ನು ನಗದನ್ನು ವಶಪಡಿಸಿಕೊಂಡಿದ್ದಾರೆ.
ರೆವಿನ್ಯೂ ಡಿಪಾರ್ಟ್ಮೆಂಟ್ ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ ಅಧಿಕಾರಿಯಾಗಿದ್ದ ಆನಂದಕುಮಾರ್ ಹಾಗೂ ಆತನ ಸಹಾಯಕ ಸಿಬ್ಬಂದಿ ರಮೇಶ್ ಬಂಧಿತರಾಗಿದ್ದಾರೆ. ಇವರು ಜಮೀನಿಗೆ ಗಡಿ ನಿಗದಿ ಮಾಡಲು 70 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇವರುಗಳ ವಿರುದ್ಧ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಂದು ಅವರ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಎಸಿಬಿ ಅಧಿಕಾರಿಗಳು ಆನಂದ್ ಮನೆಯಲ್ಲಿ 25.30 ಲಕ್ಷ ನಗದು, 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.