ಬೆಂಗಳೂರು : ಗಣೇಶ ಎಲ್ಲರ ಮನೆಯಲ್ಲಿರಬೇಕೆಂಬುದು ನಮ್ಮ ಆಶಯ, ಗಣೇಶ ಹಬ್ಬವನ್ನ ಪ್ರತಿಯೊಬ್ಬರೂ ಆಚರಿಸಬೇಕು, ಇದು ಪಕ್ಷದ ತೀರ್ಮಾನ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡೋಣ, ಬಳಿಕ ತಮ್ಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ – ಧಾರವಾಡ ಪಾಲಿಕೆ ಚುನಾವಣೆ ಸಂಬಂಧ ಇಂದು ಹುಬ್ಬಳ್ಳಿಗೆ ಹೋಗಿ ಅಲ್ಲಿ ಸಭೆ ನಜೆಸಿ, ಪಕ್ಷದ ಅಭ್ಯರ್ಥಿಗಳು ಗೆಲ್ಲಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರು ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಪಕ್ಷದ ಮುಖಂಡರಾದ ಹೆಚ್ ಎಂ ರೇವಣ್ಣ , ವಿ ಎಸ್ ಉಗ್ರಪ್ಪ ನನ್ನನ್ನು ಭೇಟಿ ಮಾಡಿದ್ದಾರೆ, ಅಲ್ಲಿ ನಡೆದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ, ಅವರು ವರದಿ ಸಲ್ಲಿಸಿದ ನಂತರ ಹೇಳಿಕೆ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ಉಪಕುಲಪತಿ ಆದೇಶ ವಿಚಿತ್ರವಾಗಿದೆ, ಕ್ಯಾಂಪಸ್ ಒಳಗಡೆ ೬ರ ನಂತರ ಓಡಾಡದಂತೆ ಹೇಳಿದ್ದಾರೆ, ಇದೊಂದು ಅವೈಜ್ಞಾನಿಕ ನಿಯಮ, ಈ ವಿಚಾರವಾಗಿ ನಾನು ಗರ್ವನರ್ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕ್ರಮವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ರಾತ್ರಿ ಹೊತ್ತು ಓಡಾಡಬೇಡಿ ಅಂದ್ರೆ ಹೇಗೆ..?, ರಕ್ಷಣೆ ಕೊಡಬೇಕಾಗಿದ್ದು ಪೊಲೀಸ್ ಕರ್ತವ್ಯ, ಮೈಸೂರು ಪ್ರಸಿದ್ಧ ಪ್ರವಾಸಿ ತಾಣ, ಬೇರೆ, ಬೇರೆ ಊರುಗಳಿಂದ ಸಾಕಷ್ಟು ಪ್ರವಾಸಿಗಳು ಮೈಸೂರಿಗೆ ಬರುತ್ತಾರೆ. ಅವರಿಗೆ ಓಡಾಡಬೇಡ ಅಂದ್ರೆ ಹೇಗೆ, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.