ಮಗಳ ಆರತಕ್ಷತೆಯಲ್ಲಿ ಪಕ್ಷನಿಷ್ಠೆ,ಪ್ರೀತಿ ಮೊರೆತ : ಕೋವಿಡ್ ನಿಯಮ ಮರೆತ ಕೇಂದ್ರ ಸಚಿವ ಜೋಶಿ

ನವೆದೆಹಲಿ: ಕೋವಿಡ್ ನಿರ್ಬಂಧಗಳ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಮಗಳ ವಿವಾಹ,ಆರತಕ್ಷತೆ ಕಾರ್ಯಕ್ರಮ ಗಳನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ.ಮಗಳ ಮದುವೆ ಗಣ್ಯಾತಿಗಣ್ಯರ ಸಮಾಗಮಕ್ಕೆ ಸಾಕ್ಷಿಯಾಗಿತು.‌ಆದರೆ ಮಗಳ ವಿವಾಹ ದ ಸಂಭ್ರಮಕ್ಕೆ ಕೋವಿಡ್ ನಿಯಮಗಳನ್ನು ಮರೆತಂತಿದ್ದ ಕೇಂದ್ರ ಸಚಿವರು ವಿವಾಹ ವೇದಿಕೆಯಲ್ಲಿ ತಮ್ಮ‌ ಪಕ್ಷಪ್ರೇಮವನ್ನು ಮೆರೆದರು.

ಪ್ರಹ್ಲಾದ್ ಜೋಷಿ ಕೇಂದ್ರದ ಸಂಸದೀಯ ವ್ಯವಹಾರಗಳು,ಕಲ್ಲಿದ್ದಲು ಎಂಬ ಪ್ರಭಾವಿ ಖಾತೆಯ ಸಚಿವರು. ಸದ್ಯಕ್ಕೆ ಪ್ರಧಾನಿ ಮೋದಿ,ಅಮಿತ್ ಶಾ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕನ್ನಡಿಗ ಕೇಂದ್ರ ಸಚಿವ. ಅಂಥ ಪ್ರಭಾವಿ ಕೇಂದ್ರ ಸಚಿವರ ಪುತ್ರಿಯ ಮದುವೆ ಅಂದರೆ ಸಹಜವಾಗಿ ಆಡಂಬರ,ವಿಜ್ರಂಭಣೆ, ಅದ್ಧೂರಿತನಕ್ಕೆ ಕೊರತೆ ಇರುವುದಿಲ್ಲ.ಆದರೆ ಕೋವಿಡ್ ನ ಈ ಸಂದರ್ಭ ದಲ್ಲಿ,ಅನೇಕ ನಿರ್ಬಂಧಗಳ ಮಧ್ಯೆ ಕೇಂದ್ರ ಸಚಿವ ಜೋಶಿ ತಮ್ಮ ಮಗಳ ಮದುವೆಯನ್ನು ಕೋವಿಡ್ ನಿಯಮಗಳೊಂದಿಗೆ ನೆರ ವೇರಿಸುತ್ತಾರೆ ಎಂಬ ನಂಬಿಕೆ ಇತ್ತು.ಆದರೆ,ಮಗಳ‌ ಮದುವೆಯ ಸಂಭ್ರಮದಲ್ಲಿ ಕೇಂದ್ರ ಸಚಿವ ಜೋಶಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನಿಸಿದ್ದು ಸತ್ಯ.

ಹುಬ್ಬಳ್ಳಿಯಲ್ಲಿ ಮದುವೆ ಸಡಗರ,ಬೆಂಗಳೂರು ಹಾಗೂ ನವದೆಹಲಿಯಲ್ಲಿ ಆರತಕ್ಷತೆಯ ಆಡಂಬರ ನಡೆಸುವ ಮೂಲಕ ಜೋಶಿ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದರು.ನಡೆದ ಮೂರು ಪ್ರತ್ಯೇಕ ಸಮಾರಂಭಗಳಲ್ಲಿ ಪ್ರಧಾನಿ ಮೋದಿ,ರಾಜ್ಯದ ಮುಖ್ಯಮಂತ್ರಿ ಆದಿಯಾಗಿ ಕೇಂದ್ರ,ರಾಜ್ಯ ಸಚಿವರು,ವಿವಿಧ ಪಕ್ಷಗಳ ಗಣ್ಯಾತಿಗಣ್ಯರ ಸಮಾಗಮಕ್ಕೆ ವೇದಿಕೆಯಾಗಿತ್ತು.ಅಲ್ಲಿಗೆ ಕೇಂದ್ರ ಸಚಿವರು ತಮ್ಮ ಮಗಳ ಮದುವೆಯನ್ನು ಅದ್ಧೂರಿ ಸಡಗರದೊಂದಿಗೆ ಸಂಪನ್ನಗೊಳಿಸಿದರು.ಆದರೆ ಅದ್ಧೂರಿತನದ ಜೊತೆಗೆ ಕೋವಿಡ್ ನಿಯಮ ಪಾಲಿಸಿದ್ದರೆ ಕೇಂದ್ರ ಸಚಿವರ ಪುತ್ರಿ ಮದುವೆ ಸಾಮಾಜಿಕ ಕಳಕಳಿ ಜೊತೆಗೆ ಜನಮೆಚ್ಚುವ ಸಮಾರಂಭ ಆಗುತ್ತಿತ್ತು ಎಂಬುದನ್ನು ಅವರು ಕಡೆಗಣಿಸಿದಂತಿತ್ತು.

