MLC ಫಾರೂಖ್ ಐಷಾರಾಮಿ ಕಾರು ಅಫಘಾತ : ಪ್ರಾಣಾಪಾಯದಿಂದ ಪಾರಾದ ಚಾಲಕ

ಬೆಂಗಳೂರು : ಐಷಾರಾಮಿ ಫೆರಾರಿ ಪೋರ್ಟೋಫಿನೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಘಟನೆ ನಗರದ ಯಲಹಂಕ ಪ್ಲೈಓವರ್ನಲ್ಲಿ ರಾತ್ರಿ ನಡೆದಿದೆ.

ಘಟನೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ, ಆದರೆ, ಕಾರನ್ನು ಯಾರು ಚಲಾಯಿಸುತ್ತಿದ್ದರು ಎನ್ನುವುದರ ಬಗ್ಗೆ ಪೊಲೀಸರು ಇದುವರೆಗೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

ರಾತ್ರಿ ಸುಮಾರು 9 ಗಂಟೆಗೆ ಯಲಹಂಕ ಫ್ಲೈ ಓವರ್ನಲ್ಲಿ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ. ಈ ಐಷಾರಾಮಿ ಫೆರಾರಿ ಕಾರು ಬಿ.ಎಂ ಫಾರೂಖ್ ಒಡೆತನದ್ದಾಗಿದೆ. ಬಿ.ಎಂ.ಫಾರೂಖ್ ವಿಧಾನ ಪರಿಷತ್ ನ ಜೆಡಿಎಸ್ ನ ಸದಸ್ಯರಾಗಿದ್ದಾರೆ.

ಫಾರೂಖ್ ಒಡೆತನದ MH 02 FF 5555 ನಂಬರಿನ ಕಾರು ಇದಾಗಿದ್ದು, ಕೆಲವು ದಿನಗಳ ಹಿಂದೆ ನೆಲಮಂಗಲ RTO ಅಧಿಕಾರಿಗಳು ಯು ಬಿ ಸಿಟಿ ಬಳಿ ಇದ್ದ ಈ ಕಾರನ್ನು ಸೀಜ್ ಮಾಡಿದ್ದರು.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಯಲಹಂಕ ಸಂಚಾರಿ ಠಾಣಾ ವ್ಯಾಪ್ತಿ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

More News

You cannot copy content of this page