ನವದೆಹಲಿ : 2021ರ ಆಗಸ್ಟ್ ತಿಂಗಳಿನಲ್ಲಿ 2,020 ಕೋಟಿ ರೂ ಜಿಎಸ್ ಟಿ ಆದಾಯ ಸಂಗ್ರಹವಾಗಿದ್ದು, ಸಿಜಿಎಸ್ಟಿ 20,522 ಕೋಟಿ ರೂ,ಎಸ್ಜಿಎಸ್ಟಿ 20,605 ಕೋಟಿ ರೂ,56,246 ಕೋಟಿ ರೂ ಐಜಿಎಸ್ಟಿ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 26,884 ಕೋಟಿ ರೂ ಒಳಗೊಂಡಂತೆ] ಮತ್ತು ಸೆಸ್ ರೂಪದಲ್ಲಿ 8,646 ಕೋಟಿ ರೂ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 646 ಕೋಟಿ ರೂ ಸೇರಿ] ಕ್ರೋಡೀಕರಣವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸರ್ಕಾರ ಸಿಜಿಎಸ್ಟಿಗೆ 23,043 ಕೋಟಿ ರೂ ಮತ್ತು ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 19,139 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪರಿಹಾರದ ರೂಪದಲ್ಲಿ ಇತ್ಯರ್ಥಪಡಿಸಿದೆ.ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ರ ಅನುಪಾತದಲ್ಲಿ ಐಜಿಎಸ್ಟಿ ಯಲ್ಲಿ ತಾತ್ಕಾಲಿಕ ಪರಿಹಾರದ ರೂಪವಾಗಿ ಕೇಂದ್ರ 24,000 ಕೋಟಿ ರೂ ಹಂಚಿಕೆ ಮಾಡಿದೆ.2021ರ ಆಗಸ್ಟ್ ನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ನಿಯಮಿತ ಮತ್ತು ತಾತ್ಕಾಲಿಕ ಆದಾಯ ಹಂಚಿಕೆಯಲ್ಲಿ ಸಿಜಿಎಸ್ಟಿಗೆ 55,565 ಕೋಟಿ ರೂ ಮತ್ತು ಎಸ್ಜಿಎಸ್ಟಿಗೆ 57,744 ಕೋಟಿ ರೂ ನೀಡುವುದನ್ನು ತೀರ್ಮಾನಿಸಿತು.
2021ರ ಆಗಸ್ಟ್ ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ30ರಷ್ಟು ಹೆಚ್ಚು ಆದಾಯ ಸಂಗ್ರಹವಾಗಿದೆ.ಕಳೆದ ವರ್ಷಕ್ಕೆ ಹೋಲಿಸಿ ದರೆ ಆಗಸ್ಟ್‌ನಲ್ಲಿ ದೇಶೀಯ ವಹಿವಾಟಿನ ಎಲ್ಲಾ ಮೂಲಗ ಳಿಂದ ಶೇ 27ರಷ್ಟು ಹೆಚ್ಚು ಆದಾಯ ಬಂದಿದೆ.2019-20ರ ಸಾಲಿ ನ ಆಗಸ್ಟ್‌ನಲ್ಲಿ 98,202 ಕೋಟಿ ರೂ ಕ್ರೋಢೀಕರಣವಾಗಿದ್ದು,ಈ ಬಾರಿ 14% ರಷ್ಟು ಪ್ರಗತಿ ದಾಖಲಿಸಿದೆ.
ಕಳೆದ 9 ತಿಂಗಳಿಂದ ಜಿ.ಎಸ್.ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ ದಾಟುತ್ತಿದ್ದು, 2021 ರ ಜೂನ್ ನಲ್ಲಿ ಕೋವಿಡ್ ಎರಡನೇ ಅ ಲೆ ಕಾರಣ ಒಂದು ಲಕ್ಷ ಕೋಟಿ ರೂಗಿಂತ ಕಡಿಮೆ ಸಂಗ್ರಹವಾಗಿತ್ತು.ಕೋವಿಡ್ ನಿಯಂತ್ರಣಗಳನ್ನು ಸುಗಮಗೊಳಿಸಿದ ಕಾರಣ ಜುಲೈ ಮತ್ತು ಆಗಸ್ಟ್‌ನಲ್ಲಿ ಒಂದು ಲಕ್ಷ ಕೋಟಿ ರೂ ಗಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿ ಕೊಳ್ಳುತ್ತಿರುವ ಸ್ಪಷ್ಟ ಸಂಕೇವಾಗಿದೆ. ವಂಚನೆ ವಿರುದ್ಧದ ಕಾರ್ಯಾಚರಣೆ,ಅದರಲ್ಲೂ ವಿಶೇಷವಾಗಿ ನಕಲಿ ಬಿಲ್ ಗಳ ವಿರುದ್ಧ ಹೆಚ್ಚಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಆರ್ಥಿಕ ಬೆಳವಣಿಗೆಯಾಗುತ್ತಿರುವ ಜತೆಗೆ ಜಿಎಸ್ಟಿ ಸಂಗ್ರಹಕ್ಕೂ ಹೆಚ್ಚಿನ ರೀತಿ ಯಲ್ಲಿ ನೆರವಾಗುತ್ತಿದೆ.ಮುಂಬರುವ ತಿಂಗಳುಗಳಲ್ಲಿಯೂ ಜಿಎಸ್ಟಿಯ ದೃಢವಾದ ಆದಾಯ ಮುಂದುವರಿಯುವ ಸಾಧ್ಯತೆಯಿದೆ ಎಂದು ಕೇಂದ್ರ ವಾಣಿಜ್ಯ ಮಂತ್ರಾಲಯ ತಿಳಿಸಿದೆ.