ಲಸಿಕೆ ಪಡೆಯದಿದ್ದರೆ ಪಡಿತರ,ಪಿಂಚಣಿ ಇಲ್ಲವೆಂದ ಡಿಸಿ ವಿರುದ್ದ ಸಚಿವ ಈಶ್ವರಪ್ಪ ಕೆಂಡಾಮಂಡಲ

ಬೆಂಗಳೂರು: ಕೋವಿಡ್ ಲಸಿಕೆ ಪಡೆಯುದಿದ್ದರೆ ಪಡಿತರ,ಪಿಂಚಣಿ ಇಲ್ಲವೆಂದ ಆ ಜಿಲ್ಲಾಧಿಕಾರಿ ಯಾರು ಎಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ವಿರುದ್ಧ ಸಚಿವ ಈಶ್ವರಪ್ಪ ಗುಡುಗಿದ್ದಾರೆ.ಪ್ರಧಾನ ಮಂತ್ರಿಗಿಂತ ಜಿಲ್ಲಾಧಿಕಾರಿ ದೊಡ್ಡವರಾ ಎಂದು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವ ಕೆ.ಎಸ್‌.ಈಶ್ವರಪ್ಪ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಯಾರ್ರೀ.ಲಸಿಕೆ ಪಡೆಯದಿದ್ದರೆ ಪಡಿತರವಿಲ್ಲ,ಪಿಂಚಣಿಯೂ ಇಲ್ಲವೆನ್ನಲು ಡಿಸಿ ಹೇಳುವುದಕ್ಕೆ ಅವನು ಯಾರು..!? ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ.ನವೆಂಬರ್ ತನಕ ಉಚಿತ ವಿತರಣೆ ಕೊಡುವುದಾಗಿ ನರೇಂದ್ರ ಮೋದಿಯವರೇ ಸ್ಪಷ್ಟಪಡಿಸಿ ದ್ದಾರೆ.ಆದರೂ ಈ ಜಿಲ್ಲಾಧಿಕಾರಿ ಆದೇಶ ಉತ್ಪ್ರೇಕ್ಷೆ ಆಗಿದೆ.ಸರ್ಕಾರದಿಂದ ಆ ಜಿಲ್ಲಾಧಿಕಾರಿಗಳಿಗೆ ಏನೂ ಹೇಳಿಲ್ಲ.ಹಾಗಿದ್ದಾಗ ಇವರ್ಯಾರು ಹೇಳೋದಕ್ಕೆ? ಯಾವ ಲೆಕ್ಕದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಪ್ರಧಾನ ಮಂತ್ರಿಗಿಂತ ಜಿಲ್ಲಾಧಿಕಾರಿ ದೊಡ್ಡವರಾ ಎಂದು ಅವರು ಪ್ರಶ್ನಿಸಿದರು.

ಮೋದಿ ಮೈಲೇಜ್ ಕಡಿಮೆಯಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡದ ಈಶ್ವರಪ್ಪ, ದೇಶದಲ್ಲಿ ಮೋದಿ ಅಲೆ ಇನ್ನೂ ಇದೆ.ಮೈಲೇಜ್ ಕಡಿಮೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ‌.ಎಲ್ಲದಕ್ಕೂ ಚುನಾವಣೆಯೇ ಅಳತೆಗೋಲು.ಸುಳ್ಳು ಯಾರು ಹೇಳುತ್ತಿದ್ದಾರೆ ಎನ್ನೋದು ಗೊತ್ತಾಗು ತ್ತಿದೆ.ಮುಂದೆ ನಾನೇ ಮುಖ್ಯಮಂತ್ರಿ ಎಂದು ಅವರು  ಹೇಳಿದ್ದರು.ಎರಡು ಕ್ಷೇತ್ರ ದಲ್ಲಿ ಚುನಾವಣೆ ನಿಂತು ಒಂದು ಕಡೆ ಸೋತರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟ್ ಬರಲ್ಲ ಅಂತ ಹೇಳಿದ್ದರು.ಆದರೆ ಏನಾಯಿತು? ಯಾರು ಸುಳ್ಳು ಹೇಳಿದ್ದು? ಬೆಳಗಾವಿ ಉಪಚುನಾವಣೆ ಯಾರು ಗೆದ್ದರು?. ಸಿದ್ದರಾಮಯ್ಯ ಅಂದರೆ ಸುಳ್ಳು.ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದು ಬಿಜೆಪಿ.ದೇಶದಲ್ಲಿ,ಎಲ್ಲ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದೆ.ಕಾಂಗ್ರೆಸ್ ಎಲ್ಲೆಡೆ ನೆಲ ಕಚ್ಚುತ್ತಿದೆ ಎಂದು ಸಿದ್ದರಾಮಯ್ಯಗೆ ಅವರು ತಿರುಗೇಟು ನೀಡಿದರು.

