ಬೆಳಗಾವಿ : ಪಾಲಿಕೆಯ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಆದರೆ ಇದು ಅತಿರೇಕವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಜಾರ್ಜ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ನಗರದ ವಾರ್ಡ್ ನಂಬರ್ 38 ಪಕ್ಷೇತರ ಅಭ್ಯರ್ಥಿ ಅಜೀಮ ಪಟವೇಕರ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಸಂಭ್ರಮಾಚರಣೆ ವೇಳೆ ಬ್ಯಾರಿಕೇಡ್ ದಾಟಿ ಅಭ್ಯರ್ಥಿಗಳು ಮತಏಣಿಕೆ ಕೇಂದ್ರದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಸಂಭ್ರಮಾಚರಣೆ ಅತಿರೇಕವಾದ ಹಿನ್ನಲೆಯಲ್ಲಿ ಪೋಲಿಸರು ಅನಿವಾರ್ಯವಾಗಿ ಲಾಠಿ ಚಾರ್ಜಮಾಡಬೇಕಾಯಿತು ಎಂದುಹಿರಿಯ ಅಧಿಕಾರಿಗಳು ತಿಳಿಸಿದರು.
ಇದರಿಂದ ಅಪಾರ ಸಂಖ್ಯೆಯಲ್ಲಿ ಕೂಡಿದ ಕಾರ್ಯಕರ್ತರನ್ನು ಪೊಲೀಸರು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.