ಬಿಜೆಪಿಯವರು ಆರ್.ಶಂಕರ್ ರನ್ನು ಬಲಿ ತೆಗೆದುಕೊಂಡಿದ್ದಾರೆ : ಡಿ.ಕೆ.ಶಿವಕುಮಾರ್ ಲೇವಡಿ

The BJP has sacrificed R. Shankar

ಬೆಂಗಳೂರು : ರಾಜಕೀಯವಾಗಿ ನೀವು ಇನ್ನು ಶಕ್ತಿ ಪಡೆಯಬೇಕು,ಇನ್ನೂ ಬೆಳೆಯಬೇಕಿದೆ.ದೇವರು ಬಲಿ ತೆಗೆದು ಕೊಳ್ಳುವಾಗ ಕುದುರೆ,ಆನೆ,ಹುಲಿಯನ್ನು ಬಲಿ ಕೇಳುವುದಿಲ್ಲ.ಬಲಿ ಕೇಳುವುದು ಕುರಿ,ಕೋಳಿ,ಹೆಚ್ಚೆಂದರೆ ಕೋಣ ಮಾತ್ರ.ಅವು ಸಾಕು ಪ್ರಾಣಿ ಗಳೆಂದು.ಆದೇ ರೀತಿ ಬಿಜೆಪಿ ಅವರು ಆರ್.ಶಂಕರ್ ಅವರನ್ನು (ಮಾಜಿ ಸಚಿವ) ಬಲಿ ತೆಗೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಮುದಾಯದ ಮುಖಂಡರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಐತಿಹಾಸಿಕ ಶ್ರೇಷ್ಠ ವ್ಯಕ್ತಿ ಮಡಿವಾಳ ಮಾಚಯ್ಯ ಅವರ ಪಾದಗಳಿಗೆ ನಮಿಸುತ್ತೇನೆ.ನಿಮ್ಮ ಸಮುದಾಯಕ್ಕೂ ನನಗೂ ಬಹಳ ಆತ್ಮೀಯ ಸಂಬಂಧ ಇದೆ.ನೀವು ನಿಮ್ಮ ನೋವು ಹೇಳಿಕೊಂಡಿದ್ದೀರಿ.ನೀವು ಯಾರಿಗೂ ಕಮ್ಮಿ ಇಲ್ಲ.ನಾನು ಪಕ್ಷದ ಅಧ್ಯಕ್ಷನಾದ ನಂತರ ಅನೇಕ ಸಮುದಾಯದ ನಾಯಕರು ನನ್ನನ್ನು ಭೇಟಿ ಮಾಡಿ ಸನ್ಮಾನ ಮಾಡಲು ಅವಕಾಶ ಕೋರಿದರು.ಆಗ ನಾನು,ಯಾರೂ ಬರಬೇಡಿ,ನಾನೇ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿದ್ದೆ.

ಪಕ್ಷದ ಅಧ್ಯಕ್ಷನಾಗಿ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ.ಬಸವಣ್ಣ,ಗಾಂಧಿ ಸೇರಿದಂತೆ ಹಲವರ ವಿಚಾರ ನಮ್ಮ ಸಿದ್ಧಾಂತ.ಯಾರಿಗೆ ಧ್ವನಿ ಇಲ್ಲವೋ ಅವರಿಗೆ ಧ್ವನಿ ನೀಡಬೇಕು.ನೊಂದವರ ಪರ ನಿಲ್ಲಬೇಕು ಎಂದು ನಾನೇ ಎಲ್ಲ ಸಮುದಾಯದವರನ್ನು ಭೇಟಿ ಮಾಡುತ್ತಿದ್ದೇನೆ.ನಾನು ಮೀನುಗಾರರನ್ನು ಭೇಟಿ ಮಾಡಿದ್ದೇನೆ.ಒಬ್ಬ ಮೀನು ಗಾರರನಿಂದ 10 ಉದ್ಯೋಗ ಸೃಷ್ಟಿಯಾಗುತ್ತದೆ.ನೇಕಾರರನ್ನು ಭೇಟಿ ಮಾಡಿದ್ದೇನೆ.ತಿಗಳರ ಸಮುದಾಯದವರನ್ನು ಭೇಟಿ ಮಾಡಿ ದ್ದೇನೆ. ಇಂದು ನಿಮ್ಮ ಬಳಿ ಬಂದಿದ್ದೇನೆ ಎಂದು ಅವರು ವಿವರ ನೀಡಿದರು.

