ಬೆಂಗಳೂರು : ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮ ವಾರ ಖಾಸಗಿ ಹೋಟೆಲಿನಲ್ಲಿ ಶಾಸಕಾಂಗ ಸಭೆ ಕರೆದಿದ್ದಾರೆ.

ಅಧಿವೇಶನದಲ್ಲಿ ಚೆರ್ಚಿಸಬೇಕಾದ ವಿಚಾರಗಳು,ಅಧಿವೇಶನದಲ್ಲಿ ಮಂಡಿಸಲಿರುವ ಕಾಯ್ದೆಗಳು, ಪ್ರಮು ಖ ನಿರ್ಣಯಗಳ ಬಗ್ಗೆ ಜೆಡಿಎಸ್ ನಿಲುವು,ಅನುದಾನ ಹಂಚಿಕೆ,ಯೋಜನೆಗಳು, ಕಾಮಗಾರಿಗಳ ಅನುಷ್ಠಾನ ದಲ್ಲಿ ಆಗುತ್ತಿರುವ ಸಮಸ್ಯೆಗಳು,ಜನರ ಸಂಕ ಷ್ಟ,ಕೋವಿಡ್ ಲಸಿಕೆ ಸೇರಿದಂತೆ ಪಕ್ಷದ ನೀತಿ ನಿಲುವುಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ಚೆರ್ಚೆ ನಡೆ ಸುವ ಸಾಧ್ಯತೆ ಇದೆ.
ಶಾಸಕಾಂಗ ಸಭೆಗೆ ಪಕ್ಷದ ಎಲ್ಲಾ ಶಾಸಕರು,ವಿಧಾನ ಪರಿಷತ್ ಸದಸ್ಯರು,ಪ್ರಮುಖ ನಾಯಕರು ತಪ್ಪದೆ ಭಾಗಹಿವಸುವಂತೆ ಜೆಡಿಎಸ್ ಪಕ್ಷದ ಮುಖ್ಯ ಸಚೇತಕ ವೆಂಟಕರಾವ್ ನಾಡಗೌಡ ಅವರು ಸಂದೇಶ ನೀಡಿದ್ದಾರೆ.