ಬೆಂಗಳೂರು : ಮೈಸೂರಿನ ಆಲನಹಳ್ಳಿ ಬಳಿ ಆಗಸ್ಟ್ 24 ರಂದು ನಡೆದಿದ್ದ ಸಾಮೂಹಿಕ ಅತ್ಯಾ ಚಾರ ಪ್ರಕರಣದ 5 ಆರೋಪಿಗಳನ್ನು ಪತ್ತೆ ಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಪತ್ರಿಕಾಗೋಷ್ಠಿ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚವರು,ಇದೊಂದು ಅಮಾನವೀಯ ಕೃತ್ಯ.ಎಲ್ಲಿಯೂ ಇಂತಹ ಘಟನೆಗಳು ನಡೆಯಬಾರದು.ಪ್ರಕರಣ ಸಂಬಂಧ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ ಐವರನ್ನು ವಶಕ್ಕೆ ಪಡೆದಿದ್ದಾರೆ.ಸರ್ಕಾರದ ಪರವಾಗಿ ಪೊಲೀಸ್ ಇಲಾಖೆಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಘಟನೆ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಪೊಲೀಸ್ಅಧಿಕಾರಿಗಳ ಸಭೆ ನಡೆಸಿ ಆದಷ್ಟು ಶೀಘ್ರವಾಗಿ ಆರೋಪಿಗಳ ಪತ್ತೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ತಾವು ಪೊಲೀಸರಿಗೆ ಸೂಚನೆ ಕೊಟ್ಟಿದ್ದೆವು.ಆರೋಪಿಗಳನ್ನು ಪೊಲೀಸರು ಆದಷ್ಟು ಶೀಘ್ರ ಬಂಧಿಸುತ್ತಾರೆಂಬರೆಂಬ ವಿಶ್ವಾಸ ಇತ್ತು ಅದು ಸತ್ಯವಾಗಿದೆ.ಇಂಥ ವಿಕೃತ ಮನಸಿನ ವ್ಯಕ್ತಿಗಳಿಗೆ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಅತ್ಯಾಚಾರ ಘಟನೆ ನಡೆದಾಗ ಎಲ್ಲರಗೂ ಆತಂಕ ಮನೆ ಮಾಡಿತ್ತು.ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.ಪೊಲೀಸರು ಎಲ್ಲಾ ಸವಾಲು ಎದುರಿಸಿ ಆರೋಪಿಗಳನ್ನು ಬಂಧಿಸಿ ದ್ದಾರೆ.ಇನ್ನು ಅತ್ಯಾಚಾರ ಸಂತ್ರಸ್ತೆ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲಿಲ್ಲ.ಅದಕ್ಕಾಗಿ ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ತಂಡಗಳಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ಬಂಧಿತ ಆರೋಪಿಗಳು ತಮಿಳುನಾಡಿನಿಂದ ನಿತ್ಯ ಮೈಸೂರಿಗೆ ಬಂದು ಹೊಗುತ್ತಿದ್ದರು.ಚಾಮುಂಡಿ ಬೆಟ್ಟದ ತಪ್ಪಲಿನಿಲ್ಲಿ ಅತ್ಯಾಚಾರ ಪ್ರಕರಣ ಮರುಕಳಿಸದಂತೆ ವಿಶೇಷ ಬಂದೋಬಸ್ತ್ ಮಾಡಲಾಗಿದೆ.ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚಿನ ಪೊಲೀಸ್ ಗಸ್ತು ತಿರುಗುವಂತೆಯೂ ಸೂಚನೆ ನೀಡಿದ್ದೇವೆ.
ಘಟನೆ ಬಗ್ಗೆ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಹೇಳಿಕೆ ಕೊಡಿಸುವಂತೆ ಮನವೊಲಿಕೆ ಮಾಡ್ತಿದ್ದೇವೆ. ಸಂತ್ರಸ್ತೆ ಮನವೊಲಿಕೆ ಪ್ರಯತ್ನ ಪೊಲೀಸರು ಮಾಡ್ತಿದ್ದಾರೆ.ಆದ್ರೆ ಇನ್ನೂ ಮನವೊಲಿಸಲು ಸಾಧ್ಯ ವಾಗಿಲ್ಲ.ಯುವತಿ ಕಡೆಯವರು ಮಾಹಿತಿ ಕೊಟ್ಟಿದ್ದರೆ ಇನ್ನು ಶೀಘ್ರವಾಗಿ ಕ್ರಮ ಕೈಗೊಳ್ಳಬಹುದಿತ್ತು.ಸದ್ಯ ಸಂತ್ರಸ್ತೆ ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ.ಅತ್ಯಚಾರ ಪ್ರಕರಣ ಆರೋಪಿಗಳಲ್ಲಿ ಯಾರೂ ವಿದ್ಯಾರ್ಥಿಗಳಲ್ಲ,ಎಲ್ಲರೂ ಕೂಲಿ ಕಾರ್ಮಿಕರು ಇವರೆಲ್ಲರೂ ಪ್ರತಿ ದಿನ ಮೈಸೂರಿಗೆ ಕೆಲಸಕ್ಕಾಗಿ ಬಂದು ಹೋಗುತ್ತಿದ್ದರು.ಪ್ರಕರಣವನ್ನು ಪತ್ತೆ ಹೆಚ್ಚಲಾಗಿದೆ ಆದರೆ ಮುಂದೆ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸುವ ಮೂಲಕ ಇಂತಹ ಘಟನೆಗಳು ಮರುಕಳುಹಿಸದಂತೆ ತಡೆ ಬೇಕಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾತ್ರಿ 7ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಹೋಗುವವರಿಗೆ ರಕ್ಷಣೆ ಕೊಡಲು ಸೂಚನೆ.ಬೆಟ್ಟ,ಬೆಟ್ಟದ ಸುತ್ತಮುತ್ತ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ.ಮೈಸೂರಿಗೆ ತಮಿಳುನಾಡು,ಕೇರಳದಿಂದ ಬರುವವರ ಸಂಖ್ಯೆ ಜಾಸ್ತಿ ಇದೆ.ಹೀಗಾಗಿ ಹೆಚ್ಚಿನ ನಿಗಾವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.