ಬೆಂಗಳೂರು : ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಇಂದು ಸಂಜೆ ಪಕ್ಷದ ಅಧ್ಯಕ್ಷರಿಗೆ ವಿಸ್ತೃತ ವರದಿ ನೀಡಲಾಗುವುದು ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸದಸ್ಯ ಹೆಚ್ ಎಂ ರೇವಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಇಡೀ ಪ್ರಕರಣದಲ್ಲಿ ಮೈಸೂರು ಪೊಲೀಸ್ ಕಮಿಷನರ್ ಅವರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಶಾಸಗಿ ಆಸ್ಪತ್ರೆ ವೈದರು ಅತ್ಯಾಚಾರ ನಡೆದಿದೆ ಅಂತಾರೆ ಇನ್ನೊಂದೆಡೆ ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂತ್ರಸ್ಥೆಯ ಜೊತೆಯಲ್ಲಿದ್ದ ಯುವಕನ ಹೇಳಿಕೆ ಆಧಾರದ ಮೇಲೆ ಒಂದು ದೂರು ದಾಖಲಿಸಲಾಗಿದೆ. ಯುವತಿಯದ್ದೆ ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದಾರೆ. ಇಲ್ಲಿಯೇ ಸಂಶಯ ಮೂಡುತ್ತದೆ. ಯುವಕ ಮತ್ತು ಯುವತಿ ಜತೆಯಲ್ಲಿದ್ದ ಮೇಲೆ ಒಂದೇ ಪ್ರಕರಣ ದಾಖಲು ಮಾಡಬೇಕು, ಸರ್ಕಾರದ ಒತ್ತಡಕ್ಕೆ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಟಿಕೀಸಿದರು.
ತಮ್ಮ ಮೇಲೆ, ತಮ್ಮ ಸರ್ಕಾರದ ಮೇಲೆ ಕೆಟ್ಟ ಹೆಸರು ಬರಬಾರದು, ಈ ಕಾರಣಕ್ಕೆ ಪೊಲೀಸ್ ಹೀಗೆ ಮಾಡಿದ್ದಾರೆ, ಘಟನೆ 7-30 ರಿಂದ 8 ಗಂಟೆ ಸಮಯಕ್ಕೆ ನಡೆದಿದೆ, ರಾತ್ರಿ ಹತ್ತು ಗಂಟೆಯಾದರೂ ಪೊಲೀಸ್ ಗೆ ಮಾಹಿತಿ ಇದ್ದರು, ಪ್ರಕರಣ ದಾಖಲಿಸಿಲ್ಲ, ಇಂತಹ ಕೇಸ್ ನಲ್ಲಿ ಸುಮೋಟೊ ಕೇಸ್ ದಾಖಲಿಸಬೇಕು ಅಂತಿದೆ, ಅದನ್ನೂ ಪಾಲಿಸಿಲ್ಲ ಎಂದು ಆರೋಪಿಸಿದರು.
ಯುವತಿಗೆ ಗಾಯ ಆಗಿದೆ, ರಕ್ತ ಸ್ರಾವ ಆಗಿದೆ, ಆದ್ರೆ ಪೊಲೀಸ್ ಕೇಸ್ ದಾಖಲಿಸಿಕೊಳ್ಳಲು ತಡ ಮಾಡಿದ್ದಾರೆ, ಇಲ್ಲಿ ಪೊಲೀಸ್ ಲೋಪ ಎದ್ದು ಕಾಣುತ್ತಿದೆ ಎಂದರು.
ಬಿಜೆಪಿಗರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡ್ತಾರೆ, ಶೋಭಾ ಕರಂದ್ಲಾಜೆ ನಾನು ಈ ಬಗ್ಗೆ ಮಾತಾಡಲ್ಲ ಅಂತಾರೆ ಸಚಿವೆಯಾದರೂ ಹೆಣ್ಣು ಹೆಣ್ಣೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.