ಬೆಂಗಳೂರು : ಕಳೆದ ಹತ್ತು ದಿನಗಳ ಹಿಂದೆ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮನಗೆ ವಾಪಸ್ಸಾದರು. ಈ ಸಂದರ್ಭದಲ್ಲಿ ಅವರು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೊರೊನ ಬಂದ ಬಳಿಕ ನನ್ನ ತೂಕ ಹೆಚ್ಚಾಗಿತ್ತು, ಹೀಗಾಗಿ ದೇಹ ದಂಡಿಸಲು ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದೆ ಎಂದು ತಿಳಿಸಿದರು.
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮಾತನಾಡಿದ ಸಿದ್ದರಾಮಯ್ಯ, ಘಟನೆ ನಡೆದ ಸ್ಥಳಕ್ಕೆ ನಾನು ಭೇಟಿ ಕೊಡುತ್ತೇನೆ, ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

ಕೊರೊನ ಮೂರನೇ ಅಲೆಯ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭ ಮಾಡಲಿ, ಬಹಳ ದಿನ ಶಾಲೆ ನಡೆಯದಿದ್ರು ಕಷ್ಟ, ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ, ಬಾಲ ಕಾರ್ಮಿಕರು ಆಗುವ ಸಾಧ್ಯತೆ ಇರುತ್ತೆ, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ನಿಗಾ ವಹಿಸಿ ಶಾಲೆ ಅರಂಭಿಸುವುದು ಸೂಕ್ತ ಎಂದು ಹೇಳಿದರು.
ಜಿಟಿ ದೇವೇಗೌಡ ನನ್ನ ಜತೆ ಚರ್ಚೆ
ಜೆಡಿಎಸ್ ಮೈಸೂರು ಭಾಗದ ಶಾಸಕ ಜಿಟಿ ದೇವೇಗೌಡ ಅವರು, ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನ ಹತ್ತಿರ ಈಗಾಗ್ಲೆ ಮಾತನಾಡಿದ್ದಾರೆ, ಅವರಿಗೆ, ಮಗನಿಗೆ ಟಿಕೆಟ್ ಕೇಳಿರುವುದು ಹೌದು. ಆದರೆ ಯಾವ ಕ್ಷೇತ್ರ ಅಂತ ಹೇಳಿಲ್ಲ, ಈ ಸಂಬಂಧ ನಾನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಜತೆ ಮಾತನಾಡುತ್ತೇನೆ ಎಂದು ತಿಳಿಸಿದ, ಅವರು ಆಪರೇಷನ್ ಜೆಡಿಎಸ್ ಬಗ್ಗೆ ಗೊತ್ತಿಲ್ಲ, ಜಿಟಿಡಿ ಬಿಟ್ಟರೆ ಬೇರೆ ಯಾರು ನನ್ನನ್ನ ಸಂಪರ್ಕಿಸಿಲ್ಲ ಎಂದರು,
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ನ ಫೀಜ್ ಕಿತ್ತು ಹಾಕಿದ್ದೇನೆ ಆಂದಿದಾರೆ, ಹೇಳಲಿ ವಿಧಾನಸಭೆ ಚುನಾವಣೆ ಬರಲಿ, ಯಾರು ಯಾರ ಫೀಜ್ ಕಿತ್ತು ಹಾಕ್ತಾರೆ ಗೊತ್ತಾಗುತ್ತೆ, ಜನ ಯಾರ ಫೀಜ್ ಕೀಳ್ತಾರೆ ಎಲ್ಲಾ ಗೊತ್ತಾಗುತ್ತೆ ಎಂದು ಹೆಚ್ಡಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದರು.
ಈಶ್ವರಪ್ಪನ ಆರೋಪದ ಬಗ್ಗೆ ನಾನು ಮಾತನಾಡಲ್ಲ, ಅವನಿಗೆ ನಾಲಿಗೆಗೆ, ಬ್ರೈನ್ ಗೆ ಲಿಂಕ್ ಇಲ್ಲ, ನಾನು ಅವನ ಬಗ್ಗೆ ಮಾತನಾಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನೂತನ ಅಜೆಂಡಾಗಳೊಂದಿಗೆ ಜಾತಿಗಣತಿ
ನೂತನ ಅಜೆಂಡಾಗಳೊಂದಿಗೆ ಜಾತಿಗಣತಿ ಮಾಡಲಾಗುತ್ತಿದೆ. ಈ ಸಂಬಂಧ ಜಾತಿಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಸಿದ್ದರಾಮಯ್ಯ ಪ್ರತಿಕ್ರಯಿಸಿದ್ದಾರೆ.
2A ಪ್ರವರ್ಗದ ಅಡಿಯಲ್ಲಿ ಪ್ರಬಲ ಜಾತಿಗಳ ಸೇರಿಸುವ ಅಜೆಂಡಾ ಇದಾಗಿದೆ, ಇದನ್ನು ತೀರ್ಮಾನ ಮಾಡಬೇಕಾಗಿದ್ದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ, ಹೀಗಿರುವಾಗ ಈ ಬಗ್ಗೆ ಬೇರೆ ಯಾರೂ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದರು. ಹಾಗೆಯೇ ಸುಭಾಷ್ ಆಡಿ ನೇತೃತ್ವದ ಸಮಿತಿ ರದ್ದು ಮಾಡಬೇಕೆಂಬ ವಿಚಾರ ಸಂಬಂಧ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರುವಾಗ ಸುಭಾಷ್ ಆಡಿ ನೇತೃತ್ವದ ಸಮಿತಿಗೆ ಯಾವುದೇ ಮಹತ್ವ ಇಲ್ಲ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ
ಇತ್ತೀಚೆಗೆ ನಡೆದ ನಮ್ಮ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿದ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಮೆಟ್ರೋದವರು ಹಿಂದೆ ಭಾಷೆ ಬಳಸುವ ಪ್ರಯತ್ನ ಮಾಡ್ತಾರೆ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೆ ಅಗ್ರಸ್ಥಾನ ಇರಬೇಕು, ಅದು ಮೆಟ್ರೋ ಇರಲಿ, ರೈಲ್ವೆ ಇರಲಿ, ಏನೇ ಇರಲಿ, ಇಲ್ಲಿ ಇಂಗ್ಲಿಷ್ ಬಳಸಿರುವದನ್ನು ನಾನು ಖಂಡಿಸುತ್ತೇನೆ ಎಂದರು.
ಎಲ್ಲವೂ ಕೂಡ ಕನ್ನಡದಲ್ಲಿ ನಡೆಯಬೇಕು, ಕೇಂದ್ರ ಮಂತ್ರಿಯೊಬ್ಬರು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತಾಡಿದ್ರೆ ತೊಂದರೆ ಇಲ್ಲ, ಉಳಿದವರುವುದು ಕನ್ನಡದಲ್ಲಿ ಮಾತನಾಡಬೇಕಿತ್ತು, ಹಾಗೆಯೇ ನಾಮ ಫಲಕಗಳು ಕನ್ನಡದಲ್ಲಿ ಹಾಕಬೇಕಿತ್ತು ಎಂದು ಅಭಿಪ್ರಾಯಪಟ್ಟರು.