ಐತಿಹಾಸಿಕ ಕಲ್ಯಾಣಿಗಳ ಜೀರ್ಣೋದ್ಧಾರ, ನರೇಗಾ ಅಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ

ರಾಮನಗರ : ಸೋಲೂರು ಹೋಬಳಿಯ ಮೋಟಗೊಂಡನಹಳ್ಳಿಗೆ ಭೇಟಿ ನೀಡಿದ ಸಚಿವರು ನರೇಗಾ ಯೋಜನೆಯ ಅಡಿಯಲ್ಲಿ ಐತಿಹಾಸಿಕ ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡಿರುವುದನ್ನು ವೀಕ್ಷಿಸಿದರು.ಹತ್ತು ಲಕ್ಷ ಖರ್ಚು ಮಾಡಿ ಕಲ್ಯಾಣಿಯನ್ನು ಅಭಿವೃದ್ಧಿ ಮಾಡಲಾಗಿದೆ.ಇದು ಜೋಳರ ಕಾಲದ ಕಲ್ಯಾಣಿಯಾಗಿದ್ದು, ಜಿಲ್ಲೆಯ ಇಂಥ 140 ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ.ಮಾಗಡಿ ತಾಲೂಕು ಒಂದರಲ್ಲೇ 100 ಕಲ್ಯಾಣಿಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಎಂದು ಸಚಿವ ಅಶ್ವತ್ಥ ನಾರಾಯಣ್ ಮಾಹಿತಿ ನೀಡಿದರು.

ಸೋಲೂರು ಹೋಬಳಿಯ ಶ್ರೀರಾಮಪುರಕ್ಕೆ ಭೇಟಿ ನೀಡಿದ ಸಚಿವರು,ಆಶ್ರಯ ಮನೆಗಳನ್ನು ನಿರ್ಮಿಸಲು ಮೀಸಲಿಟ್ಟ ಐದು ಎಕರೆ ಜಮೀನಿನ ಬದುಗಳಲ್ಲಿ ಸಸಿ ನಡುವ ಕೆಲಸವನ್ನು ಮಾಡಿರುವ ಸಂಜೀವಿನಿ ಒಕ್ಕೂಟಗಳ ಮಹಿಳೆಯರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಒಂದು ಗುಂಡಿ ತೆಗೆದರೆ 300ರೂಪಾಯಿ ಕೊಡುತ್ತಾರೆ.ದಿನಕ್ಕೆ ಇಬ್ಬರು ಮಹಿಳೆಯರು ಸೇರಿ ಐದು ಗುಂಡಿಗಳನ್ನು ತೆಗೆಯುತ್ತಾರೆ.ಇಲ್ಲಿ ಇದುವರೆಗೆ 1,900ಗುಂಡಿಗಳನ್ನು ತೆಗೆಯಲಾಗಿದೆ.ಒಂದು ತಿಂಗಳಿಂದ ಈ ಕೆಲಸ ನಡೆಯುತ್ತಿದೆ ಎಂದ ಅವರು,ಮಹಿಳೆಯರ ಜತೆ ಚರ್ಚೆ ನಡೆಸಿದರಲ್ಲದೆ ,ಕೆಲಸದ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.

ಬಳಿಕ ಸೋಲೂರು ಹೋಬಳಿಯ ಬಸವೇನಹಳ್ಳಿಯ ಸಾರ್ವಜನಿಕ ಸ್ಮಶಾನ ಜಾಗಕ್ಕೆ ಭೇಟಿ ಕೊಟ್ಟ ಸಚಿವರು,ನರೇಗಾದ ಹತ್ತು ಲಕ್ಷ ರೂ.ವೆಚ್ಚದಲ್ಲಿ ಸ್ಮಶಾನವನ್ನು ಅಭಿವೃದ್ಧಿ ಮಾಡಿರುವುದನ್ನು ವೀಕ್ಷಿಸಿದರು.ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು.ಒಂದು ವರ್ಷದಲ್ಲಿ ಮಾಗಡಿ ತಾಲೂಕಿನ 85 ಹಳ್ಳಿಗಳಲ್ಲಿ ಈ ರೀತಿಯ ಸ್ಮಶಾನಗಳನ್ನು ಅಭಿವೃದ್ಧಿ ಮಾಡಲಾಗಿದೆ.ಇನ್ನೂ 20 ಸ್ಮಶಾನಗಳ ನ್ನು ಅಭಿವೃದ್ಧಿ ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಾಲೂಕಿನ ಮಾದಿಗೊಂಡನಹಳ್ಳಿ ಗ್ರಾಪಂನ ಅರಸನಕುಂಟೆ ಗ್ರಾಮದಲ್ಲಿ 81 ಎಕರೆ ಕ್ಲಸ್ಟರ್ ಜಾಗದಲ್ಲಿ ಕಂದಕ ಮತ್ತು ಬದು ನಿರ್ಮಾಣ ಮಾಡಲಾಗಿದ್ದು.ಇದಕ್ಕೆ 13 ಲಕ್ಷ ಖರ್ಚು ಮಾಡಲಾಗಿದೆ.ಎಲ್ಲ ರೈತರು ಸೇರಿಕೊಂಡು ತಮ್ಮ ಜಮೀನುಗಳ ಸುತ್ತ ಬದು ಕಂದಕ ನಿರ್ಮಿಸಿದ್ದಾರೆ.ಇದನ್ನು ನೋಡಿ ಸಚಿವರು ಹರ್ಷ ವ್ಯಕ್ತಪಡಿಸಿದರು.

