ಬೆಂಗಳೂರು : ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.
ನಗರದ ಎಂ.ಎಸ್.ಬಿಲ್ಡಿಂಗ್ ಮುಂಭಾಗ ಜಮಾಯಿಸಿದ ನೂರಾರು ನೌಕರರು, ಸರ್ಕಾರದ ಅನ್ಯಾಯವನ್ನ ಖಂಡಿಸಿದರು. ಬನ್ನಿ ನಮ್ಮ ಹಕ್ಕಿಗಾಗಿ ಹೋರಾಡೋಣ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲವೆಂಬ ಎಚ್ಚರಿಕೆ ರವಾನಿಸೋಣ ಎಂದು ಘೋಷಣೆಗಳನ್ನು ಕೂಗಿದರು.
ರಾಜ್ಯ ಸರ್ಕಾರದ ಸಂಘಟನೆಗಳ ದಮನೀಯ ನೀತಿಗಳ ವಿರುದ್ಧದ ಮಾಡುತ್ತಿರುವ ಹೋರಾಟ ಎಂದ ಪ್ರತಿಭಟನಾಕಾರರು, ಇದು ನಮ್ಮ ನಿಮ್ಮೆಲ್ಲರ ಹೋರಾಟ, ಸಚಿವಾಲಯದ ನೌಕರರ ಹೋರಾಟವನ್ನು ಬಲಗೊಳಿಸೋಣ ಎಂದು ಘೋಷಣೆ ಹಾಕಿದರು.
ಧರಣಿ ಸತ್ಯಾಗ್ರಹಕ್ಕೆ ಸಿಕ್ಕ ಬಾರಿ ಬೆಂಬಲದಿಂದ ಮುಂದೆ ಕೆಲವೇ ದಿನಗಳಲ್ಲಿ ಸಚಿವಾಲಯದ ಬೇಡಿಕೆಗಳು ಈಡೇರುವವರೆಗೆ ಕೆಲಸಗಳ್ನು ಸ್ಥಗಿತಗೊಳಿಸಲು ಸಚಿವಾಲಯ ನೌಕರರ ಸಂಘ ಇದೇ ಸಂದರ್ಭದಲ್ಲಿ ನಿರ್ಧರಿಸಿತು. ಸಚಿವಾಲಯ ನೌಕರರ ಸಂಘದ ಕರೆ ಓಗೊಟ್ಟು ಕಚೇರಿಗೆ ರಜೆ ಹಾಕಿ ಬಾರಿ ಸಂಖ್ಯೆಯಲ್ಲಿ ಭಾಗವಹಿಸಿದ ನೌಕರರು.