ಬೆಂಗಳೂರು : ಬೆಳಗಾವಿ,ಹುಬ್ಬಳ್ಳಿ-ಧಾರವಾಡ,ಕಲಬುರಗಿ ಮಹಾನಗರ ಪಾಲಿಕೆಗಳು ಸೇರಿದಂತೆ 20 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು ಮತದಾನ ಆರಂಭವಾಗಿದೆ.
ಇದರ ಜೊತೆಗೆ ದೊಡ್ಡಬಳ್ಳಾಪುರ ನಗರಸಭೆ ಮತ್ತು ತರೀಕೆರೆ ಪುರಸಭೆ,ಬೀದರ್ ಮತ್ತು ಭದ್ರಾವತಿ ಈ ಎರಡು ನಗರಸಭೆಗಳಲ್ಲಿನ ಮೂರು ವಾರ್ಡ್ಗಳು ಸೇರಿದಂತೆ 12 ಜಿಲ್ಲೆಗಳ 20 ಸ್ಥಳೀಯ ಸಂಸ್ಥೆಗಳಲ್ಲಿನ 20 ವಾರ್ಡ್ಗಳಿಗೆ ಉಪಚುನಾವಣೆಗೆ ಮತದಾನ ಬೆಳಗ್ಗೆ 7ಗಂಟೆಯಿಂದ ಆರಂಬವಾಗಿದೆ.ಸೆ. 6, ಸೋಮವಾರದಂದು ಫಲಿತಾಂಶ ಪ್ರಕಟವಾಗಲಿದೆ.
ಅತ್ಯಂತ ಪ್ರತಿಷ್ಠೆಯ ಕಣವಾಗಿರುವಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಟ್ಟು 82 ವಾರ್ಡ್ ಗಳಿಗೆ ಮತದಾನ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ 82 ವಾರ್ಡಗಳಿಗೆ,ಜೆಡಿಎಸ್ 49 ,ಆಮ್ ಆದ್ಮಿ ಪಕ್ಷ 41 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಬೆಳಗಾವಿ ಮಹಾನಗರ ಪಾಲಿಕೆ 58 ವಾರ್ಡ್ಗಳಿಗೆ 385 ಅಭ್ಯರ್ಥಿಗಳು ಸ್ಪರ್ಧಿಸಿದ್ದು,ಬಿಜೆಪಿ 55,ಕಾಂಗ್ರೆಸ್ 45,ಎಂಇಎಸ್ ಪಕ್ಷದಿಂದ 21,ಆಮ್ ಆದ್ಮಿ ಪಕ್ಷ 27 ವಾರ್ಡ್ಗಳಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ.ಬೆಳಗಾವಿ ನಗರ ವ್ಯಾಪ್ತಿಯಲ್ಲಿ 4,28,364 ಮತದಾರರು ಇದ್ದು,ಇದೇ ಮೊದಲ ಬಾರಿಗೆ ಪಕ್ಷಗಳ ಚಿಹ್ನೆಯ ಚುನಾವಣೆ ನಡೆಯುತ್ತಿದೆ.ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯಾಗಿದೆ. ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಕೈತಪ್ಪಿದರೂ ನಗರದ ಮೇಲೆ ಹಿಡಿತ ಸಾಧಿಸಲು ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ ಅಂಡ್ ಟೀಂ ಟಿಕೆಟ್ ಆಕಾಂಕ್ಷಿಗಳ ಬಂಡಾಯ ನಡುವೆಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸಿವೆ. ಅಂತೆಯೇ ಕಾಂಗ್ರೆಸ್ ಪಕ್ಷವೂ ಸಹ ಸಾಕಷ್ಟು ಹರಸಾಹಸಕ್ಕೆ ಕೈಹಾಕಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನನ ನಡೆಸಿದೆ.

ಕಲಬುರಗಿ ಮಹಾನಗರ ಪಾಲಿಕೆಗೆ ಏಳು ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದೆ.ಪಾಲಿಕೆಯಲ್ಲಿ ಒಟ್ಟು 55 ವಾರ್ಡ್ಗಳಿದ್ದು 305 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ..5,19,464 ಮತದಾರರು 55 ವಾರ್ಡ್ಗಳ ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ, 27 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿದ್ದು ಪಾಲಿಕೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಲಿದ್ದಾರೆ.

ಜೊತೆಗೆ ಬಾಗಲಕೋಟೆ ಸೇರಿ 12 ಜಿಲ್ಲೆಗಳಲ್ಲಿನ 20 ಸ್ಥಳೀಯ ಸಂಸ್ಥೆಗಳಲ್ಲಿ 20 ವಾರ್ಡ್ಗಳಿಗೆ ಉಪಚುನಾವಣೆ ಮತದಾನ ಆರಂಭ ವಾಗಿದೆ.7 ನಗರಸಭೆ ವಾರ್ಡ್ಗಳು,7 ಪುರಸಭೆ ವಾರ್ಡ್ಗಳು ಮತ್ತು 6 ಪಟ್ಟಣ ಪಂಚಾಯತ್ ವಾರ್ಡ್ಗಳಿಗೂ ಮತದಾನ ನಡೆಯು ತ್ತಿದ್ದು ಮತದಾರ ಆಡಳಿತ ಪಕ್ಷ ಅಥವಾ ವಿಪಕ್ಷಗಳ ಕಡೆಗಿದೇಯಾ ಎಂಬುದು ಸ್ಪಷ್ಟವಾಗಲಿದೆ..