ಒಂದು ಕಾಲದಲ್ಲಿ ನೆಲೆಯೇ ಇಲ್ಲದ ಪಕ್ಷ ಬಿಜೆಪಿ, ದೇಶಭಕ್ತಿ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ದೇಶದ ಸ್ವಾತಂತ್ರ್ಯಕ್ಕಾಗಿ ಎಂದೂ ಹೋರಾಡಲಿಲ್ಲ, ದೇಶಕ್ಕಾಗಿ ಅವರು ಯಾರು ಹುತಾತ್ಮರಾಗಲಿಲ್ಲ ಇದು ಬಿಜೆಪಿಯ ಇಬ್ಬಗೆಯ ನೀತಿ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವದೇಶಿ ಎಂದು ಭಾಷಣ ಮಾಡ್ತಾರೆ. ಸ್ವದೇಶಿ ಪರಿಕಲ್ಪನೆ ತಂದಿದ್ದು ಮಹಾತ್ಮಗಾಂಧಿಯವರು, ಜೈಜವಾನ್, ಜೈಕಿಸಾನ್ ಅಂದವರು ಶಾಸ್ತ್ರಿ. ಈಗ ಇವೆಲ್ಲವನ್ನ ಬಿಜೆಪಿ ಬಳಸೋಕೆ ಹೊರಟಿದೆ ಎಂದು ಟಿಕೀಸಿದರು.
ಕಳೆದ ೭ ವರ್ಷಗಳಲ್ಲಿ ೩೦% ವಿದ್ಯುತ್ ದರ ಏರಿಕೆಯಾಗಿದೆ, ಮನೆ ತೆರಿಗೆ ಹೆಚ್ಚಾಗಿದೆ, ಖಾಲಿ ಜಾಗ ಬಿಟ್ಟರೂ ಅದಕ್ಕೂ ತೆರಿಗೆ ಹಾಕಿದ್ದಾರೆ, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರುತ್ತಲೇ ಇದೆ, ಕಬ್ಬಿಣ ಟನ್ ಗೆ ೩೦ ರಿಂದ ೭೦ ಸಾವಿರಕ್ಕೇರಿದೆ, ನಗರ ಪ್ರದೇಶದ ಅನುದಾನ ಕಡಿತ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಾಳೆ ೩ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ, ನಾನು ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ, ಬಿಜೆಪಿಯನ್ನ ತಿರಸ್ಕರಿಸಿ, ಕಾಂಗ್ರೆಸ್ ಗೆಲ್ಲಿಸಿ ಎಂದು ನಾನು ಅಲ್ಲಿನ ಮತದಾರರಿಗೆ ಮನವಿ ಮಾಡ್ತೇನೆ ಎಂದರು.
ಪ್ರದಾನಿ ನರೇಂದ್ರ ಮೋದಿ ೨೦೧೪ ರಲ್ಲಿ ದೇಶವನ್ನ ಸ್ವರ್ಗ ಮಾಡುತ್ತೇನೆ ಎಂದಿದ್ದರು, ದೇಶದಲ್ಲಿ ಜನರಲ್ಲಿ ಭ್ರಮೆ ಮೂಡಿಸಿದ್ದರು. ದೇಶದ ಯುವಕರನ್ನ ದಾರಿ ತಪ್ಪಿಸಿದ್ದರು. ಅಚ್ಚೇ ದಿನ್ ಆಯೇಗಾ ಎಂದು ಎಲ್ಲರನ್ನೂ ಮೂರ್ಖರನ್ನಾಗಿಸಿದ್ರು, ಅಧಿಕಾರಕ್ಕೆ ಬಂದು ೭ ವರ್ಷ ಮುಗಿದು ಹೋಗಿದೆ, ಆದರೆ ಯಾವ ಅಚ್ಚೇದಿನ ಬರಲಿಲ್ಲ ಎಂದು ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಿಡಿಪಿಯಲ್ಲಿ ಬಾಂಗ್ಲಾ ನಮಗಿಂತ ಮುಂದಿದೆ, ನಮ್ಮ ದೇಶದ ಜಿಡಿಪಿ ಕುಸಿದಿದೆ, ೩೪.೭೫ ಕಾರ್ಪೋರೇಟ್ ಟ್ಯಾಕ್ಸ್ ಹೆಚ್ಚಾಗಲಿದೆ, ಜಿಎಸ್ ಟಿಯಿಂದ ಜನಸಾಮಾನ್ಯರ ಮೇಲೆ ಹೊರೆಬಿದ್ದಿದೆ. ಇವರು ಉದ್ಯಮಿಗಳ ಪರವಾಗಿ ಕೆಲಸ ಮಾಡ್ತಿದ್ದಾರೆ, ೬ ಲಕ್ಷ ಕೋಟಿ ಆಸ್ತಿ ಮಾರಾಟಕ್ಕೆ ಕೇಂದ್ರ ಹೊರಟಿದೆ, ದೇಶವನ್ನೇ ಮಾರಾಟ ಮಾಡೋಕೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾವಾಗಲೂ ಹಿಂದಳಿದ ವರ್ಗಗಳ ಪರವಾಗೆ ಇದ್ದೇನೆ, ಕಾಂಗ್ರೆಸ್ ಪಕ್ಷ ಕೂಡ ಹಿಂದುಳಿದವರ ಪರವೇ ಎಂದು ತಿಳಿಸಿದ ಅವರು, ಜಾತಿಗಣತಿ ಸರ್ಕಾರ ಒಪ್ಪಲೇಬೇಕು, ಇದನ್ನು ಸದನದಲ್ಲೂ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಆದರೆ, ಹಿಂದುಗಳಲ್ಲೇ ದಲಿತನ್ನ ಕಡೆಗಣಿಸಿದ್ದಾರೆ, ಹಿಂದುಳಿದವರು, ದಲಿತರಿಗೆ ಸಾಮಾಜಿಕ ನ್ಯಾಯ ಕೊಟ್ಟಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸೇರುವ ಕುರಿತು ಬಿಜೆಪಿ, ಜೆಡಿಎಸ್ ಶಾಸಕರು ಸಂಪರ್ಕಮಾಡಿರುವ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ನನ್ನನ್ನು ಯಾವ ಶಾಸಕರು ಸಂಪರ್ಕಿಸಿಲ್ಲ,ಕೇವಲ ಜಿ.ಟಿ.ದೇವೇಗೌಡ ಮಾತ್ರ ಚರ್ಚೆ ನಡೆಸಿದ್ದರು ಎಂದು ತಿಳಿಸಿದರು.