ಬಾಗಲಕೋಟೆ : ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಅದ್ದೂರಿ ಹುಟ್ಟುಹಬ್ಬವನ್ನ ಎಮ್ ಎಲ್ ಸಿ ಹನುಮಂತ ನಿರಾಣಿ ಆಚರಿಸಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ತಮ್ಮ 54ನೇ ಹುಟ್ಟ ಹಬ್ಬವನ್ನು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಇವರು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಸಹೋದರರಾಗಿದ್ದಾರೆ.

ಜನ್ಮ ದಿನದ ಕಾರ್ಯಕ್ರಮದಲ್ಲಿ ಭರ್ಜರಿ ಹಾಡು, ಕುಣಿತ, ಮೇಳೈಸಿತ್ತು. ಇಲ್ಲಿ ಯಾರೂಕೂಡ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ, ಮಾಸ್ಕ್ ಧರಿಸಿರಲಿಲ್ಲ , ಕೊರೊನಾದ ಎಲ್ಲಾ ಕಾನೂನುಗಳನ್ನುಗಾಳಿಗೆ ತೂರಿದ್ದಾರೆ.
ಇಷ್ಟು ಸಾಲದೆಂಬಂತೆ, ಸಾವಿರಾರು ಜನರು ಸೇರುವುದಕ್ಕಾಗಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ನಿರಾಣಿ ಬೆಂಬಲಿಗರು ಹಾಡಿಗೆ ಡ್ಯಾನ್ಸ್ ಮಾಡಿ ಮೈಮರೆತಿದ್ದರು.
ಸರ್ಕಾರ ರೂಪಿಸಿರುವ ಯಾವುದೇ ಕಾನೂನುನನ್ನು ನಿರಾಣಿ ಸೇರಿದಂತೆ ನಿರಾಣಿ ಬೆಂಬಲಿಗರು ಪಾಲಿಸಲಿಲ್ಲ. ಹಾಗೆಯೇ, ಅವರು ಎಲ್ಲಾ ಸರ್ಕಾರ ರಚಿಸಿರುವ ಕಾನೂನುಗಳು ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದರು. ಸರ್ಕಾರದ ಕಾನೂನುನನ್ನು ಜನಸಮಾನ್ಯರು ಮಾತ್ರ ಪಾಲಿಸುವಂತಾಗಿದೆ. ಜನಸಾಮಾನ್ಯರು ಇಂತಹ ಕಾರ್ಯಕ್ರಮ ನಡೆಸಿದರೆ ಇಷ್ಟು ಹೊತ್ತಿಗೆ ಅವರ ಮೇಲೆ ಕಾನೂನುಕ್ರಮ ಜರುಗಿಸಲಾಗುತ್ತಿತ್ತು. ಆದರೆ, ಇಲ್ಲಿ ಜನಪ್ರತಿನಿಧಿಯ ಕಾರ್ಯಕ್ರಮವಾಗಿರುವುದರಿಂದ ಸ್ಥಳೀಯ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ.