ಮೈಸೂರು : ಆಲನಹಳ್ಳಿ ಬಳಿ ಆಗಸ್ಟ್ 24ರಂದು ನಡೆದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರರಣದ 5 ಆರೋಪಿಗಳನ್ನು ತಮಿಳುನಾಡಿನ ತಿರುಪೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶನ ಪ್ರವೀಣ್ ಸೂದ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಇಷ್ಟು ವರ್ಷದ ಸೇವೆಯಲ್ಲಿ 24 ಗಂಟೆಯೊಳಗೆ ಎರಡು ಬಾರಿ ಸುದ್ದಿಗೋಷ್ಠಿಯನ್ನು ಎಂದೂ ನಡೆಸಿಲ್ಲ.24 ಆಗಸ್ಟ್ ನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಹಳ ದುಃಖಕರ ಸಾಮೂಹಿಕ ಅತ್ಯಾಚಾರ ಘಟನೆ ನಡೆ ದಿತ್ತು.ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪ್ರಕರಣ ಸಂಬಂಧ ಸಂತ್ರಸ್ತೆಯಿಂದ ನಮಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಕೇವಲ ಯುವತಿಯ ಸ್ನೇಹಿತ ನಿಂದ ಪೊಲೀಸರಿಗೆ ಒಂದಷ್ಟು ಮಾಹಿತಿ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.
ಲಭ್ಯಮಾಹಿತಿ ಆಧರಿಸಿ ಘಟನೆಯಲ್ಲಿ ಐದು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.ಆದರೆ ಬಂಧಿತರ ಐದು ಆರೋಪಿಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ.ಇವರು ತಮಿಳು ನಾಡಿನ ತಿರಪೂರಿನವ ರು.ಇವರೆಲ್ಲರೂ ಅಗಾಗ ಮೈಸೂರಿಗೆ ಬಂದು ಹೋಗುತ್ತಿದ್ದರು.ಬಂಧಿತರಲ್ಲಿ ಕೆಲವರು ಎಲೆಕ್ಟ್ರಿಕಲ್ ಕೆಲಸ,ವೈರಿಂಗ್,ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರು.ಅದರಲ್ಲಿ ಓರ್ವ 17ವರ್ಷದ ಅಪ್ರಾಪ್ತ ಬಾಲಕನೂ ಇದ್ದಾನೆ.ಇವರೆಲ್ಲರೂ ಆಗಾಗ ಕೆಲಸ ಮೇಲೆ ಮೈಸೂರಿಗೆ ಬರುತ್ತಿದ್ದರು ಎಂದು ಅವರು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಬಂಧಿತರಲ್ಲಿ ಕೆಲವರಲ್ಲಿ ಕ್ರಿಮಿನಲ್ ಹಿನ್ನಲೆ ಉಳ್ಳವರಾಗಿದ್ದಾರೆ.ತಮಿಳುನಾಡಿನಲ್ಲಿಯೂ ಕೆಲ ಅಪರಾಧಿ ಕ ಚಟುವಟಿಕೆಗಳನ್ನು ಭಾಗಿಯಾಗಿರುವ ಮಾಹಿತಿ ಇದೆ.ಮೈಸೂರಿನ ಬಂಡಿಪಾಳ್ಯ ಎಪಿಎಂಸಿಗೆ ಪ್ರಕರಣ ದಲ್ಲಿ ಭಾಗಿಯಾಗಿದ್ದ ಓರ್ವ ಚಾಲಕನ ಜೊತೆ ತರಕಾರಿ ಖರೀದಿಸಲು ಬರುತ್ತಿದ್ದರು.ಅಲ್ಲದೆ ಹಣದಾಸೆಗಾಗಿ ಆರೋಪಿಗಳು ಯುವತಿಯ ಸ್ನೇಹಿತ,ಕುಟುಂಬ ಸದಸ್ಯರ ಬಳಿ 3ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಮೈಸೂರಿಗೆ ಬಂದು ಹೋಗುವಾಗ ಪಾರ್ಟಿ ಮಾಡಿ ಹೊಗುತ್ತಿದ್ದರು.ಘಟನೆ ನಡೆದ ಸ್ಥಳದಲ್ಲಿ ಐವರು ಮದ್ಯಪಾನ ಮಾಡುತ್ತಿದ್ದರು.ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣವನ್ನು ಭೇದಿಸಲಾಗುತ್ತದೆ.ಅದೇ ವಿಧಾನವನ್ನು ಅನುಸರಿಸಿ ಈ ಪ್ರಕರಣವನ್ನು ಪತ್ತೆ ಮಾಡಲಾಗಿದೆ.ಪ್ರಕರಣ ವನ್ನು ಭೇದಿಸಿದ್ದ ಪೊಲೀಸರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.