ಕೊಪ್ಪಳ : ಅತ್ಯಾಚಾರ ಅತ್ಯಂತ ಅಮಾನವೀಯ ಹಾಗೂ ಹೇಯ ಕೃತ್ಯ.ಅಂತಹ ಕೃತ್ಯದಲ್ಲಿ ಭಾಗಿಯಾದ ವರಿಗೆ ಕಠಿಣಾತಿಕಠಿಣ ಶಿಕ್ಷೆ ನೀಡಬೇಕು.ಅತ್ಯಾಚಾರಿಗಳು ನೂರಾರು ಬಾರಿ ಯೋಚಿಸುವಂತಹ ಭಯಾನಕ ಶಿಕ್ಷೆಯನ್ನು ಆರೋಪಿಗಳಿಗೆ ನೀಡಿದ ಜನರಲ್ಲಿ ಶಿಕ್ಷೆಯ ಭೀತಿ ಮನೆ ಮಾಡಲಿದೆ ಎಂದು ನಟಿ ಪೂಜಾಗಾಂಧಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು,ಮೈಸೂರು ಯುವತಿ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಕೇಳಿದರೆ ತುಂಬಾ ಬೇಸರ ಹಾಗೂ ಭಯವಾಗುತ್ತದೆ.ಬೇರೆ ರಾಜ್ಯದಲ್ಲಿ ಇಂಥ ಪ್ರಕರಣ ನಡೆಯುತ್ತಿದ್ದವು ಎಂದ ಕೇಳಿದ್ದೇವೆ.ಆದರೆ ಇಂತಹ ಪ್ರಕರಣ ಈಗ ಮೈಸೂರಿನಲ್ಲಿ ನಡೆದಿರುವುದು ದುರಂತವೇ ಸರಿ.ಅತ್ಯಾಚಾರ ಮಾಡುವ ಮುನ್ನ ನೂರು ಬಾರಿ ಶಿಕ್ಷೆಯ ಬಗ್ಗೆ ಯೋಚಿಸಬೇಕು.ಅಂತಹ ಘೋರ ಶಿಕ್ಷೆಯನ್ನು ಆರೋಪಿಗಳಿಗೆ ನೀಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದ ಮೂಲಕ ನಡೆಸಿ ಆರೋಪಿಗಳಿಗೆ ಶಿಕ್ಷೆ ಕೊಡಿ ಸಬೇಕು.ಇಂತಹ ಘಟನೆಗಳಿಂದ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ ಎಂಬ ಆತಂಕ ಎದುರಾಗಿದೆ. ಮಹಿಳೆಯ ರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹಿರಿಯರು ಬುದ್ದಿ ಹೇಳಬೇಕು.
ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ.ಇಂತಹ ಮನಸ್ಥಿತಿಯ ವರಿಗೆ ಘನಘೋರ ಶಿಕ್ಷೆ ನೀಡಬೇಕು.ನನಗೂ ದೇಶದ ಕಾನೂನು,ನ್ಯಾಯಾಲಯದ ಬಗ್ಗೆ ಗೌರವವಿದೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳಿಂದ ಎಲ್ಲ ಮಹಿಳೆಯರು ನಾವು ಸೇಫ್ ಆಗಿದ್ದೇವೆ ಎಂಬ ಭಾವನೆ ಜನರಲ್ಲಿ ಬರಬೇಕು.ಅಲ್ಲಿಯವರೆಗೂ ಪೊಲೀಸರು ಭದ್ರತೆ,ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.