ಹಾಗೆಯೇ ಮಾದಿಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲಾ ಗೆ ಭೇಟಿ ನೀಡಿದ ಸಚಿವರು,ನರೇಗಾ ಯೋಜನೆ ಅಡಿಯಲ್ಲಿ ಆಟದ ಮೈದಾನಗಳ ನಿರ್ಮಾಣ ಮಾಡಿರುವುದನ್ನು ವೀಕ್ಷಿಸಿದರು.ಶೆಟಲ್ ಕಾಕ್ ಕೋರ್ಟ್,ಕಬ್ಬಡಿ,ವಾಲಿಬಾಲ್,ಥ್ರೋಬಾಲ್,ಕೊಕ್ಕೊ ಕೋರ್ಟ್ʼಗಳ ನಿರ್ಮಾಣ ಕೆಲಸಗಳನ್ನು ವೀಕ್ಷಿಸಿದರು.ಪ್ರತೀ ಮೈದಾನಕ್ಕೂ ಹತ್ತು ಲಕ್ಷ ರೂ.ಖರ್ಚು ಮಾಡಿದ್ದು,ಮಾಗಡಿ ತಾಲೂಕಿನಲ್ಲಿಯೇ 32 ಶಾಲೆಗಳಲ್ಲಿ ಆಟದ ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.ಇದೇ ಸಂದರ್ಭದಲ್ಲಿ ಸಚಿವರು ಶೆಟಲ್ ಕಾಕ್ ಮತ್ತು ವಾಲಿಬಾಲ್ ಆಟ ಆಡಿ ಕ್ರೀಡಾಂಗಣಗಳನ್ನು ಉದ್ಘಾಟಿಸಿದರು.

ಮಾದಿಗೊಂಡನಹಳ್ಳಿಯ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿನ ಗುಡ್ಡದಲ್ಲಿ 1,400ಗುಂಡಿಗಳನ್ನು ತೋಡಿ ಸಸಿ ನಡೆಲಾಗಿದ್ದು,ಅದನ್ನು ಮಾಡಿರುವ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಸಚಿವರು ಪ್ರೋತ್ಸಾ ಹ ನೀಡಿದರು.ಬಳಿಕ ಮಾದಿಗೊಂಡನಹಳ್ಳಿಯ ರೈತ ಮಂಜುನಾಥ ಎಂಬುವವರ ಜಮೀನಿಗೆ ಭೇಟಿ ನೀಡಿದ ಮಂತ್ರಿಗಳು,ಅಲ್ಲಿ ನೆಡಲಾಗಿರುವ ಹುಲುಸಾದ 650 ಸೀಬೆ ಗಿಡಗಳನ್ನು ವೀಕ್ಷಿಸಿದರು.ಈ ರೈತನಿಗೆ 1.7 ಲಕ್ಷ ಹಣ ನೆರವು ನೀಡಲಾಗಿದೆ.

ಗುಲಾಬಿ ತೋಟ ಅಭಿವೃದ್ಧಿ ಮಾಗಡಿ ತಾಲೂಕಿನ ಕಲ್ಯ ಗ್ರಾಮದ ರೈತ ಜಯಣ್ಣ ಎಂಬುವರು ನರೇಗಾ ಯೋಜನೆ ಅಡಿಯಲ್ಲಿ ತಮ್ಮ ಜಮೀನಿನಲ್ಲಿ ಗುಲಾಬಿ ತೋಟ ಅಭಿವೃದ್ಧಿಪಡಿಸಿದ್ದಾರೆ.ಇದಕ್ಕೆ 91 ಸಾವಿರ ಹಣ ಕೊಡಲಾಗಿದೆ.ಮಾಯನಾಯಕಹಳ್ಳಿಯ ತೋಟದಲ್ಲಿ ನರೇಗಾ ಹಣದಲ್ಲಿ‌ ನಿರ್ಮಿಸಿರುವ ಚೆಕ್ ಡ್ಯಾಂಗಳನ್ನು ವೀಕ್ಷಿಸಿದರು.

More News

You cannot copy content of this page