ನವದೆಹಲಿ : ಮುಂಬರುವ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ಬಿಸಿಸಿಐ ನೇಮಕ ಮಾಡಿದೆ.
ಬಿಸಿಸಿಐ ಆಡಳಿತ ಮಂಡಳಿಯ ಈ ನಡೆ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮತ್ತು ಅಚ್ಚರಿಯನ್ನುಂಟು ಮಾಡಿದೆ. 40 ವರ್ಷದ ಮಹೇಂದ್ರ ಸಿಂಗ್ ಧೋನಿ ಕಳೆದ ಸಾಲಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಅವರು ಕೇವಲ ಏಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಟವಾಡುತ್ತಿದ್ದಾರೆ.
ಭಾರತ ತಂಡದ ಮಾರ್ಗದರ್ಶಕರನ್ನಾಗಿ ಧೋನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ. ಧೋನಿಯವರೊಂದಿಗೆ ಈ ವಿಚಾರ ಸಂಬಂಧ ಈಗಾಗಲೇ ಚರ್ಚಿಸಲಾಗಿದೆ. ಅವರು ಈಹುದ್ದೆ ಅಲಂಕರಿಸಲು ಒಪ್ಪಿದ್ದಾರೆ ಎಂದು ಷಾ ತಿಳಿಸಿದ್ದಾರೆ.