ಡಾ. ಅಶ್ವತ್ಥನಾರಾಯಣ ನಿವಾಸಕ್ಕೆ ಅರುಣ್ ಸಿಂಗ್ ಭೇಟಿ

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು,  ಇಂದು ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ನಗರದ ಆರ್‌ ಎಂ ವಿ ಬಡಾವಣೆಯಲ್ಲಿರುವ ಸಚಿವರ ನಿವಾಸಕ್ಕೆ ಬಂದ ಅರುಣ್ ಸಿಂಗ್,  ಉಪಾಹಾರ ಸೇವಿಸಿ, ಕೆಲವೊತ್ತು ಮಾತುಕತೆ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಷಯದಲ್ಲಿ ಮುಂಚೂಣಿಯಲ್ಲಿ ಇರುವ ಸಚಿವರ ಕ್ರಮವನ್ನು ಸಿಂಗ್ ಅವರು ಶ್ಲಾಘಿಸಿದರು.

ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಪ್ರವಾಸ ನಡೆಸುತ್ತಿರುವ ಅರುಣ್ ಸಿಂಗ್ ಅವರು ಪಕ್ಷದ ವಿವಿಧ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ಧರಾಜು ಸೇರಿದಂತೆ ಇತರರು ಇದ್ದರು.

More News

You cannot copy content of this page