ಅತ್ಯಾಚಾರ ಪ್ರಕರಣ ಆರೋಪಿಗಳ ಪತ್ತೆಯಾಗದಿರುವುದು ತನಿಖೆಗೆ ಹಿನ್ನಡೆ : ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಸಾಮೂಹಿಕ ಅತ್ಯಾಚಾರ ಘಟನೆ ನಡೆದು 48 ಗಂಟೆಯಾದರೂ ಆರೋಪಿಗಳ ಪತ್ತೆ ಹೆಚ್ಚದಿರುವುದು ಪೊಲೀಸ್ ಇಲಾಖೆಗೆ ಹಿನ್ನಡೆಗೆ ಕಾರಣವಾಗಿದೆ ಎಂದು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಪರಿಶೀಲನೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರಿನಂತಹ ದೊಡ್ಡ ನಗರದಲ್ಲಿ ಅತ್ಯಾಚಾರ ನಡೆದಿರುವುದು ಕಳವಳಕಾರಿ ವಿಚಾರವಾಗಿದೆ.ಮೈಸೂರಿನಲ್ಲೇ ಈ ರೀತಿಯಾದರೆ ರಾಜ್ಯದ ಇನ್ನುಳಿದ ಜಿಲ್ಲೆಯಲ್ಲಿ ಜನರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದ್ದಾರೆ.ಹೀಗಾಗಿ ಸರ್ಕಾರ,ಸಚಿವರಾಗಲಿ, ಶಾಸಕರಾಗಲಿ ರಾಜಕೀಯ ಮಾಡುವುದನ್ನು ಬಿಟ್ಟು ಉತ್ತಮ ಆಡಳಿತ ನಡೆಸುವ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ.ಪೊಲೀಸರು ಚುರುಕಿನಿಂದ ಕರ್ತವ್ಯ ನಿರ್ವಹಿಸಿ ಆದಷ್ಟು ಬೇಗ ಆರೋಪಿಗ ಳನ್ನು ಸೆರೆಹಿಡಿದು ಜನರಿಗೆ ಸುರಕ್ಷಿತ ಭಾವನೆ ಬರುವಂತೆ ಮಾಡುವುದು ಪೊಲೀಸರು ಹಾಗೂ ಸರ್ಕಾರದ ಕರ್ತವ್ಯ.ನಗರದಲ್ಲಿ ನಡೆದಿರುವು ಕಳವಳಕಾರಿ ವಿಚಾರ.ಇನ್ನು ಬೇರೆ ನಗರಗಳ ಗತಿ ಏನು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂತಹ ಪ್ರಕರಣದಲ್ಲಿ ಸರ್ಕಾರ ರಾಜಕೀಯ ಮಾಡುವುದನ್ಮು ಬಿಟ್ಟು ಉತ್ತಮ ಆಡಳಿತ ನೀಡುವ ಕಡೆಗೆ ಗಮನ ನೀಡಲಿ.ಅಧಿಕಾರ,ಕುರ್ಚಿಗಾಗಿ ಕಿತ್ತಾಡುವುದನ್ನು ಬಿಟ್ಟು ಸಮರ್ಪಕ ಆಡಳಿತ ನೀಡಿ.ಗೃಹ ಸಚಿವರು ಕೂಡ ಜವಾಬ್ದಾರಿ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಅವರು ಮನವಿ ಮಾಡಿದರು.

ಪ್ರತೀ ಕುಟುಂಬಕ್ಕೆ ನೀಡುತ್ತಿರುವ 5 ಕೆಜಿ ಅಕ್ಕಿ ಸಾಕು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿ ಯಿಸಿದ ಅವರು,ಉಮೇಶ್ ಕತ್ತಿ ಅವರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ,ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 7 ಕೆಜಿ ಅಕ್ಕಿ ಕೊಟ್ಟರೇ ಬಿಜೆಪಿಯವರು 5 ಕೆಜಿಯೇ ಸಾಕು ಎನ್ನುತ್ತಾರೆ.ಬಿಜೆಪಿ ಸರ್ಕಾರ ಜನಪರ,ಬಡವರ ಪರ ಕಾಳಜಿ ಇಲ್ಲವೆಂಬುದನ್ನು ಪ್ರದರ್ಶಿಸಿದೆ ಎಂದು ಲೇವಡಿ ಮಾಡಿದರು.

More News

You cannot copy content of this page