ರಾಹುಲ್ ಗಾಂಧಿ ಭೇಟಿಯಾದ ಮಧು ಬಂಗಾರಪ್ಪ: ಪ್ರಸ್ತುತ ರಾಜಕೀಯ ವಿದ್ಯಮಾನ ಕುರಿತು ಚರ್ಚೆ

ನವದೆಹಲಿ : ಇತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಮಾಜಿ‌ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಮಂಗಳವಾರ ‌ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೆಹಲಿ ನಿವಾಸದಲ್ಲಿ  ಭೇಟಿ ಮಾಡಿ ಚೆರ್ಚೆ ನಡೆಸಿದರು.

ಕಾಂಗ್ರೆಸ್ ಪಕ್ಷಕ್ಕೆ ಮದು ಬಂಗಾರಪ್ಪ ಸೇರ್ಪಡೆಯನ್ಬು ಸ್ವಾಗತಿಸಿದ ರಾಹುಲ್ ಗಾಂಧಿ  ದಿವಂಗತ ಮಾಜಿ  ಮುಖ್ಯಮಂತ್ರಿ ಬಂಗಾರಪ್ಪನವರು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಜತೆ ಹೊಂದಿರುವ ಸಂಬಂಧ,ಒಡನಾಟವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಬಂಗಾರಪ್ಪನವರ ಕಾಲಾವಧಿಯಲ್ಲಿ ಜಾರಿ ತಂದಿದ್ದ ಜನಪರ ಯೋಜನೆಗಳಾದ ಆಶ್ರಯ,ಆರಾಧನಾ,ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಕಾರ್ಯಗಳ ಕುರಿತು ಮಚ್ಚುಗೆ ವ್ಯಕ್ತಪಡಿಸಿದರು.ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ,ಪ್ರಸ್ತುತ. ರಾಜಕೀಯ ವಿದ್ಯುಮಾನಗಳ ಕುರಿತು ಸಲಹೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಜರಿದ್ದರು.

More News

You cannot copy content of this page