ಬೆಂಗಳೂರು : ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಸಂಬಂಧ ರಾಜ್ಯ ಗೃಹ ಸಚಿವರು ನೀಡಿರುವ ಹೇಳಿಕೆಗೆ ಮಾಜಿ ಸಂಸದೆ,ಚಿತ್ರ ನಟಿ ರಮ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪೇಸ್ಬುಕ್ ಸ್ಟೇಟಸ್ ಮೂಲಕ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದು, ಪುರುಷರು ಮಾಡುವ ಅಪರಾಧಕ್ಕೆ ಮಹಿಳೆಯರನ್ನೇ ದೂಷಿಸಲಾಗುತ್ತದೆ, ಅದು ಅತ್ಯಾಚಾರವಾಗಲಿ, ದೈಹಿಕ, ಮೌಖಿಕ,ಮಾನಸಿಕ ನಿಂದನೆಗಳಾಗಲಿ ಎಲ್ಲದ್ದಕ್ಕೂ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ನಾವು ಇದನ್ನೇ ಪ್ರತಿನಿತ್ಯ ಕೇಳುತ್ತಿರುತ್ತೇವೆ.
ಇದು ನಿಮ್ಮ ತಪ್ಪು ಎಂದುರಾಜ್ಯ ಗೃಹಸಚಿವರು ಹೇಳಬಾರದಿತ್ತು. ಅದರಂತೆಯೇ ನೀವು ಅದನ್ನು ಧರಿಸಬಾರದಿತ್ತು, ಬಿಗಿಯಾಗಿ, ಚಿಕ್ಕದಾಗಿತ್ತು, ನೀವು ತಡವಾಗಿ ಹೊರಗೆ ಹೋಗಬಾರದಿತ್ತು, ಅದನ್ನು ಮಾಡಬಾರದಿತ್ತು, ನೀವು ಮೇಕಪ್, ಬಟ್ಟೆ ಎಲ್ಲ ಎಲ್ಲದ್ದಕ್ಕೂ ಮಾತುಗಳು ಕೇಳಿಬರುತ್ತವೆ.

ಏಕೆ ಕೆಂಪು ಲಿಪ್ ಸ್ಟಿಕ್, ಏಕೆ ಮಿನುಗು? ನೀವು ಕಣ್ಣು ಮಿಟುಕಿಸಬಾರದಿತ್ತು, ಏಕೆಂದರೆ ಪುರುಷರು ಯಾವಾಗಲೂ ಪುರುಷರೇ. ಯಾವಾಗಲೂ ನಾವೇ ರಾಜಿ ಮಾಡಿಕೊಳ್ಳಬೇಕು, ನಾವೇ ಬದಲಾಗಬೇಕು, ನಾವೇ ಹೊಂದಿಕೊಳ್ಳಬೇಕು, ನಾವೇ ಸಹಿಸಿಕೊಳ್ಳಬೇಕು, ಇಲ್ಲ.. ಇಲ್ಲ!
ಈ ಎಲ್ಲಾ ಅಸಂಬದ್ಧತೆ,ತರ್ಕಗಳಿಗೆ ಪೂರ್ಣ ವಿರಾಮ ಹಾಕೋಣ, ನಾನು ನನ್ನ ಸ್ನೇಹಿತರ ವಿಷಯದಲ್ಲೂ ಇದನ್ನೇ ಮಾಡಿದ್ದೇನೆ, ಆಪಾದನೆಗಳನ್ನು ತೆಗೆದುಕೊಳ್ಳಿ ,ಕಣ್ಣು ಮುಚ್ಚಬೇಡಿ, ನಮ್ಮಮೇಲಿನ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಮಾತನಾಡಿ ಎಂದು ತಮ್ಮ ಫೇಸ್ಬುಕ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.