ಬೆಂಗಳೂರು : ಮೂರನೇ ಅಲೆ ತಡೆಯಲು ಕ್ಷೇತ್ರದ ಜನತೆಗೆ ಅನುಕೂಲವಾಗುವಂತೆ ಜೊತೆಯಲಿ ಕಾರ್ಯಕರ್ತರು ಅಧಿಕಾರಿಗಳು ಸಜ್ಜಾಗುವಂತೆ ಅಬಕಾರಿ ಸಚಿವ ಕೆ ಗೋಪಾಲಯ್ಯ ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿಯವತಿಯಿಂದ ಆಯೋಜಿಸದ್ದ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಂಡಲ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮ ಹಾಗೂ ಕ್ಷೇತ್ರದಲ್ಲಿ ಕೊರೋನಾ ಸಮಯದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಟ ನಡೆಸಿದ ಡಾಕ್ಟರ್ ಮತ್ತು ಅಧಿಕಾರಿಗಳ ವರ್ಗ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಿ ಮಾತನಾಡಿದರು.
ಒಂದನೇ ಅಲೆ ನಮ್ಮ ಕಾರ್ಯಕರ್ತರೊಂದಿಗೆ ಸುಲಭವಾಗಿ ನಿಭಾಯಿಸಿದ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದರಿಂದ ಎಲ್ಲರೂ ತುಂಬಾ ಶ್ರಮಿಸಬೇಕಾಗಿತ್ತು.24 ಗಂಟೆಗಳ ಕಾಲ ನಮ್ಮ ಡಾಕ್ಟರಗಳು ಕಾರ್ಯಕರ್ತರು ಕಾರ್ಯ ನಿರ್ವಹಿಸುವಂತೆ ಸೂಚಿಸಲಾ ಗಿತ್ತು.ಕರೆ ಬಂದಕಡೆ ಮನೆಮನೆಗೆ ಔಷಧಿ ಕಿಟ್ಟುಗಳನ್ನು ನಮ್ಮ ಮುಖಂಡರು ತಲುಪಿಸುತ್ತಿದ್ದರು.ಡಾಕ್ಟರ್ ನಾಗೇಂದ್ರ ಅವರ ತಂಡವನ್ನು ರಚಿಸಿ ಮನೆಮನೆಗೆ ಆಕ್ಸಿಜನ್ ಕಿಟ್ ನೀಡಲು ನಿರ್ಧರಿಸಿದ್ದು,ಅಂತೆಯೇ ಹಣವನ್ನು ನೀಡಿ ಆಕ್ಸಿಜನ್ ಸಿಲಿಂಡರು ಗಳನ್ನು ಖರೀದಿಸಿದೆವು. ತಮ್ಮ ಮುಂಬೈ ಸ್ನೇಹಿತರು 300ಕ್ಕಿಂತ ಹೆಚ್ಚು ಸಿಲಿಂಡರುಗಳನ್ನು ಉಚಿತವಾಗಿ ನೀಡಿದರು.ಪ್ರತಿದಿನ ಹತ್ತರಿಂದ ಇಪ್ಪತ್ತು ಜನರಿಗೆ ಉಚಿತವಾಗಿ ಆಕ್ಸಿಜನ್ ನೀಡಲಾಗುತ್ತಿತ್ತು.ಕಂಟ್ರೋಲ್ ರೂಮ್ ಮಾಡಿ 24 ಗಂಟೆಗಳ ಕಾಲ ಕರೆ ಬಂದ ತಕ್ಷಣ ಸ್ಪಂದಿಸುವಂತ ಕೆಲಸ ನಮ್ಮ ಕಾರ್ಯಕರ್ತರು ಮತ್ತು ಡಾಕ್ಟರುಗಳು ಮಾಡುತ್ತಿದ್ದರು.
ವ್ಯಾಕ್ಸಿನೇಷನ್ ಲಸಿಕೆ ನೀಡಲು ನಮ್ಮ ಮುಖಂಡರುಗಳು ಪ್ರತಿ ಮನೆಮನೆಗೆ ಹೋಗಿ ಟೋಕನ್ ಗಳನ್ನು ನೀಡಿ ಪ್ರತಿಯೊಬ್ಬರು ವ್ಯಾಕ್ಸಿನೇಷನ್ ತೆಗೆದುಕೊಳ್ಳುವಂತೆ ಸಲಹೆ ನೀಡಿ ಕರೆತಂದು ವ್ಯಾಕ್ಸಿನೇಷನ್ ಹಾಕಿಸಲಾಗುತ್ತದೆ.ಇನ್ನು ವಾರದೊಳಗೆ ನಮ್ಮ ಕ್ಷೇತ್ರದ ಎಲ್ಲಾ ಜನತೆಗೆ ವ್ಯಾಕ್ಸಿನೇಷನ್ ನೀಡುವುದು ಮುಕ್ತಾಯವಾಗುತ್ತದೆ.ಮೂರನೇ ಅಲೆ ತಡೆಯಲು ಈಗಲೇ ಈಗಾಗಲೇ ಕೆಂಪೇಗೌಡ ಸಮುದಾಯ ಭವನದಲ್ಲಿ ನೂರ ಹಸುಗಳ ಸಿದ್ಧವಾಗಿದ್ದು ಆಕ್ಸಿಜನ್ ಪ್ಲಾಂಟ್ ಕೂಡ ಸಿದ್ಧವಾಗಿದೆ.26 ಐಸಿಯು ಬೆಡ್ಡು ಗಳನ್ನು ಮಾಡಲಾಗುತ್ತಿದೆ ಏಳು ವಾರ್ಡಗಳಲ್ಲಿ ಯಾರು ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ.ನಮ್ಮ ಕಾರ್ಯಕರ್ತರು ತೆರಳಿ ವ್ಯಾಕ್ಸಿ ನೇಷನ್ ತೆಗೆದುಕೊಳ್ಳಲು ಸೂಚಿಸುವಂತೆ ಸಚಿವರು ಕಾರ್ಯಕರ್ತರಿಗೆ ಸಲಹೆ ನೀಡಿದರು ಎಂಟು ಹತ್ತು ದಿನದಲ್ಲಿ ಕ್ಷೇತ್ರದ ಎಲ್ಲಾ ನಾಗರಿಕರಿಗೆ ವ್ಯಾಕ್ಸಿನೇಷನ್ ನೀಡುವುದು ನಮ್ಮ ಗುರಿ ಎಂದು ಅವರು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಎಂಟು-ಹತ್ತು ತಿಂಗಳಲ್ಲಿ ಅಭಿವೃದ್ಧಿ ಕೆಲಸಗಳು ಮುಗಿದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ.ಈ ಸಂದರ್ಭದಲ್ಲಿ ಕಾರಣದಿಂದ ಗುಣಮುಖರಾದ ಸಾರ್ವಜನಿಕರುತಮ್ಮ ಅನುಭವಗಳನ್ನು ಹಂಚಿಕೊಂಡು ಸಚಿವರೇ ನಮ್ಮ ಕುಟುಂಬ ಮತ್ತು ನಮ್ಮ ಜೀವ ಉಳಿಸಿದ ದೇವರು ಎಂದು ಕೊಂಡಾಡಿದರು.