ಬೆಂಗಳೂರು: ಅತ್ಯಾಚಾರಿ ಮಾಡುವ ಆರೋಪಿಗಳಿಗೆ ದುಬೈ ಮಾದರಿಯಲ್ಲಿ ಏನೇನು ಕಟ್ ಮಾಡಬೇಕೋ ಅದೆಲ್ಲವನ್ನು ಕಟ್ ಮಾಡಬೇಕು ಎಂದು ಸಚಿವ ಆನಂದ್ ಸಿಂಗ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಅತ್ಯಾಚಾರದಂತಹ ಕೆಲಸವನ್ನು ಯಾರೂ ಮಾಡಬಾರದು.ಒಂದು ವೇಳೆ ದುಷ್ಕೃತ್ಯಕ್ಕೆ ಮುಂದಾದವರಿಗೆ ಏನೇನು ಕಟ್ ಮಾಡಬೇಕೋ ಅದೆಲ್ಲವನ್ನು ಮಾಡಬೇಕು.ದುಬೈ ಮಾದರಿಯಲ್ಲಿ ಶಿಕ್ಷೆ ನೀಡಿದರೆ ಅಪರಾಧಿಗಳಿಗೆ ಭೀತಿ ಹುಟ್ಟಲಿದೆ.ಗೃಹ ಇಲಾಖೆ ನನ್ನ ಖಾತೆಯಲ್ಲ.ಹೀಗಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ.ದುಬೈ ಮಾದರಿಯ ಶಿಕ್ಷೆ ನಮ್ಮ ದೇಶದಲ್ಲಿ ಜಾರಿಗೆ ತರಬೇಕು.ಆದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಹಾಗೆ ನಡೆಯುವುದಿಲ್ಲ ಎಂದು ತಿಳಿಸಿದರು.
ಪಿಒಪಿ ಗಣೇಶ ಸಂಪೂರ್ಣ ನಿಷೇಧಕ್ಕೆ ಚಿಂತನೆ : ಮುಂಬರುವ ವರ್ಷದಿಂದ ಸಂಪೂರ್ಣವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಯನ್ನು ನಿಷೇಧ ಮಾಡಲು ಚಿಂತನೆ ನಡೆಸುತ್ತೇವೆ.ಪಿಒಪಿ ಗಣೇಶನ ಮೂರ್ತಿ ನಿರ್ಮಿಸಿ ಅನೇಕರು ಬದುಕುತ್ತಿದ್ದಾರೆ.ಆದರೆ ಅವರಿಗೂ ಬೇರೆ ವ್ಯವಸ್ಥೆ ಮಾಡಲು ಚಿಂತನೆ ನಡೆಸುತ್ತೇವೆ.ಪಿಓಪಿ ಮೂರ್ತಿ ಮಾರಾಟ ಮಾಡಲು ಮುಂದಾರೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲಿದ್ದಾರೆ.ಮೂರ್ತಿಗಳನ್ನು ವಶಪಡಿಸಿಕೊಳ್ಳುವ ವೇಳೆ ಅಧಿಕಾರಿ ಗಳ ಲೋಪ ಕಂಡು ಬಂದರೆ,ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ.ಹಾಗೂ ಪಿಓಪಿ ಮೂರ್ತಿ ಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಈ ಭಾರಿಯ ಗೌರಿ ಗಣೇಶ ಹಬ್ಬದಲ್ಲಿ ಅರಿಶಿಣ ಗಣೇಶ ಮೂರ್ತಿಯನ್ನು ಬಳಸಬೇಕೆಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ.ಅರಿಶಿಣದಲ್ಲಿ ಆಂಟಿ ಸೆಪ್ಟಿಕ್ ಇರೋದ್ರಿಂದ ಪರಿಸರಕ್ಕೂ ಒಳ್ಳೆಯದು.ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ಕರಗಿಸಿ ಅದನ್ನು ಅಂಗಳಕ್ಕೆ ಹಾಕಿದ್ರೆ ಒಂದು ಧನಾತ್ಮಕ ಪ್ರಭಾವ ಬೀರಲಿದೆ ಎನ್ನುವ ನಂಬಿಕೆ ಇದೆ.ಅರಿಶಿನ ಮೂರ್ತಿಗಳನ್ನು ನಿರ್ಮಿಸಿದ್ದನ್ನು ವೀಕ್ಷಣೆ ಮಾಡುವುದಷ್ಟೇ ಅಲ್ಲ,ಜಾಗೃತಿ ಮೂಡಿಸುವುದು ಹಾಗೂ ಹೆಚ್ಚೆಚ್ಚು ಜನ ಇದನ್ನು ಪಾಲನೆ ಮಾಡಬೇಕಾಗಿದೆ.ಈ ಅಭಿಯಾ ನದಲ್ಲಿ ಭಾಗಿಯಾದ ಜನರಲ್ಲಿ ಯಾರು ಚೆನ್ನಾಗಿ ಮೂರ್ತಿ ಮಾಡಿರುತ್ತಾರೋ ಅವರಿಗೆ ಬಹುಮಾನ ಇಟ್ಟಿದ್ದೇವೆ.ಮೊದಲು,ಎರಡನೇ ಹಾಗೂ ಮೂರನೇ ಬಹುಮಾನ ಇರಲಿದೆ ಎಂದು ಹೇಳಿದರು.
