ಬೆಂಗಳೂರು : 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶಾಲೆಗಳನ್ನು ಆರಂಭಿಸಿದ ನೀತಿ ಯಲ್ಲಿಯೇ 6 ನೇ ರಿಂದ 8 ನೇ ತರಗತಿಗಳ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು,ಹಿಂದೆ ಶಾಲಾರಂಭಕ್ಕೆ ಪಾಲಿಸಿದ್ದ ಮಾರ್ಗಸೂಚಿಯನ್ನೇ 6 ರಿಂದ 8 ನೇ ತರಗತಿವರೆಗಿನ ಶಾಲೆಗಳ ಆರಂಭಕ್ಕೂ ಪಾಲನೆಗೆ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೆ.6 ರಿಂದ ಶೇ.50ರ ಹಾಜರಾತಿಯೊಂದಿಗೆ ಶಾಲೆಗಳ ಆರಂ ಭ ಮಾಡಲಿದ್ದೇವೆ.50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಲ್ಲಿ ಬೆಳಗ್ಗೆ ಹಾಗು ಮಧ್ಯಾಹ್ನ ಎರಡು ತಂಡದಲ್ಲಿ ತರಗತಿ ನಡೆಸಲಾಗುವುದು.ದಿನ ಬಿಟ್ಟು ದಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗು ತ್ತದೆ.ವಾರದಲ್ಲಿ ಐದು ದಿನ ಮಾತ್ರ ಶಾಲೆ ನಡೆಯಲಿದೆ.ಅದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಕರಿಗೆ ಲಸಿಕೆ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳಲ್ಲಿರುವ 2,61,000 ಶಿಕ್ಷಕರಲ್ಲಿ 2,50,000 ಶಿಕ್ಷಕರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ.ಅದರಲ್ಲಿ 1,10,000 ಶಿಕ್ಷಕರಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ.ಶೇ.90ರಷ್ಟು ಬೋಧಕೇತರ ಸಿಬ್ಬಂದಿಗೂ ವ್ಯಾಕ್ಸಿನೇಷನ್ ಮಾಡಿಸಲಾಗಿದೆ.ಉಳಿದ ಸಿಬ್ಬಂದಿಗೂ ಲಸಿಕೆ ಕೊಡಿಸಲಾಗುತ್ತದೆ ಎಂದರು.
ಎಸ್ಒಪಿ ಪಾಲಿಸಲಿ ಸೂಚನೆ : ಭೌತಿಕ ತರಗತಿಗಳು ಆರಂಭಗೊಂಡ ನಂತರ ಶಾಲೆಗಳಿಗೆ ಭೇಟಿ ನೀಡುವಂತೆ ಎಲ್ಲಾ ಬಿಇಒಗಳಿಗೆ ಸೂಚನೆ ನೀಡಲಾಗಿತ್ತು.ಸರ್ಕಾರದ ಎಸ್ಒಪಿ ಅನ್ನು ಬಹುತೇಕ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಮಾಹಿತಿ ಬಂದಿದೆ.ಕೆಲವೇ ಶಾಲೆ ಗಳಲ್ಲಿ ಕೊಠಡಿಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇತ್ತು ಎನ್ನುವ ಮಾಹಿತಿ ಬಂದಿದೆ.ಮತ್ತೆ ಅಂತಹ ಪ್ರಸಂಗಗಳು ಮರುಕಳಿಸದಂತೆ ಮುನ್ನೆಚ್ಚರಿಕೆವಹಿಸಿ ಎಂದು ಅವರಿಗೆ ಸೂಚಿಸಿದ್ದೇವೆ.ಎಸ್ಓಪಿ ಪಾಲನೆ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ಮಾಡುತ್ತೇವೆ ಎಂದರು.
1 ನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ಸಭೆ : ಗಣೇಶ ಚತುರ್ಥಿಯ ನಂತರ ಮತ್ತೊಮ್ಮೆ ಕೋವಿ ಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಲಿದ್ದು,ಆಗ ಒಂದರಿಂದ ಐದನೇ ತರಗತಿಗಳ ತರಗತಿಗಳ ನ್ನೂ ಆರಂಭ ಮಾಡುವ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.