ಬೆಂಗಳೂರು : ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ರಾಜ್ಯ ಗೃಹ ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಎಂ.ಎಲ್.ಸಿ ಶರವಣ ಮಾತನಾಡಿ, ಪ್ರಾಣಿಗಳಿವೆ ಎಚ್ಚರಿಕೆ ಎಂಬಂತೆ ಮಹಿಳೆಯರು ಹೊರಗಡೆ ಬರಬಾರದು ಎಂದು ಬೋರ್ಡ್ ಹಾಕಿ ಬಿಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನ ತಲೆ ತಗ್ಗಿಸುವಂತಹ ಹೇಳಿಕೆಯನ್ನು ಗೃಹ ಸಚಿವರು ನೀಡಿದ್ದಾರೆ, ಅವರು ತಕ್ಷಣವೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಮೈಸೂರಿನ ಜ್ಯುವೆಲರಿ ಶಾಪ್‌ನಲ್ಲಿ ರಾಬರಿಯಾಗುತ್ತೆ, ಅತ್ಯಾಚಾರ ಆಗುತ್ತೆ, ಶಾಂತಿ ಪ್ರಿಯವಾದ ನಾಡಿನಲ್ಲಿ ಭಯ ಹುಟ್ಟಿಸುವಂತಹ ಕೃತ್ಯಗಳು ನಡೆಸುತ್ತಿವೆ. ಸಮಾಜ ಎಲ್ಲಿಗೆ ಹೋಗ್ತಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.
ಬಂಧಿತ ಆರೋಪಿಗಳಿಗೆ ಕಠಿಣ ಕಠಿಣ ಶಿಕ್ಷೆಯಾಗಬೇಕು, ಇಂತಹ ಹೀನ ಕೃತ್ಯ ಮಾಡುವವರಿಗೆ ಪಾಠವಾಗುವಂತೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಸರ್ಕಾರ ಈ ನಿಟ್ಟಿನಲ್ಲಿ ತನಿಖೆಯನ್ನು ಸರಿಯಾಗಿ ನಡೆಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.