ನವದೆಹಲಿ : ಆರಂಭದಿಂದ ಇದುವರೆಗೂ 27 ಲಕ್ಷಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು ಪೋರ್ಟಲ್ ನಲ್ಲಿ ಹೆಸರು ನೋಂದಾ ಯಿಸಿಕೊಂಡಿದ್ದಾರೆ.ಪೋರ್ಟಲ್ನಲ್ಲಿ ಕಾರ್ಮಿಕರನ್ನು ನೋಂದಾಯಿಸಲು ಭಾರತ ಸರಕಾರ ಎಲ್ಲಾ ರಾಜ್ಯ ಸರಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಅವರು ತಿಳಿಸಿದ್ದಾರೆ.
ಇ ಶ್ರಮ್ ಪೋರ್ಟಲ್ ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗ ಸಚಿವಾಲಯವು ವಿವಿಧ ಶಿಬಿರಗಳನ್ನು ಆಯೋಜಿಸುತ್ತಿದೆ.ಇಂತಹ ಒಂದು ಶಿಬಿರವನ್ನು ನವ ದೆಹಲಿಯ ʻಶ್ರಮ ಶಕ್ತಿ ಭವನʼದಲ್ಲಿ ಇಂದು ಆಯೋ ಜಿಸಲಾಗಿತ್ತು.ಕಟ್ಟಡದಲ್ಲಿರುವ ವಿವಿಧ ಸಚಿವಾಲ ಯಗಳಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿ ಸಲು ಶಿಬಿರ ಆಯೋಜಿ ಸಲಾಗಿದ್ದು,ಶಿಬಿರದಲ್ಲಿ 80ಕ್ಕೂ ಹೆಚ್ಚು ಕಾರ್ಮಿಕರು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ನಿರೀಕ್ಷೆ ಯಿದೆ.ಪೋರ್ಟಲ್ ಬಗ್ಗೆ ಮತ್ತು ಅದರಲ್ಲಿ ನೋಂದಾಯಿಸಿಕೊಳ್ಳುವುದರಿಂದ ದೊರೆಯುವ ಪ್ರಯೋಜನ ಗಳ ಬಗ್ಗೆ ಅರಿವು ಮೂಡಿಸುವಂತೆ ಪ್ರತಿಯೊಬ್ಬರನ್ನೂ ಅವರು ಕೋರಿದರು
ಎಲ್ಲಾ ಅಸಂಘಟಿತ ಕಾರ್ಮಿಕರ ಮಾಹಿತಿ ಒಳಗೊಂಡ ರಾಷ್ಟ್ರೀಯ ದತ್ತಾಂಶ ಭಂಡಾರವನ್ನು ಅನ್ನು ರಚಿಸುವುದರಿಂದ ಅಸಂಘ ಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಉದ್ದೇಶಿತರು ಮತ್ತು ತಳಮಟ್ಟ ದವರೆಗೂ ತಲುಪಿಸುವ ಬಗ್ಗೆ ಗಮನ ಹರಿಸಲು ಸರ ಕಾರಕ್ಕೆ ಸಹಾಯಕವಾಗಲಿದೆ.ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಲ್ಲಿ ಕಳೆದ ತಿಂಗಳು ಪ್ರಾರಂಭಿಸಲಾದ ʻಇ-ಶ್ರಮ್ʼ ಪೋರ್ಟಲ್ ಅನ್ನು ಕ್ರಾಂತಿಕಾರಿ ಎಂದು ಅವರು ತಿಳಿಸಿದರು.

ಪೋರ್ಟ್ ನಿಂದ ದೊರೆಯುವ ಪ್ರಯೋಜನಗಳನ್ನು ಪಟ್ಟಿ ಮಾಡಿದ ರಾಜ್ಯ ಸಚಿವರು,ಈ ಪೋರ್ಟ್ಲ್ನಲ್ಲಿ ನೋಂದಾಯಿಸಿ ಕೊಂಡ ವರಿಗೆ 2 ಲಕ್ಷ ರೂ.ಗಳ ಅಪಘಾತ ವಿಮೆ ದೊರೆಯಲಿದೆ. ʻಇ-ಶ್ರಮ್ʼ ಪೋರ್ಟಲ್ನಲ್ಲಿ ನೋಂದಣಿಯಾದ ಯಾವುದೇ ಕಾರ್ಮಿಕ ಅಪ ಘಾತಕ್ಕೀಡಾದರೆ,ಅವರು ಸಾವು ಅಥವಾ ಶಾಶ್ವತ ಅಂಗವೈ ಕಲ್ಯಕ್ಕೆ 2 ಲಕ್ಷ ರೂ.ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ.ವಿಮಾ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಜೊತೆಗೆ ನೋಂದಣಿಯ ನಂತರ ಕಾರ್ಮಿಕರಿಗೆ ಸಾರ್ವತ್ರಿಕ ಖಾತೆ ಸಂಖ್ಯೆ ಯನ್ನು (ಯುಎಎನ್) ಒದಗಿಸಲಾಗುತ್ತದೆ.ಇದು ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳು,ಪಡಿತರ ಚೀಟಿಗಳು ಇತ್ಯಾದಿಗ ಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುವ ಕೆಲಸವನ್ನು (ಪೋರ್ಟಬಿಲಿಟಿ) ಸುಲಭಗೊಳಿಸುತ್ತದೆ ಎಂದರು.