ಬಂಡೀಪುರ : ಬಂಡೀಪುರ ಹುಲಿ ರಕ್ಷಿತಾರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಸಿಬ್ಬಂದಿಗಳು ಇಂದು ಹಠಾತ್ ಪ್ರತಿಭಟನೆ ನಡೆಸಿದರು. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಅವರು ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದರು.
ರಕ್ಷಿತಾರಣ್ಯದ ಪ್ರವೇಶದ್ವಾರದಲ್ಲಿ ಇಂದು ಸುಮಾರು 200 ಕ್ಕೂ ಹೆಚ್ಚು ದಿನಗೂಲಿ ನೌಕರರು ಸೇರಿ ಪ್ರತಿಭಟನೆ ನಡೆಸಿದರು. ಅಗಸ್ಟ್ 6 ರಂದು ಫೀಲ್ಡ್ ನಿರ್ದೇಶಕರು ಸುಮಾರು 205 ನೌಕರರನ್ನು ವರ್ಗಾಯಿಸಿದ್ದರು. ನಂತರ ಸಚಿವರ ಮಧ್ಯಪ್ರವೇಶದಿಂದ ಈ ವರ್ಗಾವಣೆ ಆದೇಶ ಸ್ಥಗಿತಗೊಂಡಿತ್ತು.
ಇಂತಹ ಘಟನೆಗಳು ಮರುಕರುಳಿಸಬಾರದು ಹಾಗೆಯೇ ತಮ್ಮ ಸೇವೆಯನ್ನು ಕಡ್ಡಾಯಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೆಲಸಗಾರರ ಪ್ರತಿಭಟನೆಯಿಂದ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಕ್ಷಣಾ ಬಿಕ್ಕಟ್ಟು ಉಂಟಾಗುವ ಮುಂಚೆ ರಾಜ್ಯ ಸರ್ಕಾರ ಎಚ್ಚೆತ್ತು, ನೌಕರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.