ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧರಿಸಿ ತೆರೆಕಾಣುತ್ತಿರುವ ತಲೈವಿ ಸಿನಿಮಾ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್, ಜಯಲಲಿತಾ ಅವರ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಸ್ಟಿಲ್ಸ್ ಮತ್ತು ಸಿನಿಮಾದ ಪ್ರೋಮೋ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರುವಂತೆ ಮಾಡಿದೆ.
ತಮಿಳುನಾಡು ರಾಜಕಾರಣದಲ್ಲಿ ಅಚ್ಚಳಿಯದೇ ನೆನಪಾಗಿ ಉಳಿದಿರುವ ಅಮ್ಮಾ ಎಂದೇ ಕರೆಯಲ್ಪಡುವ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ಇದಾಗಿರುವುದರಿಂದ ಇದನ್ನು ಥಿಯೇಟರ್‌ನಲ್ಲಿ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಬಹುನಿರೀಕ್ಷಿತ ಈಚಿತ್ರ ಸೆಪ್ಟೆಂಬರ್ ೧೦ ರಂದು ಚಿತ್ರ ಮಂದಿರಗಳಿಗೆ ಲಗ್ಗೆ ಇಡಲಿದೆ. ಜಯಲಲಿತಾ ಅವರ ರೀತಿಯಲ್ಲಿ ಕಾಸ್ಟ್ಯೂಮ್ ಧರಿಸಿರುವ ಕಂಗನಾ ರಣಾವತ್ ಅವರ, ಲುಕ್ ಸಖತ್ತಾಗಿಯೇ ಅಭಿಮಾನಿಗಳನ್ನು ಸೆಳೆದಿದೆ. ಜಯಲಲಿತಾ ಸಿನಿಮಾ ರಂಗದಲ್ಲಿ ನಟಿಸಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಎಂಜಿಆರ್ ಜತೆ ನಟಿಸಿರುವ ಚಿತ್ರಗಳು ಸೂಪರ್ ಡೂಪರ್ ಹಿಟ್ಟ ಚಿತ್ರಗಳಾಗಿದ್ದವು.
ರಾಜಕಾರಣದಲ್ಲಿಯೂ ಸಾಕಷ್ಟು ಏಳು ಬೀಳು, ಅವಮಾನ ಎದುರಿಸಿ ಬೆಳೆದ ದಿಟ್ಟ ಮಹಿಳೆ ಜಯಲಲಿತಾ. ಸಿಎಂ ಆಗಿ ಮಿಂಚಿದ್ದ ಜಯಲಲಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂಥ ರೋಚಕ ಇತಿಹಾಸವುಳ್ಳ ಜಯಲಲಿತಾ ಜೀವನಾಗಾಥೆ, ಚಲನಚಿತ್ರದಲ್ಲಿ ಯಾವ ರೂಪದಲ್ಲಿ ಮೂಡಿ ಬಂದಿದೆ ಎನ್ನುವುದು ಈಗ ಕುತೂಹಲಕ್ಕೆಡೆ ಮಾಡಿರುವ ಸಂಗತಿ