ಬೆಂಗಳೂರು : ಹೊಸ,ಹೊಸ ವಿಧಾನಗಳ ಮೂಲಕ ಅಪರಾಧಿಗಳು ಅಪರಾಧವೆಸಗುತ್ತಿರುವ ಹಿನ್ನೆಲೆಯಲ್ಲಿ ನೂತನ ತಂತ್ರಜ್ಞಾನದ ಮೂಲಕ ಅಪರಾಧಗಳನ್ನು ಪತ್ತೆ ಮಾಡಬೇಕಾಗುತ್ತದೆ, ಇದನ್ನು ಪೊಲೀಸರು ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ನಡೆದ ಹಿರಿಯ ಅಧಿಕಾರಿಗಳ ಕಿರು ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಜೊತೆ ಜನಸ್ನೇಹಿ ಪೊಲೀಸ್ ಆಗಲು ಸೂಚಿಸಲಾಗಿದೆ ಎಂದು ತಿಳಿಸಿದರು. ಎಲ್ಲಾ ಹಿರಿಯ ಅಧಿಕಾರಿಗಳ ಡ್ಯಾಶ್ ಬೋರ್ಡ್ ಇಡಲು ಸೂಚನೆ ಮಾಡಲಾಗಿದೆ. ಯಾವುದೇ ಹಂತದಲ್ಲಿ ಆಗಲಿ ಕ್ರಿಮಿನಲ್ ಜೊತೆ ಹಾಗೂ ಮದ್ಯವರ್ತಿಗಳ ಸಂಪರ್ಕ ಪೊಲೀಸರಿಗೆ ಇರಬಾರದು ಎಂದು ತಿಳಿಸಲಾಗಿದೆ ಎಂದರು.
ಯಾವುದೇ ಪ್ರಭಾವಿ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗದೇ ತನಿಖೆ ಮಾಡಿ ಎಂದು ಸೂಚಿಸಲಾಗಿದೆ, ಗ್ಯಾಂಬ್ಲಿಂಗ್, ಮರಳು ಮಾಫಿಯಾಗಳನ್ನು ಬ್ಯಾನ್ ಮಾಡಲು ಸೂಚಿಸಿದ್ದೇನೆ ಎಂದರಲ್ಲದೆ, ಪೊಲೀಸ್ ವ್ಯವಸ್ಥೆ ಉತ್ತಮ ಪಡಿಸಲು ಎಲ್ಲಾ ರೀತಿಯ ಸೌಕರ್ಯ ನೀಡಲಾಗ್ತಿದೆ ಎಂದು ತಿಳಿಸಿದರು.