ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಅತ್ಯಾಚಾರ ಆರೋಪಿಗಳು : 10 ದಿನ ಪೊಲೀಸ್ ಕಸ್ಟಡಿಗೆ

ಮೈಸೂರು : ನಗರದ ಲಲಿತಾದ್ರಿಪುರ ಬಳಿ ನಡೆದಿದ್ದಸಾಮೂಹಿಕ ಅತ್ಯಾಚಾರ ಪ್ರಕರಣದ ಬಂಧಿತ 5 ಆರೋಪಿಗಳನ್ನು ಪೊಲೀಸರ ವಿಚಾರಣೆಗಾಗಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ನಿನ್ನೆ ರಾತ್ರಿ ಮೈಸೂರಿನ ಮೂರನೇ ಜೆಎಂ ಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿ ಸಿದರು.ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡು ವಂತೆ ಮನವಿ ಮಾಡಿದ್ದರು.ಪೊಲೀಸರ ಮನವಿ ಪುರಸ್ಕರಿಸಿದ 3ನೇ ಜೆಎಂಎಫ್‌ಸಿ ನ್ಯಾಯಾಧೀಶರು ಬಂಧಿತ ಐವರು ಆರೋಪಿಗಳನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಮೈಸೂರಿನ ಅಜ್ಞಾತ ಸ್ಥಳವೊಂದರಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು,ನಗರ  ಪೊಲೀಸ್ ಆಯುಕ್ತ ಚಂದ್ರಗುಪ್ತ ನೇತೃ ತ್ವದಲ್ಲಿಯೇ ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.ಆರೋಪಿಗಳು ತನಿಖೆ ವೇಳೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ನೀಡಿದ್ದು ದುಷ್ಕೃತ್ಯದ ಎಸಗಿದ್ದು 6 ಜನರಲ್ಲ7 ಎಂದು ತಿಳಿದು ಬಂದಿದೆ. ಮತ್ತೋರ್ವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಮೂಲಗಳು ತಿಳಿಸಿವೆ.ಈಗಾಗಲೇ ಪೊಲೀಸರು 5 ಜನರನ್ನು ಬಂಧಿಸಿದ್ದು,ತಲೆ ಮರೆಸಿಕೊಂಡಿರುವ ಇಬ್ಬರಿಗಾಗಿ ತೀವ್ರ ಹುಡುಕಾಟ ಆರಂಭಿಸಿ ದ್ದಾರೆ.ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಉಳಿದಿದ್ದಬ್ಬರ ಬಂಧನಕ್ಕಾಗಿ ಪೊಲೀಸರ ತಂಡ ಹೊರ ರಾಜ್ಯಗಳಿಗೆ ತೆರಳಿದೆ ಎನ್ನಲಾಗಿದೆ.  

ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಐವರಲ್ಲಿ ಓರ್ವ ಅಪ್ರಾಪ್ತ 17 ವರ್ಷದ ಪ್ರಾಯದವನು ಎನ್ನಲಾಗಿದೆ.ಈ ಕುರಿತು ಪೊಲೀಸರು ಆತನ ಜನ್ಮ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

More News

You cannot copy content of this page