ಬೆಂಗಳೂರು : ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಹಾಗೂ ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡುತ್ತಿದೆ, ಅಪರಾಧಿಗಳು ಖಂಡಿತಾ ಸಿಕ್ಕಿಹಾಕಿಕೊಳ್ತಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಕಠಿಣ ಕಾನೂನುಗಳಿವೆ, ಇನ್ನೂ ಕಠಿಣ ಕಾನೂನುಗಳು ಬರಬೇಕಿದೆ ಎಂದು ತಿಳಿಸಿದರು.
ಗೃಹ ಸಚಿವರು ನೆಗೆಟಿವ್ ಹೇಳಿಕೆ ಕೊಟ್ಟಿದ್ದಲ್ಲ, ಬದಲಾಗಿ ಮಹಿಳೆಯರ ಕಾಳಜಿಯಿಂದ ಆ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ, ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದು ಅನ್ನೋ ಹೇಳಿಕೆ ಬೇರೆ ಅರ್ಥ ಕಲ್ಪಿಸಬಾರದು ಎಂದು ಮನವಿ ಮಾಡಿದರು. ಕಿಡಿಗೇಡಿಗಳ ಬಂಧನ ಇನ್ನೂ ಆಗದಿರುವುದು ಸರ್ಕಾರದ ವೈಫಲ್ಯ ಅಂತ ಹೇಳಕ್ಕಾಗಲ್ಲ, ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ತಿದೆ ಎಂದು ತಿಳಿಸಿದರು.