ಅರಿಶಿಣ ಗಣೇಶ ಮೂರ್ತಿಗೆ ಅಭಿಯಾನ : ಈ ಬಾರಿ ಅರಿಶಿಣ ಗಣಪನ ಮೂರ್ತಿ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಪ್ರೇರೇಪಿಸಲು ಅಭಿಯಾನ ನಡೆಸಲಿದ್ದೇವೆ.ಈ ವರ್ಷ 10ಲಕ್ಷ ಅರಿಶಿಣ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗುರಿ ಇದೆ.ಅರಿಶಿಣ ಗಣಪ ತಯಾರಿಸಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡ ಬಹುದು.ಅದಕ್ಕಾಗಿ turmericganesha.com ವೆಬ್ ಸೈಟ್ ಗೆ ಚಾಲನೆ ನೀಡಲಾಗಿದೆ.ಗಣೇಶ ಮೂರ್ತಿ ತಯಾರಕರನ್ನು ಕರೆದು ಅವರ ಬಳಿಯೂ ಚರ್ಚೆ ಮಾಡುತ್ತೇವೆ.ಮುಂಬರುವ ದಿನಗಳಲ್ಲಿ ಅವರ ಬಳಿಯೂ ಮಾತನಾಡುತ್ತೇವೆ ಎಂದರು.
ಸಾರ್ವಜನಿಕ ಗಣೇಶೋತ್ಸವ ವಿಚಾರದಲ್ಲಿ ಗೊಂದಲ ಇದೆ.ಆದರೆ ಇದೆಲ್ಲವೂ ಮುಖ್ಯಮಂತ್ರಿಗೆ ಬಿಟ್ಟ ವಿಚಾರ.ಆದರೆ,ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ನಾವು ಸಾರ್ವಜನಿಕವಾಗಿ ಹಬ್ಬ ಆಚರಿಸುವ ಬಗ್ಗೆ ಯೋಚನೆ ಮಾಡಬೇಕು.ಮನೆಯಲ್ಲಿಯೂ ಹಬ್ಬವನ್ನು ಆಚರಿಸಿಕೊಳ್ಳಬಹುದು.ಮುಖ್ಯಮಂತ್ರಿ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿ ದೆಹಲಿಯಿಂದ ವಾಪಸ್ಸಾದ ಬಗ್ಗೆ ಪ್ರತಿಕ್ರಿಯಿಸಿದ ಅವರು,ನಾನು ಮುಖ್ಯಮಂತ್ರಿ ಅವರ ಬಳಿ ಹೋಗಿಲ್ಲ.ವಿಚಾರ ತಿಳಿಸಲು ಮಾತ್ರ ನಾನು ಹೋಗುವುದು.ಅವರಿಂದ ವಿಚಾರ ತಿಳಿದುಕೊಳ್ಳಲು ನಾನು ಮುಖ್ಯಮಂತ್ರಿ ಭೇಟಿಗೆ ತೆರಳುವುದಿಲ್ಲ.ಎಲ್ಲಾ ಮುಗಿದ ಮೇಲೆ ಖಾತೆಯ ಬಗ್ಗೆ ಪೋಸ್ಟ್ ಮಾರ್ಟಮ್ ಮಾಡಬೇಡಿ.ಇದು ಬೆಸ್ಟ್ ಖಾತೆ ಬಿಡಿ.ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಮಾತಾನಾಡಲ್ಲ ಎಂದು ಲೇವಡಿ ಮಾಡಿದರು.
ಇದೇ ವೇಳೆ ತಮಗೆ ನೀಡಿರುವ ಖಾತೆಯ ಬಗ್ಗೆ ಆನಂದ್ ಸಿಂಗ್ ವ್ಯಂಗ್ಯವಾಡಿದ ಅವರು,ನಂದೇನು ದೊಡ್ಡ ಇಲಾಖೆಯಲ್ಲ.ನಾನು ಯಾವಾಗಲೂ ಫ್ರೀಯಾಗಿ ಇರುತ್ತೇನೆ.ಇಲಾಖೆಯ ಏನೇ ಮಾಹಿತಿ ಇದ್ದರೂ ನನಗೆ ಕರೆ ಮಾಡಿ ಎಂದು ಸುದ್ದಿಗಾರರಿಗೆ ಮನವಿ ಮಾಡಿದರು.