ನವದೆಹಲಿ:ತಮಿಳುನಾಡಿಗೆ30.6ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನಲೆಯಲ್ಲಿ ನೀರು ಬಿಡುಗೆಡೆ ಮಾಡಲು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ.
ದೆಹಲಿಯಲ್ಲಿ ಮಂಗಳವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 13ನೇ ಸಾಮಾನ್ಯ ಸಭೆ ಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 30 ಟಿಎಂಸಿ ನೀರು ಬಿಡುಗಡೆ ಬಾಕಿ ಇದೆ.ಆಗಸ್ಟ್ 30 ವರೆಗಿನ ಬಾಕಿ ಹಾಗೂ ಸೆಪ್ಟಂಬರ್ ತಿಂಗಳ ನೀರನ್ನು ಬಿಡುಗಡೆ ಮಾಡುವಂತೆ ಸೂಚಿಸ ಬೇಕೆಂದು ಸಿಡಬ್ಲ್ಯೂಎಂಎ ಅಧ್ಯಕ್ಷ ಎಸ್.ಕೆ.ಹಲ್ದರ್ ಗೆ ಮನವಿ ಮಾಡಿದೆ.
ಕಳೆದ ಜೂನ್ ,ಜುಲೈ ,ಆಗಸ್ಟ್ ಮೂರು ತಿಂಗಳಿನಲ್ಲಿ 86.38 ಟಿಎಂಸಿ ನೀರಿನ್ನು ಹರಿಸಬೇಕಿತ್ತು. ಆದರೆ ಈವರೆಗೆ 57.04 ಟಿಎಂಸಿ ಮಾತ್ರ ನೀರು ಬಿಡುಗಡೆಯಾಗಿದೆ.ಉಳಿದ 30.4 ಟಿಎಂಸಿ ನೀರ ನ್ನು ತಕ್ಷಣ ಬಿಡುಗಡೆ ಮಾಡುವಂತೆ ಪ್ರಾಧಿಕಾರ ಆದೇಶಿಸಬೇಕೆಂದು ತಮಿಳುನಾಡು ಮನವಿ ಮಾಡಿತು.ತಮಿಳುನಾಡಿನ ವಾದವನ್ನು ತಳ್ಳಿ ಹಾಕಿದ ಕರ್ನಾಟಕ,ರಾಜ್ಯದಲ್ಲಿ ನಿರೀಕ್ಷಿತ ಪ್ರಮಾ ಣದಲ್ಲಿ ಮಳೆಯಾಗಿಲ್ಲ.ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು.ಅದರಿಂದಲೇ 14000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿದಿದೆ.ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾದರೆ ನೀರು ಬಿಡು ಗಡೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ತಿಳಿಸಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಭೆ ಎಸ್.ಕೆ.ಹಲ್ದರ್,ತಮಿಳು ನಾಡಿಗೆ ಕರ್ನಾಟಕ ಆಗಸ್ಟ್ ಅಂತ್ಯಕ್ಕೆ 86 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು ಆದರೆ 57 ಟಿಎಂಸಿ ಬಿಡುಗಡೆ ಮಾಡಿದೆ. ಹೀಗಾಗಿ ಬಾಕಿ ನೀರನ್ನು ಹರಿಸು ವಂತೆ ಕರ್ನಾಟಕಕ್ಕೆ ಆದೇಶ ನೀಡಿದ್ದೇವೆ.ಸೆಪ್ಟಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.ಆಗ ಬಾಕಿ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಮೇಕೆದಾಟು ಯೋಜನೆ ಡಿಪಿಆರ್ ಚರ್ಚೆಗೆ ತಮಿಳುನಾಡು,ಕೇರಳ,ಪಾಂಡಿಚೆರಿ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಮೇಕದಾಟು ಯೋಜನೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇರುವ ಕಾರಣ ಚೆರ್ಚೆಗೆ ತೆಗೆದುಕೊಳ್ಳಬಾರದು.ಕಾವೇರಿ ನದಿ ಪಾತ್ರದ ಮೂರು ರಾಜ್ಯಗಳ ಸಮ್ಮತಿ ಇದ್ದರೆ ಮಾತ್ರ ಮೇಕೆದಾಟು ಯೋಜನೆ ಬಗ್ಗೆ ಚೆರ್ಚೆ ನಡೆಸಬಹುದೆಂದು ಆ ರಾಜ್ಯಗಳು ಪ್ರತಿಪಾದಿಸಿವೆ ಎನ್ನಲಾಗಿದೆ. ಇದೇ ವೇಳೆ ತಮಿಳುನಾಡು ಸರ್ಕಾರ ಕೈಗೆತ್ತುಕೊಂಡಿರುವ ವೆಲ್ಲಾರು-ಗುಂಡಾರು ನದಿ ಜೋಡ ಣೆಗೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.ಯೋಜನೆಗೆ ಅನುಮತಿ ನೀಡದಂತೆ ರಾಜ್ಯ ಮನವಿ ಮಾಡಿದೆ.ಈ ವೇಳೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಭೆಯಲ್ಲಿ ವಾಗ್ವಾ ದ,ಮಾತಿನ ಚಕಮಕಿ ನಡೆದು ಚೆರ್ಚೆಯನ್ನು ಪ್ರಾಧಿಕಾರದ ಅಧ್ಯಕ್ಷರು ಮುಂದೂಡಿದರು