ಸರ್ಕಾರಿ ಕಚೇರಿಗಳಿಗೆ ಇಂಧನ ಸಚಿವರಿಂದ ಶಾಖ್.! ಪ್ರೀಪೈಡ್ ಮೀಟರ್ ಅಳವಡಿಕೆಗೆ – ಹಣ ಕಟ್ಟಿದ್ರೆ ಮಾತ್ರ ಕರೆಂಟ್

ಬೆಂಗಳೂರು : ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆ ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲಾಗದವರಿಗೆ ವಿದ್ಯುತ್ ಪೂರೈಕೆ ಮಾಡುವ ಕನಸನ್ನು ಸಿಎಂ ಹೊಂದಿದ್ದಾರೆ. ಆದ್ದರಿಂದ ಬೆಳಕು ಯೋಜನೆಯಡಿ ನೂರು ದಿನದೊಳಗೆ ಎನ್.ಓ.ಸಿ ಇಲ್ಲದೆ ವಿದ್ಯುತ್ ನೀಡಲು ನಿರ್ಧಾರಿಸಲಾಗಿದೆ ಎಂದು ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ನಿರ್ಮಿಸಲು ನಿರ್ಧರಿಸಲಾಗಿದೆ, ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡ ರೈತರಿದ್ದಾರೆ ಅವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. .

ನೀರಾವರಿ ನಿಗಮದ ಮೂಲಕ ಬೋರ್ ಕೊರೆದಿದ್ದು, ನಿಗಮದಿಂದ ಹಣ ಬರ್ತಿ ಮಾಡಬೇಕು. ನಿಗಮ ಹಣ ಪಾವತಿಸಿದ 30 ದಿನದಲ್ಲಿ ಸಂಪರ್ಕ ಕಲ್ಪಿಸಲು ನಿರ್ಧಾರಿಸಲಾಗಿದೆ. ಸರ್ಕಾರಿ ಕಚೇರಿಗೆ ಪ್ರೀಪೈಡ್ ಯೋಜನೆ ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.

ಸರ್ಕಾರಿ ಕಚೇರಿಗಳಿಗೆ ಇಂಧನ ಸಚಿವರು ಶಾಖ್ ನೀಡಿದ್ದಾರೆ. ಬಿಲ್ ಪಾವತಿಸದ ಹಿನ್ನೆಲೆ ಇಲಾಖೆಗೆ ನಷ್ಟವಾಗುತ್ತಿದೆ. ಇದನ್ನು ಸರಿದೂಗಿಸಲು ಪ್ರೀಪೈಡ್ ಮೀಟರ್ ಅಳವಡಿಕೆಗೆ ನಿರ್ಧಾರಿಸಲಾಗಿದೆ ಎಂದು ವಿವರಿಸಿದರು. ಹಣ ಕೊಟ್ಟು ರೀಚಾರ್ಜ್ ಮಾಡಿದ್ರೆ ಮಾತ್ರ, ಸರ್ಕಾರಿ ಕಚೇರಿಗಳಲ್ಲಿ ಕರೆಂಟ್., ಕೋಟ್ಯಾಂತರ ಬಿಲ್ ಬಾಕಿ ಇರೋದ್ರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಎಲೆಕ್ಟ್ರಿಕ್ ವೆಹಿಕಲ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದ್ದು, ಜಿಲ್ಲಾ ಕೇಂದ್ರ ಮತ್ತು ಪ್ರವಾಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಸೆಂಟರ್ ಶೀಘ್ರದಲ್ಲೇ ತೆರೆಯಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು.

ಪ್ರಶಸ್ತಿಗಾಗಿ ಅರ್ಜಿ ಹಾಕೋ ಸಂಸ್ಕೃತಿ ಕಡಿಮೆ ಆಗಬೇಕು, ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು, ಶಕ್ತಿ ಇರುವವರು ಬೆಂಗಳೂರಿಗೆ ಬಂದು ಅರ್ಜಿ ಹಾಕ್ತಾರೆ. ಇಲ್ಲದವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕಲಾವಿಧರನ್ನ ಗುರುತಿಸಲು  ಡಾಟಾ ಬ್ಯಾಂಕ್ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

More News

You cannot copy content of this page