ಬೆಂಗಳೂರು : ಸಾರ್ವಜನಿಕವಾಗಿ ಗೌರಿ ಗಣೇಶನ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಷರತ್ತು ಬದ್ಧಅನುಮತಿ ನೀಡಿದೆ.ಕೇವಲ ಐದು ದಿನಗಳಿಗೆ ಸೀಮಿತಗೊಳಿಸಿ ಗಣೇಶೋತ್ಸವ ಆಚರಿಸಲು ಮುಖ್ಯಮಂತ್ರಿ ನೇತೃತ್ವದ ಸಮಿತಿ ಸಭೆ ತೀರ್ಮಾನಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ಹಿರಿಯಅಧಿಕಾರಿಗಳು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚೆರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ,ಗಣೇಶ ಚತುರ್ಥಿ ಸಂಬಂಧ ಸುಧೀರ್ಘ ಚೆರ್ಚೆ ನಡೆಸಲಾಗಿ ದೆ.ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಷರತ್ತು ಬದ್ದ ಅವಕಾಶ ಕಲ್ಪಿಸಲಾಗಿದೆ.ಕನಿಷ್ಟ ಮೂರು ದಿನ,ಗರಿಷ್ಟ ಐದು ದಿನದೊಳಗೆ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಬೇಕು ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳಲ್ಲಿ ವಾರ್ಡ್ ಗೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದೆ.ಹಳ್ಳಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಗಣೇಶ ಮೂರ್ತಿ ಇಡಬಹುದು.ಅದನ್ನು ಸ್ಥಳೀಯ ಆಡಳಿತ,ತಹಶೀಲ್ದಾರ್ ಮತ್ತು ಪೊಲೀಸರು ತೀರ್ಮಾ ನಿಸಲಿದ್ದಾರೆ. 50/50 ಪೆಂಡಾಲ್ ಹಾಕಿ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು.ಯಾವುದೇ ಸಾಂಸ್ಕೃತಿಕ ಮೆರವ ಣಿಗೆ,ಕಾರ್ಯಕ್ರಮ ಮಾಡುವಂತಿ ಲ್ಲ.ಕಡಿಮೆ ಜನರನ್ನು ಒಳಗೊಂಡು ಮೂರ್ತಿಯನ್ನು ವಿಸರ್ಜನೆ ಮಾಡಬೇಕು.ಡಿಜೆ,ಆರ್ಕ್ಯಾಸ್ಟ್ರಾ,ನಾಟಕ ನಡೆಸು ವಂತಿಲ್ಲ.ರಾತ್ರಿ 9 ಗಂಟೆ ಮೇಲೆ ಉತ್ಸವ ನಡೆಸುವಂತಿಲ್ಲ ಮತ್ತು ಜನರು ಭಾಗವಹಿಸುವಂತಿಲ್ಲ. ರಾತ್ರಿ 9 ಗಂಟೆಯ ಬಳಿಕ ಕರ್ಪ್ಯೂ ಮುಂದುವರೆಸಲು ಸರ್ಕರದ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಮನೆಯಲ್ಲಿ ಎರಡು ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿಗೆ ಸೀಮಿತಗೊಳಿಸಲಾಗಿದೆ. ನಗರ ಪ್ರದೇಶಗಳಲ್ಲಿ ನಿಗದಿತ ಪ್ರದೇಶ ಮತ್ತು ನಿಗದಿತ ಸ್ಥಳಗಳಲ್ಲಿ ಮಾತ್ರ ಮೂರ್ತಿ ವಿಸರ್ಜನೆ ಮಾಡಬೇಕು.ಹಳ್ಳಿಗಳಲ್ಲಿ ಕೆರೆ,ನದಿ ಹಳ್ಳ ಕೊಳ್ಳಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬೇಕು.ಮೂರ್ತಿ ವಿಸರ್ಜನೆ ವೇಳೆ ಈಜುಪಟುಗಳನ್ನು ನಿಯೋಜಿಸಿರಬೇಕು.ಗಣೇಶ ಉತ್ಸವ ಆಚರಣೆ ಮಾಡುವವ ರು, ಸಮಿತಿಗಳು,ವೇದಿಕೆಗಳು ಕೋವಿಡ್ ಲಸಿಕೆ ತೆಗೆದುಕೊಂಡಿರಬೇಕು.ಲಸಿಕೆ ಪಡೆಯದಿದ್ದರೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ.ಅಗತ್ಯ ಬಿದ್ದರೆ ಕಾರ್ಯಕ್ರಮದ ಸ್ಥಳದಲ್ಲಿಯೇ ಲಸಿಕಾ ಡ್ರೈವ್ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶಾಲೆ,ಕಾಲೇಜುಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ.ಅಪಾರ್ಟ್ ಮೆಂಟ್ ಗಳಲ್ಲಿ 20 ಜನರ ಸೇರಬೇಕು.ಆನ್ ಲೈನ್ ಗಣಪತಿ ಪೂಜೆ,ಉತ್ಸವಕ್ಕೆಪ್ರೋತ್ಸಾಹಿಸಲಾಗುವುದು.ಪರಿಸರ ಮೂರ್ತಿ ಸ್ಥಾಪನೆಗೂ ಅವಕಾಶ ನೀಡಲಾಗಿದೆ.ಎಲ್ಲಾ ಜಿಲ್ಲೆ ಗಳಲ್ಲಿ, ವಿಧಾನ ಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವ ದಲ್ಲಿ ಸಮಿತಿಗಳನ್ನು ಮಾಡಿ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗು ವುದು. ಕರೋನಾ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಶೇ 2 ಕ್ಕಿಂತ ಹೆಚ್ಚಿನ ಸೋಂಕಿನ ಪ್ರಕರಣಗಳು ಇರುವ ಜಿಲ್ಲೆ,ತಾಲೂಕುಗಳಲ್ಲಿ ಗಣೇಶ ಮೂರ್ತಿ ಸಾರ್ವಜನಿಕ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಲಾಗಿದೆ.ಅಂತೆಯೇ ಗಡಿ ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತ ಉತ್ಸವ ಆಚರಣೆಗೆ ಪರಿಸ್ಥಿತಿ ನೋಡಿಕೊಂಡು ಅನುಮತಿ ನೀಡಲಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಗೂ ತಜ್ಞ ವೈದ್ಯರ ಸೂಚನೆ ಮೇರೆಗೆ ಎಲ್ಲಾ ಕಟ್ಟುನಿಟ್ಟಿನ ಮತ್ತು ನಿರ್ಬಂಧ ವಿಧಿಸಿ ಉತ್ಸವ ಆಚರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.