ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಇಲಕಲ್ ನಗರದ ವಿಜಯ ಚಿತ್ರಕಲಾ ಮಹಾ ವಿದ್ಯಾಲಯ, ಕಳೆದ ೨೯ ವರ್ಷಗಳಿಂದ ಒಂದಿಲ್ಲೊಂದು ವಿಶೇಷ ರೀತಿಯ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ. ಈ ಬಾರಿಯೂ ವಿಶೇಷ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ವಾಕ್ಸಿನ್ ಗಣೇಶನನ್ನು ತಯಾರಿಸಿ ವಿದ್ಯಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ಬಸವರಾಜ್ ಗವಿಮಠ್, ಉಪನ್ಯಾಸಕ ಮೌನೇಶ ಬಡಿಗೇರ ಮಾರ್ಗದರ್ಶನಲ್ಲಿ ಸುಮಾರು 50 ವಿದ್ಯಾರ್ಥಿಗಳು 48 ಗಂಟೆಗಳ ಕಾಲ ಸತತ ಶ್ರಮ ವಹಿಸಿ ವ್ಯಾಕ್ಸಿನ್ ಗಣೇಶನನ್ನು ತಯಾರಿ ಮಾಡಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾಕ್ಸಿನ್ ಗಣಪನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸುಮಾರು 1500 ಕ್ಕೂ ಹೆಚ್ಚು ಚುಚ್ಚುಮದ್ದುಗಳು, 400 ಕ್ಕೂ ಹೆಚ್ಚು ಔಷಧ ಬಾಟಲಿಗಳ ಬಳಕೆ ಮಾಡಿ ಈ ಗಣೇಶನ್ನು ತಯಾರಿಸಿದ್ದಾರೆ.
ವಾಕ್ಸಿನ್ ಗಣೇಶನ ಸುದ್ದಿ ತಿಳಿದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಈ ಗಣೇಶ ಈಗ ಜಾನಾಕರ್ಷಣೆಯ ಕೇಂದ್ರವಾಗಿದ್ದು, ಭಕ್ತಾಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ.