ಬೆಂಗಳೂರು : ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮಾಡುವುದರ ಮೂಲಕ ತಮ್ಮ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅತ್ಯಾಚಾರ ಹೆಣ್ಣಿನ ದೇಹದ ಮೇಲಿನ ಶೋಷಣೆ ಮಾತ್ರವಲ್ಲ, ಅದು ಮನಸ್ಸು, ಆತ್ಮಗೌರವದ ಮೇಲೆ ನಡೆಯುವ ಹೀನಕೃತ್ಯ, ಅತ್ಯಾಚಾರಕ್ಕೊಳಗಾದ ಹೆಣ್ಣು ಮಾನಸಿಕವಾಗಿ ಕುಗ್ಗುತ್ತಾಳೆ, ಸಚಿವರಾದವರು ಸಂತ್ರಸ್ಥೆಗೆ ನೈತಿಕ ಸ್ಥೈರ್ಯ ತುಂಬಬೇಕು, ಆದರೆ ಅವರೇ ಚಾರಿತ್ರ್ಯವಧೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಸ್ತ್ರೀ ಸ್ವಾತಂತ್ರ್ಯದ ವಿರೋಧಿಗಳು, ಸಂವೇದನಾ ರಹಿತ ಹೇಳಿಕೆ ಕೊಡುತ್ತಿದ್ದಾರೆ, ಗೃಹ ಸಚಿವ ಅರಗ ಹೇಳಿಕೆ ಸ್ತ್ರೀ ವಿರೋಧಿ ಮನಸ್ಥಿತಿಯ ಸಂಕೇತವಲ್ಲವೇ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.