ಬೆಂಗಳೂರು: ಜೆಡಿಎಸ್ ಪಕ್ಷವು ಮುಳುಗುತ್ತಿರುವ ಹಡಗು.ಯಾರೂ ಮುಳುಗುತ್ತಿರುವ ಹಡಗಿನ ಜೊತೆಗಿರುವ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಮುಂದಿನ ಬಾರಿ ಪೂರ್ಣ ಬಹು ಮತದೊಂದಿಗೆ ಅಧಿಕಾರ ಪಡೆಯಲಿದ್ದು,ಯಾವುದೇ ಪಕ್ಷದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವ ರು ಸ್ಪಷ್ಟಪಡಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜ್ಯದ ಅತ್ಯುನ್ನತ ನಾಯಕರು.ಅವರ ರಾಜ್ಯ ಪ್ರವಾಸ ದಿಂದ ಪಕ್ಷಕ್ಕೆ ಒಳಿತಾಗಲಿದೆ ಎಂದು ಭರವಸೆ ನೀಡಿದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲಾಗುವುದು.ಪಕ್ಷವು ಯಾವುದೇ ಚುನಾವಣೆಯನ್ನು ಎದುರಿಸಲು ಸದಾ ಸಿದ್ಧವಾಗಿರುತ್ತದೆ.ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರ ಅವಧಿಯ ಯೋಜನೆಗಳನ್ನು ಈಗಲೂ ಮುಂದುವರಿಸಲಾಗುತ್ತಿದೆ.ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮಾಹಿತಿ ಕೊಡಬೇಕು ಹಾಗೂ ಸಂಘಟನೆ ಯನ್ನು ಬಲಪಡಿಸಲು ಇಂದಿನ ಸಭೆಯಲ್ಲಿ ಸಚಿವರು,ಶಾಸಕರು,ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದೇವೆ.ಎಲ್ಲರಿಗೂ ಸರಕಾರದ ಯೋಜನೆ ಗಳ ಲಾಭ ಸಿಗಬೇಕು.ಗರಿಷ್ಠ ಜನರು ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿ ದ್ದೇವೆಂದರು.
ಯುವಕರು,ರೈತರು,ಮಹಿಳೆಯರು ಮತ್ತು ಬಡವರಿಗಾಗಿ ಉತ್ತಮ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರವು ಅನುಷ್ಠಾನಕ್ಕೆ ತರಲಿದೆ.ದೇಶದ ಒಳಿತಿಗಾಗಿ ಪಕ್ಷ ಕೆಲಸ ಮಾಡುತ್ತಿದೆ.ಪಕ್ಷದ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ ಕಾರ್ಯಕರ್ತರು ಕೆಲಸ ಮಾಡುತ್ತಾರೆ.ಆದ್ದರಿಂದ ಇಲ್ಲಿ ಅಧಿಕಾರವೇ ಅಂತಿಮವಲ್ಲ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸುವ ಯೋಜನೆಗಳನ್ನು ಜಾತಿ ಆಧಾರದಲ್ಲಿ ನೋಡುತ್ತಿಲ್ಲ.ಅದನ್ನು ಸಬ್ ಕಾ ಸಾಥ್,ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್ ಆಧಾರದಲ್ಲಿ ನೋಡುತ್ತೇವೆ.ಪಿಎಂ ಕಿಸಾನ್,ಜಲಜೀವನ್,ಆವಾಸ್ ಯೋಜನಾ, ಜನ್‍ಧನ್ ಯೋಜನೆ -ಇವೆಲ್ಲವೂ ಎಲ್ಲರಿಗಾಗಿ ರೂಪಿಸಿದ ಯೋಜನೆಗಳು ಎಂದು ವಿವರಿಸಿದರು.
ಭಾರತ್ ಮಾಲಾ ಯೋಜನೆಯಡಿ ಕರ್ನಾಟಕಕ್ಕೆ 6,397 ಕೋಟಿ ರೂಪಾಯಿ ನೀಡಲಾಗಿದೆ.ಮೈಸೂರು- ಬೆಂಗಳೂರು ನಡುವಿನ ಹೆದ್ದಾರಿಯನ್ನು ದಶಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ.ಶೀಘ್ರವೇ ಕಾಮಗಾರಿ ಪೂರ್ಣವಾಗಲಿದ್ದು,ಮೈಸೂರಿನಿಂದ ಕೇವಲ 90 ನಿಮಿಷದಲ್ಲಿ ಬೆಂಗಳೂರು ತಲುಪಲು ಇದು ಪೂರಕವಾಗಿರಲಿದೆ ಎಂದರು.
ವಿದೇಶಿ ನೇರ ಹೂಡಿಕೆಯ (ಎಫ್‍ಡಿಐ) ಶೇಕಡಾ 42 ಭಾಗವು ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ. ತೋಟಗಾರಿಕಾ ತಂತ್ರ ಜ್ಞಾನ,ಆಹಾರ ಪಾರ್ಕ್,ಜವಳಿ ಪಾರ್ಕ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳೂ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿವೆ. ಕರ್ನಾಟಕದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ಕೌಶಲ್ಯಕ್ಕೆ ಒತ್ತು ನೀಡಿದ ಕುರಿತು ಅವರು ಮೆಚ್ಚುಗೆ ಸೂಚಿಸಿ ದರು.ಈ ಭಾಗದ ಗರಿಷ್ಠ ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ.ಈ ಕ್ಷೇತ್ರಗಳಲ್ಲಿ ಪಕ್ಷ ಸದೃಢವಾ ಗಿದೆ.ರಾಜ್ಯ ಸರಕಾರವೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ.ಕಿಸಾನ್ ಸಮ್ಮಾನ್ ಯೋಜನೆಯಡಿ ರೂ.6 ಸಾವಿರವನ್ನು ನರೇಂದ್ರ ಮೋದಿ ಅವರ ಸರಕಾರ ನೀಡಿದರೆ.ಇಲ್ಲಿನ ನಮ್ಮ ರಾಜ್ಯ ಸರಕಾರವು 4 ಸಾವಿರ ರೂಪಾಯಿ ನೀಡುತ್ತಿದೆ.ಈ ಮೂಲಕ ಸರಕಾರವು ರೈತಪರ ಎಂದು ಸಾಬೀತಾಗಿದೆ.ಬಸವರಾಜ ಬೊಮ್ಮಾಯಿ ಅವರ ಸರಕಾರವು ಮಾಸಾಶನಗಳನ್ನೂ ಹೆಚ್ಚಿಸಿ ಬಡವರು ಮತ್ತು ಸಂಕಷ್ಟದಲ್ಲಿ ಇರುವವರ ಪರ ಎಂಬುದಕ್ಕೆ ಸಾಕ್ಷಿಯಾಗಿದೆ.ಕೋವಿಡ್‍ನಿಂದ ದುಡಿಯುವವರನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರಧನ ನೀಡಲಾಗುತ್ತಿದೆ ಎಂದು ಸರ್ಕಾರದ ಸಾಧನೆಯನ್ನು ಸ್ಮರಿಸಿದರು.