ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ,ಬಿಜೆಪಿ ಮತ್ತೆ ಅಧಿಕಾರಕ್ಕೆ : ಗೃಹ ಸಚಿವ ಅಮಿತ್ ಶಾ

ದಾವಣೆಗೆರೆ : ಕರ್ನಾಟಕದಲ್ಲಿ ಅಭಿವೃದ್ಧಿಯ ಶಕೆಯು ಬಿಜೆಪಿ ಮತ್ತು ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಆರಂಭವಾ ಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಅಧಿಕಾರ ಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿಂದು ಒಟ್ಟು 50 ಕೋಟಿ ರೂ.ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ  ಗೃಹ ಸಚಿವ ಅಮಿತ್ ಶಾ ಉದ್ಘಾಟನೆ ನೆರವೇರಿಸಿದರು. ನಗರದಲ್ಲಿ ಗಾಂಧಿ ಭವನ,ಪೊಲೀಸ್ ಪಬ್ಲಿಕ್ ಶಾಲೆ ಮತ್ತು ಜಿಎಂ ತಾಂತ್ರಿಕ ಸಂಸ್ಥೆಯ ಕೇಂದ್ರೀಯ ಗ್ರಂಥಾಲಯಕ್ಕೆ ಚಾಲನೆ ನೀಡಿದರು.ಇದೇ ವೇಳೆ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು,ತಮ್ಮ ಪಕ್ಷ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕದ ಮುಖ್ಯ ಮಂತ್ರಿಯ ಜವಾಬ್ದಾರಿಯ ನ್ನು ನೀಡಲು ನಿರ್ಧರಿಸಿತು.ಯಡಿಯೂರಪ್ಪ ಅವರು ತಮ್ಮ ಎರಡೂ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿಗೆ,ಗ್ರಾಮಗಳ ಮತ್ತು ರೈತರ ಅಭಿವೃದ್ಧಿಗೆ ಸಿಕ್ಕ ಎಲ್ಲಾ ಅವಕಾಶ ಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.ಕರ್ನಾಟಕದಲ್ಲಿ ಅಭಿವೃದ್ಧಿಯ ಶಕೆ ತಮ್ಮ ಪಕ್ಷ ಮತ್ತು ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಆರಂಭವಾಗಿದೆ.ಬೊಮ್ಮಾಯಿ ಅವರ ನೇತೃತ್ವದಲ್ಲಿ,ನಮ್ಮ ಪಕ್ಷ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೆಲವು ಸಣ್ಣ ಆದರೆ ಮಹತ್ವದ ಉಪಕ್ರಮಗಳನ್ನು ಕೈಗೊಂಡಿದ್ದು, ಪೊಲೀಸರಿಂದ ಗೌರವ ರಕ್ಷೆ ಸೇರಿದಂತೆ ವಿವಿಐಪಿ ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಟ್ಟಳೆಗಳನ್ನು ತೆಗೆದು ಹಾಕುವ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಪಾರದರ್ಶಕತೆ ತರಲು ಪ್ರಯತ್ನಿಸಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷದಿಂದ ಭಾರತ ಮತ್ತು ವಿಶ್ವ ಸಾಂಕ್ರಾಮಿಕವನ್ನು ಎದುರಿಸುತ್ತಿದೆ.ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಕೋವಿಡ್ -19 ವಿರುದ್ಧ ಉತ್ತಮವಾಗಿ ಹೋರಾಡುತ್ತಿದೆ. ಅದರಿಂದಾಗಿಯೇ ಇಂದು ನಾವು ಬಹುತೇಕ ಅದರಿಂದ ಹೊರಬರುತ್ತಿದ್ದೇವೆ.ಭಾರತದಲ್ಲಿ ಸಂಪೂರ್ಣ ಸಮರ್ಥವಾಗಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿದ್ದು,ದೇಶದಲ್ಲಿ ಸಾಕಷ್ಟು ಸಮರ್ಥ ವಾಗಿ ನಡೆಸುತ್ತಿದೆ.ಇಂದು ಭಾರತವು ಹೆಚ್ಚಿನ ಜನರಿಗೆ ಲಸಿಕೆ ಹಾಕಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಕೋವಿಡ್ -19 ವಿರುದ್ಧ ಉತ್ತಮವಾಗಿ ಹೋರಾಡಿದೆ.ಈವರೆಗೆ ಸುಮಾರು 5 ಕೋಟಿ 20 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.ಈ ಪೈಕಿ 4 ಕೋಟಿ ಜನರಿಗೆ ಪ್ರಥಮ ಡೋಸ್ ನೀಡಲಾಗಿದ್ದರೆ,1 ಕೋಟಿ 16 ಲಕ್ಷ ಜನರಿಗೆ 2ನೇ ಡೋಸ್ ನೀಡಲಾಗಿದೆ ಎಂದರು.ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ ಅಂತ್ಯ ದ ವೇಳೆಗೆ ಬಹುತೇಕ ಶೇ.90ರಷ್ಟು ಜನಸಂಖ್ಯೆಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದಾ ಬಡವರು,ಹಿಂದುಳಿದವರು ಮತ್ತು ಬುಡಕಟ್ಟು ಜನರ ಬಗ್ಗೆ ಚಿಂತಿಸುತ್ತಾರೆ. ಯಾವುದೇ ಮನೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗದಂತೆ ಕೇಂದ್ರ ಸರ್ಕಾರ ಖಾತ್ರಿ ಪಡಿ ಸಿದೆ.ಮೊದಲ ಮತ್ತು ಎರಡನೇ ಅಲೆಯ ವೇಳೆ ಪ್ರತಿಯೊಬ್ಬ ವ್ಯಕ್ತಿಗೂ ಮೇ ತಿಂಗಳಿಂದ ನವೆಂಬರ್ ವರೆಗೆ ದೇಶದ 80 ಕೋಟಿ ಜನರು ತಲಾ 5 ಕೆ.ಜಿ ಆಹಾರ ಧಾನ್ಯವನ್ನು ಉಚಿತವಾಗಿ 10 ತಿಂಗಳುಗಳ ಕಾಲ ಪಡೆದುಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಮೂರನೇ ಅಲೆಯ ಸಂಭಾವ್ಯತೆಯ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಕೋವಿಡ್ -19 ವಿರುದ್ಧ ಹೋರಾ ಡಲು ಪ್ರತಿಯೊಂದು ರಾಜ್ಯ,ನಗರ,ಪಟ್ಟಣಕ್ಕೆ ಕೋಟ್ಯಂತರ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿದೆ. ಆಮ್ಲಜನಕ ಉತ್ಪಾದನೆಯಲ್ಲಿ ದೇಶ ಅತಿ ಶೀಘ್ರವೇ ಸ್ವಾವಲಂಬಿಯಾಗಲಿದ್ದು ಆತ್ಮನಿರ್ಭರವಾಗಲಿದೆ ಎಂದು ಅವರು ಪ್ರಕಟಿಸಿದರು.

More News

You cannot copy content of this page