ಎರಡನೆ ಹಂತ ಶಾಲೆ ಪುನರಾರಂಭ : 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಭೌತಿಕ ತರಗತಿ

ಬೆಂಗಳೂರು : ಕೋವಿಡ್ 3ನೇ ಅಲೆ ಆತಂಕದ ನಡುವೆಯೂ ಇಂದಿನಿಂದ 6 ರಿಂದ 8 ನೇ ತರಗತಿಗಳು ಆರಂಭವಾಗಲಿವೆ. ಕೊರೋನಾ ಲಾಕ್ ಡೌನ್ ನಿಂದ 18 ತಿಂಗಳ ಮುಚ್ಚಿದ್ದ ಶಾಲೆಗಳು ಇಂದು ಮತ್ತೆ ಮಕ್ಕಳ ಕಲರವ ಕೇಳಿ ಬರಲಿದೆ.ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿ ಗಳನ್ನು ಸರ್ಕಾರ ಆರಂಭಿಸಿತ್ತು.

ಮೊದಲ ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ನಡೆದ ತರಗತಿಗಳು ವಿದ್ಯಾರ್ಥಿ ಗಳು,ಪೋಷಕರು,ಶಿಕ್ಷಕರ ಆತಂಕ ವನ್ನು ದೂರ ಮಾಡಿದೆ.ಇದೇ ವಿಧಾನ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಿ ಇಂದಿನಿಂದ 6,7,8ನೇ ತರಗತಿಗಳನ್ನು ಶಿಕ್ಷಣ ಇಲಾಖೆ ಪ್ರಾರಂಭಿಸಿದೆ.

ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಕಡೆ ಶಾಲೆಗಳನ್ನು ಆರಂಭಿಸಿದ್ದು,ಕೇರಳ ಸೇರಿದಂತೆ ಗಡಿ ಭಾಗದ ಜಿಲ್ಲೆಗಳ ತಾಲೂಕು ಗಳನ್ನು ಹೊರತುಪಡಿಸಿ ಉಳಿದೆಡೆ 6-8ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ.ಆನ್ ಲೈನ್,ವರ್ಚುವಲ್ ಮೂಲಕ ಪಾಠ,ಪ್ರವ ಚನ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಖುಷಿ ಖುಷಿಯಾಗಿ ಶಾಲೆಯತ್ತ ಹೆಜ್ಜೆ ಇಟ್ಟಿದ್ದಾರೆ. ಶಾಲಾ ಸಿಬ್ಬಂದಿಗಳು,ಶಿಕ್ಷಕರು,ಆಡಳಿತ ಮಂಡಳಿಗಳು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಸಕಲ ಸಿದ್ಧರಾಗಿದ್ದಾರೆ.ಕೊರೋನಾ ಮಾರ್ಗಸೂಚಿ ಅನುಸಾರ ಶಾಲೆಗ ಳನ್ನು ಈಗಾಗಲೇ ಸ್ವಚ್ಚ ಗೊಳಿಸಿ,ಶಾಲಾ ಆವರಣ,ಕೊಠಡಿ ,ಪೀಠೋಪಕರಣಗಳು,ಪ್ರಯೋಗಾಲಯಗಳಿಗೆ ನಿರಂತರ ಸ್ಯಾನಿಟೈಸ್ ಮಾಡಲಾಗಿದೆ.ಬೆಳಗಿನ ವಿದ್ಯಾರ್ಥಿಗಳನ್ನು ತಲಾ 20ರಂತೆ ತಂಡಗಳಾಗಿ ವಿಭಜಿಸಿ ಪಾಠ ಬೋಧಿಸಲಾಗುತ್ತಿದೆ.



ಮಕ್ಕಳ ಶಾಲೆ ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಸೂಚಿಸಿ ದೆ.ಪ್ರತಿ ತರಗತಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಂಡ ರಚನೆ ಮಾಡಲಾಗುತ್ತದೆ.ಒಂದು ತಂಡದಲ್ಲಿ ಗರಿಷ್ಠ 20 ಮಕ್ಕಳು ಇರುವಂತೆ ಸೂಚನೆ ನೀಡಲಾಗಿದೆ.ವಾರ ದಲ್ಲಿ ಐದು ದಿನ ತರಗತಿ ಗಳು ನಡೆಯಲಿವೆ.ದಿನ ಬಿಟ್ಟು ದಿನ ಆನ್​ಲೈನ್ ಹಾಗೂ ಆಫ್​ಲೈನ್ ತರಗತಿಗಳು ನಡೆಯಲಿವೆ. ಮಕ್ಕ ಳು ಎರಡರಲ್ಲಿ ಯಾವುದಾರೂ ಒಂದು ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಎರಡನೇ ಹಂತದಲ್ಲಿ ಶಾಲೆ ತೆರೆದ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರ ಗತಿ ಪ್ರಾರಂಭಕ್ಕೆ ಪೋಷಕರು ಒತ್ತಾಯ ಮಾಡಿದ್ದಾರೆ.ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶಾಲೆ ಆರಂಭಿಸುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ.ಎರಡನೆ ಹಂತದ ಶಾಲೆಗಳ ತರಗತಿಗಳ ಫೀಡ್ ಬ್ಯಾಕ್ ಆಧರಿಸಿ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಪ್ರಾರಂಭಿಸುವ ಚಿಂತನೆ ಹೊಂದಿದೆ.

More News

You cannot copy content of this page