ಆಂಧ್ರಪ್ರದೇಶ : ತೆಲುಗು ಯುವ ನಟ ಸಾಯಿ ಧರ್ಮ ತೇಜ ಸ್ಥಿತಿ ಸ್ಥಿರವಾಗಿದ್ದು, ಆಂಧ್ರಪ್ರದೇಶದ ಅಪೋಲೋ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಅವರು ಸ್ಪಂದಿಸುತ್ತಿದ್ದಾರೆ ಆಸ್ಪತ್ರೆ ಹೊರಡಿಸಿರುವ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ.
ಧರ್ಮ ತೇಜ ಅವರ ಕೊರಳೆಲುಬು ಮುರಿತಕ್ಕೊಳಗಾಗಿದೆ, ಮೆದುಳು ಸೇರಿದಂತೆ ಇನ್ನಿತರ ಯಾವುದೇ ಭಾಗದಲ್ಲಿ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಯುವ ನಟ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಸಹೋದರ ಅಳಿಯನಾಗಿದ್ದು, ಅವರು ನಿನ್ನೆ ರಾತ್ರಿ ಹೈದ್ರಬಾದ್ ನ ಮಾದಾಪುರದಲ್ಲಿ ರಸ್ತೆ ಅಫಾಘಾತಕ್ಕೊಳ್ಳಗಾಗಿದ್ದರು. ಅವರ ಸ್ಪೋರ್ಟ್ಸ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಆಯತಪ್ಪಿ ಅವರು ಅಪಘಾತಕ್ಕೊಳ್ಳಗಾಗಿದ್ದರು.
ಮಾದಾಪುರ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ. ನಟರಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಆಸ್ಪತ್ರೆಗೆ ತೆರಳಿ ಧರ್ಮ ತೇಜ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಾಯಿ ಧರ್ಮ ತೇಜ ಅವರ ಲಕ್ಷಾಂತರ ಅಭಿಮಾನಿಗಳು ತೇಜ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.