ದಾವಣಗೆರೆ : ಮೈಸೂರಿನಲ್ಲಿ ಎಲ್ಲೋ ಅತ್ಯಾಚಾರ ಘಟನೆ ನಡೆದರೆ ನನ್ನನ್ನು ಏಕೆ ಪ್ರಶ್ನೆ ಮಾಡುತ್ತೀರಿ. ಅದನ್ನು ನಾನೇನೂ ನೋಡಿಲ್ಲ,ಮಾಡಿಲ್ಲ ನಮ್ಮ ಜಿಲ್ಲೆಯಲ್ಲಿ ಏನಾದರೂ ಆಗಿದ್ರೇ ಕೇಳಿ ಅದಕ್ಕೆ ಖಂಡಿತವಾಗಿ ಅಧಿಕಾರಿಗಳಿ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ದಾವಣಗೆರೆ ಸಂಸದ ಹಾಗೂ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.
ದಾವಣಗೆರೆಯಲ್ಲಿ ಬಿಎಸ್ಎನ್ಎಲ್ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೈಸೂರಿನಲ್ಲಾಗಿರುವ ಘಟನೆ ಬಗ್ಗೆ ನನಗೆ ಏನು ಗೊತ್ತು ಹೇಳಿ.ನಿಮಗೆ ಅದೇ ಕೆಲಸ,ನಾನು ಟಿವಿ ನೋಡದೆ ಬದುಕು ಸಾಗಿಸುತ್ತೇನೆ.ಬೆಳಿಗ್ಗೆ ಎದ್ದು ಪತ್ರಿಕೆ ಓದುವುದಕ್ಕೆ ಸಮಯವಿಲ್ಲ .ನಮ್ಮ ಬದುಕು ನೋಡಿಕೊಂಡು,ಸಂಜೆ ಮನೆಗೆ ಹೋಗಿ ಮಲಗಿಕೊಂಡರೇ ಸಾಕಾಗಿ ಹೋಗುತ್ತದೆ.ನನಗೆ ರೇಪ್ ಗೊತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ಸಂಸದರು,ಸಚಿವರು,ಶಾಸಕರು ಕ್ಷುಲ್ಲಕವಾಗಿ ಪರಿಗಣಿಸಿದ್ದಂತಿದೆ.ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವ ಮೂಲಕ ಯುವತಿಯರು,ಮಹಿಳೆಯರ ರಕ್ಷಣೆ ಬಗ್ಗೆ ಕಾಳಜಿ,ಕಳಕಳಿ ಇಲ್ಲವೆಂಬುದನ್ನು ಪ್ರಕಟಿಸುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.