ಸೆಪ್ಟಂಬರ್ ನಿಂದ ನಿತ್ಯ 5 ಲಕ್ಷ ಲಸಿಕೆ: ಕೇಂದ್ರದ ಮೆಚ್ಚುಗೆ: ಸಿಎಂ

ಬೆಂಗಳೂರು : ಮುಂಬರುವ ಸೆಪ್ಟೆಂಬರ್ ನಿಂದ ರಾಜ್ಯದಲ್ಲಿ ಪ್ರತಿನಿತ್ಯ ಐದು ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.

ಈಗಾಗಲೇ ನಿನ್ನೆ ಐದು ಲಕ್ಷ ಲಸಿಕೆ ನೀಡಲಾಗಿದೆ, ರಾಜ್ಯದ ಈ ಪ್ರಯತ್ನಕ್ಕೆ ಕೇಂದ್ರ ಪ್ರೋತ್ಸಾಹಿಸಿದೆ, ಹೆಚ್ಚುವರಿ ಲಸಿಕೆ ಕೊಡುವ ಭರವಸೆ ಕೇಂದ್ರ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಕೊರೊನಾ ಸಂಬಂಧ ಆಗಸ್ಟ್ 30 ರಂದು ಸಮಿತಿಯ ಸಭೆ ಕರೆಯಲಾಗಿದೆ. ಇಲ್ಲಿ ಕೋವಿಡ್ ತಡೆ ಕುರಿತು ಬಗ್ಗೆ ಸಮಗ್ರ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಹಾಗೆಯೇ ಜಲಶಕ್ತಿ‌ ಸಚಿವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಕುರಿತು ಚರ್ಚೆ ಮಾಡಲಾಗದೆ. ಸುಪ್ರೀಂಕೋರ್ಟ್ ನಲ್ಲಿರುವ ಜಲವಿವಾದಗಳ ಬಗ್ಗೆ ಎಜಿ, ಹಿರಿಯ ವಕೀಲರ ಜತೆ ಮಾತುಕತೆ ನಡೆಸಲಾಗಿದೆ, ಹಾಗೆಯೇ, ಆರ್ಥಿಕ‌ ಇಲಾಖೆ ಸಚಿವರ ಜತೆ ಚರ್ಚಿಸಿ ಜಿಎಸ್ಟಿ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇನೆ, ಪಿಯೂಶ್ ಗೋಯಲ್ ಭೇಟಿ ಮಾಡಿ ರಾಜ್ಯದಲ್ಲಿ ಮೆಗಾ ಟೆಕ್ಸ್ಟ್ ಟೈಲ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧವಿವರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಗ್ಯಾಂಗ್ ರೇಪ್ : ಮೈಸೂರಿನಲ್ಲಿ ಅಧಿಕಾರಿಗಳ ಸಭೆ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಡಿಜಿಪಿ‌ ಪ್ರವೀಣ್ ಸೂದ್ ಅವರನ್ನು  ಮೈಸೂರಿಗೆ ಹೋಗಲು ಸೂಚಿಸಿದ್ದೇನೆ, ಅಲ್ಲಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ತನಿಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ತನಿಖೆ ಯಾವ ಹಂತದಲ್ಲಿದೆ ಅಂತ ಇನ್ನೂ ಪೊಲೀಸರು ತಿಳಿಸಿಲ್ಲ, ನನಗೇ ನೇರವಾಗಿ ವರದಿ ಒಪ್ಪಿಸಲು ಸೂಚಿಸಲಾಗಿದೆ,

ಈಗಾಗಲೇ ತನಿಖೆಗೆ ತಂಡ ರಚನೆ ಮಾಡಲಾಗಿದೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

More News

You cannot copy content of this page