ನೀವಿಲ್ಲದೇ ಈ ಸಮಾಜ ಇಲ್ಲ.ನೀವು ಬಟ್ಟೆ ಸ್ವಚ್ಛ ಮಾಡಿಕೊಡದಿದ್ದರೆ ಆಗುವುದಿಲ್ಲ.ನೀವು ಸಾಂಪ್ರದಾ ಯಿಕ ವೃತ್ತಿ ಉಳಿಸಿಕೊಂ ಡು ಬರುತ್ತಿರುವವರು.ನಿಮಗೆ ನಾವು ಶಕ್ತಿ ತುಂಬಬೇಕು.ನಿಮ್ಮಲ್ಲಿ ಕೆಲವರು ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ.ಇಲ್ಲಿರುವ ಅನೇಕ ನಾಯಕರು ನಮ್ಮ ಸ್ನೇಹಿತರು.ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ.ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇ ನೆ.ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ವಿಚಾರಗಳ ಬಗ್ಗೆ ನಿರ್ಧಾರ ಕೈ ಗೊಳ್ಳುತ್ತೇನೆ. ನಮ್ಮ ಪಕ್ಷ ರಾಷ್ಟ್ರ ಮಟ್ಟದಲ್ಲಿ ಜಾತಿ,ಧರ್ಮಗಳ ವಿಚಾರವಾಗಿ ಚರ್ಚೆ ಮಾಡುತ್ತಿದೆ.ನಿಮ್ಮ ನೋವು,ಸಮಸ್ಯೆಗೆ ಧ್ವನಿ ಯಾಗಿ ಕಾಂಗ್ರೆಸ್ ಪಕ್ಷ ಇರುತ್ತದೆ.ನಾನು ಕೂಡ ನಿಂತಿರುತ್ತೇನೆ.ನಿಮ್ಮ ಬೇಡಿಕೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ನಾವು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ ಮೇಲೆ ಅದನ್ನು ಪೂರೈಸದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಭರವಸೆ ನೀಡಿದರು.

ಈಗ ಎಲ್ಲರಿಗೂ ಜಾತಿ ಪಿಡುಗು ಬಂದಿದೆ.ಎಲ್ಲರೂ ಬಂದು ತಮ್ಮ,ತಮ್ಮ ಸಮುದಾಯಗಳ ಬಗ್ಗೆ ಲಕ್ಷ,ಲಕ್ಷಗಳಲ್ಲಿ ಲೆಕ್ಕ ಕೊಡುತ್ತಾರೆ.ಅವರ ಲೆಕ್ಕ ಕೇಳಿದರೆ ರಾಜ್ಯದ ಜನಸಂಖ್ಯೆ 20 ಕೋಟಿ ದಾಟುತ್ತದೆ.ನಿಮ್ಮ ನೋವು ಕೇಳಲು ಬೇರೆಯವರು ಬಂದಿದ್ದರೋ ಇಲ್ಲವೋ ನನಗೆ ಬೇಕಿಲ್ಲ.ಆದರೆ ರಾಜಕಾರಣಿಗಳು ನಿಮಗೆ ಅನ್ಯಾಯ ಮಾಡಿಕೊಂಡು ಬಂದಿರುವುದು ನಿಜ.ಅದನ್ನು ಸರಿಪಡಿಸಿ ನಿಮಗೆ ನ್ಯಾಯ ಒದಗಿಸಬೇಕು ಎಂಬುದು ನನ್ನ ಸಂಕಲ್ಪ.ಈ ಹಿಂದೆ ಕಾಂಗ್ರೆಸ್ ಸರ್ಕಾರ ನಿಮ್ಮ ಸಮುದಾಯಕ್ಕೆ ಅನೇಕ ನೆರವು ನೀಡಿದೆ. ಮುಂದೆಯೂ ನೀಡಲಿದೆ.ಕಾಂಗ್ರೆಸ್ ಮನೆ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೀವು ಎಷ್ಟೇ ದೊಡ್ಡವರಾಗಿ ಬೆಳೆದರೂ ನಿಮ್ಮ ವೃತ್ತಿಯನ್ನು ಮಾತ್ರ ಬಿಡಬೇಡಿ.ಅದೇ ನಿಮ್ಮ ಹೆಮ್ಮೆ. ನಿಮ್ಮ ಪರವಾಗಿ ಎಲ್ಲಿ,ಯಾವ ರೀತಿ ಹೋರಾಡಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಅವರಲ್ಲಿ ಜಾಗೃತಿ ಮೂಡಿಸಿದರು.

More News

You cannot copy content of this page