ಅರತಕ್ಷತೆ ವೇದಿಕೆಯಲ್ಲಿ ಪಕ್ಷನಿಷ್ಠೆ ಮೆರೆದ ಜೋಶಿ ..?! :

ತಮ್ಮ ಮಗಳ ಅದ್ಧೂರಿ ಮದುವೆಯಲ್ಲಿ ಕೇಂದ್ರ ಸಚಿವರು ತಮ್ಮ ಪಕ್ಷ ಪ್ರೇಮವನ್ನೂ ಮೆರೆದಿದ್ದಾರೆ. ಆರತಕ್ಷತೆಯ ವೇದಿಕೆಗೆ ಕಮಲದ ಸ್ಪರ್ಷ ನೀಡಿ ತಮ್ಮ‌ಪಕ್ಷ‌ನಿಷ್ಠೆ,ಪ್ರೇಮವನ್ನು ಪ್ರದರ್ಶಿಸಿದ್ದಾರೆ.‌

ವೇದಿಕೆ ಸಂಪೂರ್ಣ ಕಮಲಮಯವಾಗಿತ್ತು.ಪ್ರಧಾನಿ ಮೋದಿ,ಗೃಹ ಸಚಿವ ಅಮಿತ್ ಶಾ ಸೇರಿ ಪಕ್ಷದ ಪ್ರಮುಖ ನಾಯಕರ ಸಮಾಗ ಮಕ್ಕೆ ಸಾಕ್ಷಿಯಾಗಿದ್ದ ಪುತ್ರಿಯ ಆರತಕ್ಷತೆ ಮುಖ ಮಂಟಪಕ್ಕೆ ಕಮಲಾಲಂಕಾರವನ್ನು ಮಾಡಿದ್ದು ಎದ್ದು ಕಂಡಿರು.ವಧು-ವರರ ಹಿಂಭಾಗದಲ್ಲಿನ (ಸೆಟ್)ವೇದಿಕೆ ಬೃಹತ್ ಕಮಲದ ಚಿಹ್ನೆಯನ್ನು ಬಳಸಲಾಗಿತ್ತು.ಅಂತೆಯೇ ಸಣ್ಣ ಸಣ್ಣ ಬಾಕ್ಸ್ ಗಳಲ್ಲಿ ಕಮಲವ ನ್ನು ಅದರ ಹಿನ್ನಲೆ ಬಣ್ಣವಾಗಿ ಹಸಿರನ್ನು ಬಳಸಿ ರಚಿಸಲಾಗಿತ್ತು.

ಹೀಗೆ ಪ್ರಹ್ಲಾದ್ ಜೋಶಿ ಮಗಳ ಆರತಕ್ಷತೆಯ ವೇದಿಕೆಯನ್ನು ಪಕ್ಷದ ಚಿಹ್ನೆಯೊಂದಿಗೆ,ಪಕ್ಷ ಧ್ವಜ ಪ್ರತಿ ಬಿಂಬಸಿ ಪ್ರದರ್ಶಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಫಲರಾದರು.ಸಮಾರಂಭದ ಸಡಗರದಲ್ಲಿ ಎಲ್ಲೋ ಕೋವಿಡ್ ನಿಯಮವೆಂಬ ಜವಾಬ್ದಾರಿ ಮರೆತ ಪ್ರಹ್ಲಾದ್ ಜೋಶಿ,ಪಕ್ಷನಿಷ್ಠೆ,ಪ್ರೇಮ ಮೆರೆಯಲು ಮಾತ್ರ ಮರೆಯಲಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿ.

More News

You cannot copy content of this page