ಬೆಂಗಳೂರು : ದೇಶದಲ್ಲಿ ಕೊರೊನಾ ಮೂರನೇ ಅಲೆ ಕಡಿಮೆಯಾಗುತ್ತಿದ್ದಂತೆ, ರಾಜ್ಯ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನೂ ಹಂತ ಹಂತವಾಗಿ ಸಡಿಲಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಸುಮಾರು 18ತಿಂಗಳಿಂದ ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದ ಐಟಿ ಕಂಪನಿಗಳು ಹಂತ ಹಂತವಾಗಿ ನೌಕರರನ್ನು ಕಚೇರಿಗೆ ಬರುವಂತೆ ಸೂಚನೆ ನೀಡುತ್ತಿದೆ.

ಅದರಂತೆಯೇ, ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನ ಮತ್ತೆ ಕಚೇರಿಗೆ ಬರುವಂತೆ ತಿಳಿಸಿವೆ. ಅದರಂತೆಯೇ ಐಟಿ ವಲಯದ ವಿಪ್ರೋ ಸಂಸ್ಥೆ ತನ್ನ ಉದ್ಯೋಗಿಗಳನ್ನು ಸೋಮವಾರದಿಂದ ವಾರಕ್ಕೆ ಎರಡು ಬಾರಿ ಕಚೇರಿಗೆ ಬರುವಂತೆ ತಿಳಿಸಿದೆ. ನಾಳೆಯಿಂದ ವಿಪ್ರೋ ಎಂದಿನಂತೆ ಕಚೇರಿಯಿಂದಲೇ ಕಾರ್ಯಾರಂಭ ಮಾಡಲಿದೆ.
ಈ ಕುರಿತು ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ ಜಿ ಅವರು ಟ್ವಿಟರ್ʼನಲ್ಲಿ ಟ್ವೀಟ್ ಮಾಡಿದ್ದು, ’18 ಸುದೀರ್ಘ ತಿಂಗಳ ನಂತರ, ನಮ್ಮ ನಾಯಕರು (ವಾರಕ್ಕೆ ಎರಡು ಬಾರಿ) ಕಚೇರಿಗೆ ಮರಳುತ್ತಿದ್ದಾರೆ. ಎಲ್ಲರೂ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ, ಎಲ್ಲರೂ ಕಛೇರಿಗೆ ಹೋಗಲು ಸಿದ್ಧರಾಗಿದ್ದಾರೆ – ಸುರಕ್ಷಿತವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಲಿದ್ದಾರೆ. ನಾವು ಇದನ್ನ ಸೂಕ್ಷ್ಮವಾಗಿ ಗಮನಿಸುತ್ತೇವೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.