ಗಣೇಶ ಹಬ್ಬಕ್ಕೆ ಅವಕಾಶ ಕೊಡಲಾಗುತ್ತೆ : ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ.ರಾಜ್ಯದ ಜನರ ಆರೋಗ್ಯ ಮುಖ್ಯ.ಗಣೇಶ ಹಬ್ಬವನ್ನು ಆಚರಿಸಲು ಯಾವುದೇ ತೊಂದರೆ ಇಲ್ಲ.ಆದರೆ ಯಾವ ರೀತಿ ಆಗಬೇಕು ಅಂತಾ ನಿರ್ಧರಿಸುವುದು ಬಾಕಿ ಇದೆ.ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಮೆರವಣಿಗೆ ಮಾಡುತ್ತಿದ್ದರು.ಆದರೆ ಈಗ ಮೆರವಣಿಗೆ ಬೇಡ ಅಂತ ಹಿಂದೂ ಮಹಾಸಭಾ ತೀರ್ಮಾನ ಮಾಡಿದೆ.ಆದರೂ ಸರ್ಕಾರ ಹಬ್ಬ ಆಚರಣೆಗೆ ಅವಕಾಶ ಕೊಡುತ್ತೇವೆ.ಆದರೆ ಯಾವ ರೀತಿ ಆಗಬೇಕು ಎಂದು ಸರ್ಕಾರ ತೀರ್ಮಾನ ಮಾಡಲಿದೆ ಎಂದರು.

ಬಿಜೆಪಿ ಟ್ವೀಟ್ ಸಮರ್ಥನೆ : ಸಿದ್ದರಾಮಯ್ಯ ಚಿಕಿತ್ಸೆ ಪಡೆದು ಬಂದ ಬಳಿಕ ಬಿಜೆಪಿ ಟ್ವೀಟ್ ಮಾಡಿದ ವಿಚಾರವನ್ನು ಸಮರ್ಥಿಸಿ ಕೊಂಡ ಅವರು,ಡಿ.ಕೆ ಶಿವಕುಮಾರ್,ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.ಷಡ್ಯಂತ್ರ ಮಾಡಿಕೊಂಡಿ ದ್ದಾರೆ.ಇರೋದೆ ಇಬ್ಬರು,ಮೂವರು.ಅವರೇ ಕಾಲೆಳೆದುಕೊಳ್ಳುತ್ತಿದ್ದಾರೆ.ಅದಕ್ಕೆ ಪಂಚ ಕೌರವರು ಅಂತ ಹೇಳಿದ್ದೇನೆ ಎಂದರು.

ಯಡಿಯೂರಪ್ಪ ರಾಜ್ಯ ಪ್ರವಾಸ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.ಯಡಿಯೂರಪ್ಪ ಈಗಾಗಲೇ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ.ಶಾಸಕರ, ಸಚಿವರ ಜೊತೆ ಪ್ರವಾಸ ಮಾಡುತ್ತೇನೆ ಅಂತ ಸ್ಪಷ್ಟಪಡಿ ಸಿದ್ದಾರೆ.ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು‌.

ಹೆಚ್ಡಿಕೆಗೆ ಟಾಂಗ್ : ಬಿಜೆಪಿಯಲ್ಲಿ ಯಾರೂ ದಲ್ಲಾಳಿಗಳಿಲ್ಲ.ಬಿಜೆಪಿಯಲ್ಲಿ ದಲ್ಲಾಳಿ ಯಾರು ಅಂತ ಕುಮಾರಸ್ವಾಮಿ ಅವರೇ ಹೇಳಬೇಕು.ಸಾ.ರಾ.ಮಹೇಶ್,ನಾನು ಸ್ನೇಹಿತರು.ನಾನು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದೇನೆ.ಸಿದ್ದರಾಮಯ್ಯ ನನ್ನ ಮಗಳ ಮದುವೆಗೆ ಬಂದಿದ್ದಾರೆ.ರಾಜಕೀಯದಲ್ಲಿ ಯಾರೂ ಶತ್ರುಗಳೂ ಇಲ್ಲ,ಮಿತ್ರರೂ ಇಲ್ಲ.ಜೆಡಿಎಸ್ ಸುಮ್ಮನಿದ್ದಿದ್ದಕ್ಕೆ ನಾವು ಮೈಸೂರಿನಲ್ಲಿ ಮೇಯರ್ ಆದೆವು. ದಲ್ಲಾಳಿತನ ಮಾಡುವವರಿಗೆ,ದಲ್ಲಾಳಿತನ ಗೊತ್ತಿರಲಿದೆ ಎಂದು ಅರುಣ್ ಸಿಂಗ್ ದಲ್ಲಾಳಿ ಎಂದಿದ್ದ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

More News

You cannot copy content of this page